ADVERTISEMENT

ಕ್ರಿಕೆಟ್‌: ಅಲ್ಪ ಮೊತ್ತಕ್ಕೆ ಕುಸಿದ ಲಂಕಾ

ಏಜೆನ್ಸೀಸ್
Published 24 ಜನವರಿ 2019, 18:43 IST
Last Updated 24 ಜನವರಿ 2019, 18:43 IST
ಸಹ ಆಟಗಾರನೊಂದಿಗೆ ಸಂಭ್ರಮಿಸಿದ ಪ್ಯಾಟ್‌ ಕಮಿನ್ಸ್‌ (ಬಲ)– ಎಎಫ್‌ಪಿ ಚಿತ್ರ
ಸಹ ಆಟಗಾರನೊಂದಿಗೆ ಸಂಭ್ರಮಿಸಿದ ಪ್ಯಾಟ್‌ ಕಮಿನ್ಸ್‌ (ಬಲ)– ಎಎಫ್‌ಪಿ ಚಿತ್ರ   

ಬ್ರಿಸ್ಬೇನ್‌ : ಪ್ಯಾಟ್‌ ಕಮಿನ್ಸ್‌ (39ಕ್ಕೆ4) ಮತ್ತು ಜೈ ರಿಚರ್ಡ್‌ಸನ್‌ (26ಕ್ಕೆ3) ಅವರ ದಾಳಿಗೆ ತಬ್ಬಿಬ್ಬಾದ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದಿದೆ.

ಗಾಬಾ ಮೈದಾನದಲ್ಲಿ ಗುರುವಾರ ಮೊದಲು ಬ್ಯಾಟ್‌ ಮಾಡಿದ ಸಿಂಹಳೀಯ ನಾಡಿನ ತಂಡ 56.4 ಓವರ್‌ಗಳಲ್ಲಿ 144ರನ್‌ಗಳಿಗೆ ಆಲೌಟ್‌ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್‌ ಶುರು ಮಾಡಿರುವ ಆಸ್ಟ್ರೇಲಿಯಾ, ದಿನದಾಟದ ಅಂತ್ಯಕ್ಕೆ 25 ಓವರ್‌ಗಳಲ್ಲಿ 2 ವಿಕೆಟ್‌ಗೆ 72ರನ್‌ ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ, ಮೊದಲ ಇನಿಂಗ್ಸ್‌: 56.4 ಓವರ್‌ಗಳಲ್ಲಿ 144 (ದಿಮುತ್‌ ಕರುಣಾರತ್ನೆ 24, ಲಾಹಿರು ತಿರಿಮಾನ್ನೆ 12, ಕುಶಾಲ್‌ ಮೆಂಡಿಸ್‌ 14, ನಿರೋಷನ್‌ ಡಿಕ್ವೆಲ್ಲಾ 64; ಮಿಷೆಲ್‌ ಸ್ಟಾರ್ಕ್‌ 41ಕ್ಕೆ2, ಜೈ ರಿಚರ್ಡ್‌ಸನ್‌ 26ಕ್ಕೆ3, ಪ್ಯಾಟ್‌ ಕಮಿನ್ಸ್‌ 39ಕ್ಕೆ4, ನೇಥನ್‌ ಲಯನ್‌ 38ಕ್ಕೆ1).

ADVERTISEMENT

ಆಸ್ಟ್ರೇಲಿಯಾ: ಪ್ರಥಮ ಇನಿಂಗ್ಸ್‌: 25 ಓವರ್‌ಗಳಲ್ಲಿ 2 ವಿಕೆಟ್‌ಗೆ 72 (ಮಾರ್ಕಸ್‌ ಹ್ಯಾರಿಸ್‌ ಬ್ಯಾಟಿಂಗ್‌ 40, ಜೋ ಬರ್ನ್ಸ್‌ 15, ಉಸ್ಮಾನ್‌ ಖ್ವಾಜಾ 11; ಸುರಂಗ ಲಕ್ಮಲ್‌ 27ಕ್ಕೆ1, ದಿಲ್ರುವಾನ ಪೆರೇರಾ 4ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.