ADVERTISEMENT

ಅಮೋಲ್‌ ಮಜುಂದಾರ್ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಕೋಚ್

ಪಿಟಿಐ
Published 9 ಸೆಪ್ಟೆಂಬರ್ 2019, 13:21 IST
Last Updated 9 ಸೆಪ್ಟೆಂಬರ್ 2019, 13:21 IST
ಅಮೋಲ್ ಮಜುಂದಾರ್
ಅಮೋಲ್ ಮಜುಂದಾರ್   

ನವದೆಹಲಿ: ಮುಂಬೈನ ಅಮೋಲ್ ಮಜುಂದಾರ್ ಅವರನ್ನು ಭಾರತದ ವಿರುದ್ಧ ಟೆಸ್ಟ್ ಸರಣಿ ಆಡಲಿರುವ ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಅಕ್ಟೋಬರ್‌ ಎರಡರಿಂದ ವಿಶಾಖಪಟ್ಟಣದಲ್ಲಿ ನಡೆಯಲಿದೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಿಂಚಿದ್ದ ಅಮೋಲ್ ಮಜುಂದಾರ್ 48.13ರ ಸರಾಸರಿಯಲ್ಲಿ 11,167 ರನ್ ಕಲೆ ಹಾಕಿದ್ದರು. ಲಿಸ್ಟ್ ‘ಎ’ ಮಾದರಿಯಲ್ಲಿ 3286 ರನ್ ಗಳಿಸಿದ್ದರು. ಆದರೆ ಭಾರತ ತಂಡದಲ್ಲಿ ಸ್ಥಾನ ಗಳಿಸಲು ಸಾಧ್ಯವಾಗಿರಲಿಲ್ಲ. ಅವರಿಗೆ ಈಗ 44 ವರ್ಷ. ಮುಂಬೈಗಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ್ದ ಅಮೋಲ್ ನಂತರ ಅಸ್ಸಾಂ ಮತ್ತು ಆಂಧ್ರಪ್ರದೇಶ ತಂಡಗಳನ್ನು ಪ್ರತಿನಿಧಿಸಿದ್ದರು. ಐಪಿಎಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.

‘ಕಳೆದ ವಾರವೇ ನನ್ನನ್ನು ನೇಮಕ ಮಾಡಲಾಗಿದೆ. ಇದು ಉತ್ತಮ ಅವಕಾಶವಾಗಿದ್ದು ಈ ಸವಾಲನ್ನು ಖುಷಿಯಿಂದಲೇ ಸ್ವೀಕರಿಸಿದ್ದೇನೆ. ದಕ್ಷಿಣ ಆಫ್ರಿಕಾದಂಥ ತಂಡದ ಜೊತೆ ಕಾರ್ಯನಿರ್ವಹಿಸುವುದು ಸಂತಸದ ವಿಷಯ’ ಎಂದು ಅವರು ಅಮೋಲ್ ಅಭಿಪ್ರಾಯಪಟ್ಟರು.

ADVERTISEMENT

ಭಾರತ ಎದುರಿನ ಸರಣಿಗೆ ಮಾತ್ರ ಕೋಚ್ ಆಗಿ ನೇಮಕ ಮಾಡಿರುವುದರಿಂದ ಮಜುಂದಾರ್ ಅವರ ಮೇಲೆ ದೊಡ್ಡ ಹೊಣೆ ಇದೆ. 2015ರಲ್ಲಿ ಭಾರತದಲ್ಲಿ ನಡೆದ ಏಕದಿನ ಮತ್ತು ಟ್ವೆಂಟಿ –20 ಸರಣಿಯಲ್ಲಿ ಗೆದ್ದಿದ್ದ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಸರಣಿಯಲ್ಲಿ 0–3ರಲ್ಲಿ ಸೋತಿತ್ತು. ಹೀಗಾಗಿ ಈ ಬಾರಿಯೂ ತಂಡ ಭರವಸೆಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.