ADVERTISEMENT

ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್‌: ದಾಸನ್‌ಗೆ ಕಂಚು

ಪಿಟಿಐ
Published 2 ಫೆಬ್ರುವರಿ 2018, 19:30 IST
Last Updated 2 ಫೆಬ್ರುವರಿ 2018, 19:30 IST

ಟೆಹರಾನ್ (ಪಿಟಿಐ): ಭಾರತದ ಎಲಕಿಯಾ ದಾಸನ್ ಇಲ್ಲಿ ನಡೆಯುತ್ತಿರುವ ಏಷ್ಯನ್ ಒಳಾಂಗಣ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಪುರುಷರ 60 ಮೀಟರ್ಸ್‌ ಓಟದಲ್ಲಿ ದಾಖಲೆ ಬರೆದು ಕಂಚಿನ ಪದಕ ಪಡೆದರು.

ಈ ಸ್ಪರ್ಧೆಯಲ್ಲಿ 6.67 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ದಾಸನ್ ಅವರು  ಒಂಬತ್ತು ವರ್ಷಗಳ ಹಿಂದಿನ ದಾಖಲೆ ಮುರಿದರು. 2009ರಲ್ಲಿ ಸಮೀರ್ ಮಾನ್ ಅವರು 6.87 ಸೆಕೆಂಡುಗಳಲ್ಲಿ ಗುರಿ ತಲುಪಿದ್ದ ದಾಖಲೆ ಬರೆದಿದ್ದರು.

ದಾಸನ್ ಅವರಿಗೆ ಸ್ಪರ್ಧೆಯೊಡ್ಡಿದ  ಸ್ಥಳೀಯ ಅಥ್ಲೀಟ್ ತಫ್ತಿಯಾನ್ ಅವರು 6.51 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಮತ್ತು 6.63 ಸೆಕೆಂಡುಗಳಲ್ಲಿ ಜಯದ ಗೆರೆ ಮೆಟ್ಟಿದ ಕತಾರ್‌ನ ಒಗುನೊಡ್ ಟಾಸಿನ್‌ಜೊಸೆಫ್ ಅವರು ಬೆಳ್ಳಿಪದಕ ಪಡೆದರು. ಇವರಿಬ್ಬರೂ ಕೂಡ ನೂತನ ಕೂಟ ದಾಖಲೆ ಬರೆದರು.

ADVERTISEMENT

ಚಳಿಗಾಲದ ಒಲಿಂಪಿಕ್ಸ್‌ಗೆ ಕೇಶವನ್, ಜಗದೀಶ್

ನವದೆಹಲಿ (ಪಿಟಿಐ): ಭಾರತದ ಶಿವಕೇಶವನ್ ಮತ್ತು ಜಗದೀಶ್ ಸಿಂಗ್ ಅವರು ದಕ್ಷಿಣ ಕೊರಿಯಾದ ಯಾಂಗ್‌ಚಾಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವರು.

36 ವರ್ಷದ ಕೇಶವನ್ ಅವರು ಅರನೇ ಬಾರಿ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ಧಾರೆ. ಅವರು ಲುಗ್‌ (ಐಸ್‌ ಸ್ಕೇಟಿಂಗ್‌ನ ಒಂದು ವಿಭಾಗ) ಸ್ಪರ್ಧೆಯಲ್ಲಿ ಭಾಗವಹಿಸುವರು.

ಜಗದೀಶ್ ಅವರು ಸ್ಕೀಯಿಂಗ್  ಸ್ಪರ್ಧೆಯಲ್ಲಿ ಆಡಲಿದ್ದಾರೆ. ಅವರು ಇದೇ ಮೊದಲ ಬಾರಿ ಚಳಿಗಾಲದ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.