ADVERTISEMENT

ಕ್ರಿಕೆಟ್‌: ಸರ್ಮರ್ಥ್ ಶತಕ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST

ಬೆಂಗಳೂರು: ಆರ್‌.ಸಮರ್ಥ್‌ (124) ಅವರ ಅಬ್ಬರದ ಶತಕದ ಬಲದಿಂದ ಸ್ವಸ್ತಿಕ್ ಯೂನಿಯನ್ ಕ್ಲಬ್‌ (1) ತಂಡ ಇಲ್ಲಿ ನಡೆಯುತ್ತಿರುವ ವೈ.ಎಸ್.ರಾಮಸ್ವಾಮಿ ಸ್ಮಾರಕ ಕೆಎಸ್‌ಸಿಎ ವತಿಯ ಕ್ರಿಕೆಟ್‌ ಪಂದ್ಯದಲ್ಲಿ 15 ರನ್‌ಗಳಿಂದ ಸೈಯದ್ ಕ್ರಿಕೆಟರ್ಸ್ ಎದುರು ಗೆದ್ದಿದೆ.

ಸ್ವಸ್ತಿಕ್ ಯೂನಿಯನ್ ತಂಡದ ಬ್ಯಾಟ್ಸ್‌ಮನ್ ಆರ್‌.ಸಮರ್ಥ್‌ (124, 120ಎ, 15ಬೌಂ,4ಸಿ) ಸ್ಫೋಟಕ ಶತಕ ದಾಖಲಿಸಿದರು. ಸಿ.ಎಮ್‌. ಗೌತಮ್ ಅರ್ಧಶತಕದಿಂದ ತಂಡಕ್ಕೆ ಆಸರೆಯಾದರು.

ಸಂಕ್ಷಿಪ್ತ ಸ್ಕೋರು: ಸ್ವಸ್ತಿಕ್ ಯೂನಿಯನ್ ಕ್ಲಬ್‌ (1): 50 ಓವರ್‌ಗಳಲ್ಲಿ 7 ವಿಕೆಟ್‌ಗೆ 289 (ಆರ್‌.ಸಮರ್ಥ್‌ 124, ಸಿ.ಎಮ್‌.ಗೌತಮ್‌ 55, ಜೋನಾಥನ್‌ 38, ಗೌರವ್‌ 50ಕ್ಕೆ2, ಕುಶಾಲ್‌ 50ಕ್ಕೆ2, ಸೂರಜ್‌ ಶೇಶಾದ್ರಿ 43ಕ್ಕೆ2). ಸೈಯದ್ ಕ್ರಿಕೆಟರ್ಸ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 274 (ಪರೀಕ್ಷಿತ್‌ 66, ಶ್ರೀಕಾರ 35, ಮನೋಜ್ ಭಂಡಾಜೆ 55, ಮೋಹಿತ್‌ 31, ವಿನಿತ್ ಯಾದವ್‌ 40, ಎಮ್‌.ಜಿ ನವೀನ್‌ 48ಕ್ಕೆ3, ಶ್ರೇಯಸ್ ಗೋಪಾಲ್‌ 30ಕ್ಕೆ3). ಫಲಿತಾಂಶ: ಸ್ವಸ್ತಿಕ್ ಯೂನಿಯನ್ ಕ್ಲಬ್‌ (1) ತಂಡಕ್ಕೆ 15 ರನ್‌ಗಳ ಜಯ.

ADVERTISEMENT

ದಿ ಬೆಂಗಳೂರು ಕ್ರಿಕೆಟರ್ಸ್‌: 23 ಓವರ್‌ಗಳಲ್ಲಿ 113. ವಲ್ಚರ್ಸ್ ಕ್ಲಬ್‌: 14.3 ಓವರ್‌ಗಳಲ್ಲಿ 1 ವಿಕೆಟ್‌ಗೆ 117. ಫಲಿತಾಂಶ: ವಲ್ಚರ್ಸ್ ಕ್ಲಬ್‌ಗೆ 9 ವಿಕೆಟ್‌ಗಳ ಜಯಭೇರಿ.

ಮೌಂಟ್ ಜಾಯ್ ಕ್ಲಬ್‌: 47 ಓವರ್‌ಗಳಲ್ಲಿ 276. ಕೇಂಬ್ರಿಜ್‌ ಕ್ಲಬ್‌: 48.1 ಓವರ್‌ಗಳಲ್ಲಿ 7 ವಿಕೆಟ್‌ಗೆ 277. ಫಲಿತಾಂಶ: ಕೇಂಬ್ರಿಜ್ ಕ್ಲಬ್‌ಗೆ 3 ವಿಕೆಟ್‌ಗಳ ಜಯ.

ಹೆರಾನ್ಸ್‌ ಕ್ಲಬ್‌: 50 ಓವರ್‌ಗಳಲ್ಲಿ 240. ಬೆಂಗಳೂರು ಅಕೇಷನಲ್ಸ್‌: 47.2 ಓವರ್‌ಗಳಲ್ಲಿ 9 ವಿಕೆಟ್‌ಗೆ 242. ಫಲಿತಾಂಶ: ಬೆಂಗಳೂರು ಅಕೇಷನಲ್ಸ್‌ ತಂಡಕ್ಕೆ 1 ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.