ADVERTISEMENT

ಅಖಿಲ ಭಾರತ ವಿವಿ ಬಾಲ್‍ಬ್ಯಾಡ್ಮಿಂಟನ್: ಮಂಗಳೂರು ವಿವಿ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST
ರೇಖಾ, ಯಶಸ್ವಿನಿ, ಪಲ್ಲವಿ, ಆಗ್ರ್ಯಾ ಎಂ.ಆರ್‌. (ಎಡದಿಂದ ಬಲಕ್ಕೆ ಕುಳಿತವರು), ಕವನಾ, ತೇಜಶ್ರೀ, ಜಯಲಕ್ಷ್ಮಿ, ಸುಶ್ಮೀತಾ, ದೀವ್ಯಾ, ಲಾವಣ್ಯ (ಎಡದಿಂದ ಬಲಕ್ಕೆ ನಿಂತವರು) ಅವರು ಟ್ರೋಫಿ ಜತೆಗೆ ಸಂಭ್ರಮಿಸಿದರು.
ರೇಖಾ, ಯಶಸ್ವಿನಿ, ಪಲ್ಲವಿ, ಆಗ್ರ್ಯಾ ಎಂ.ಆರ್‌. (ಎಡದಿಂದ ಬಲಕ್ಕೆ ಕುಳಿತವರು), ಕವನಾ, ತೇಜಶ್ರೀ, ಜಯಲಕ್ಷ್ಮಿ, ಸುಶ್ಮೀತಾ, ದೀವ್ಯಾ, ಲಾವಣ್ಯ (ಎಡದಿಂದ ಬಲಕ್ಕೆ ನಿಂತವರು) ಅವರು ಟ್ರೋಫಿ ಜತೆಗೆ ಸಂಭ್ರಮಿಸಿದರು.   

ಮಂಗಳೂರು: ಆಂಧ್ರಪ್ರದೇಶದ ಕುಪ್ಪಂ ದ್ರಾವಿಡಿಯನ್ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ ವಿವಿ ಮಹಿಳಾ ಬಾಲ್‍ಬ್ಯಾಡ್ಮಿಂಟನ್ ಚಾಂಪಿಯನ್‍ಷಿಪ್‍ನಲ್ಲಿ ಮಂಗಳೂರು ವಿವಿ 4ನೇ ಬಾರಿ ಚಾಂಪಿಯನ್ ಆಗಿದೆ.

ಕ್ವಾರ್ಟರ್ ಫೈನಲ್‍ನಲ್ಲಿ ಮಂಗಳೂರು ವಿವಿ ತಂಡವು ಮದುರೈ ಕಾಮರಾಜ್ ವಿವಿ ತಂಡದ ವಿರುದ್ಧ 35-16, 35-16 ಸೇಟ್‌ಗಳ ಅಂತರದಿಂದ ಸೋಲಿಸಿ ಅಖಿಲ ಭಾರತ ವಿವಿ ಚಾಂಪಿಯನ್‍ಷಿಪ್‍ನ ಲೀಗ್‍ ಹಂತಕ್ಕೆ ಅರ್ಹತೆ ಪಡೆಯಿತು.

ಲೀಗ್ ಹಂತದ ಪಂದ್ಯಗಳಲ್ಲಿ ಮಂಗಳೂರು ವಿವಿ ತಂಡವು ತಮಿಳುನಾಡಿನ ಎಸ್‌ಆರ್‌ಎಂ ವಿವಿ ತಂಡದ ವಿರುದ್ಧ 35-31, 35-28 ಅಂತರದಲ್ಲಿ ಗೆಲುವು ಸಾಧಿಸಿತು.

ADVERTISEMENT

2ನೇ ಲೀಗ್ ಪಂದ್ಯದಲ್ಲಿ ಮದ್ರಾಸ್ ವಿವಿ ವಿರುದ್ಧ 35-24, 35-20 ಅಂಕಗಳ ಜಯ ಸಾಧಿಸಿತು.

ಅಂತಿಮ ಹಂತದ ಲೀಗ್ ಪಂದ್ಯದಲ್ಲಿ ಮಂಗಳೂರು ವಿವಿ ತಂಡವು  ಚೆನ್ನೈನ ಬಿಎಸ್‌ಎಆರ್‌ ವಿವಿ ತಂಡದ ವಿರುದ್ಧ 35-28, 35-17 ನೇರ್‌ ಸೆಟ್‌ಗಳ ಅಂತರದ ಗೆಲುವು ಸಾಧಿಸಿತು.

ರಾಷ್ಟ್ರದ ಸುಮಾರು 74 ವಿವಿ ತಂಡಗಳು ಈ ಚಾಂಪಿಯನ್‍ಷಿಪ್‍ನಲ್ಲಿ ಭಾಗವಹಿಸಿದ್ದು, ಮಂಗಳೂರು ವಿ.ವಿ. ತಂಡದ ನೇತೃತ್ವವನ್ನು ಸ್ಟಾರ್ ಆಫ್ ಇಂಡಿಯಾ ಆಟಗಾರ್ತಿ ಜಯಲಕ್ಷ್ಮೀ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.