ADVERTISEMENT

ಬಾಬರ್ ಶತಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಮೇ 2019, 18:26 IST
Last Updated 24 ಮೇ 2019, 18:26 IST
ಪಾಕಿಸ್ತಾನ ತಂಡದ ಬಾಬರ್ ಆಜಂ ಬ್ಯಾಟಿಂಗ್ ವೈಖರಿ  –ಎಎಫ್‌ಪಿ ಚಿತ್ರ
ಪಾಕಿಸ್ತಾನ ತಂಡದ ಬಾಬರ್ ಆಜಂ ಬ್ಯಾಟಿಂಗ್ ವೈಖರಿ  –ಎಎಫ್‌ಪಿ ಚಿತ್ರ   

ಬ್ರಿಸ್ಟಲ್: ಬಾಬರ್ ಅಜಂ (112; 108ಎಸೆತ, 10ಬೌಂಡರಿ, 2ಸಿಕ್ಸರ್) ಅವರ ಅಬ್ಬರದ ಶತಕ ವ್ಯರ್ಥವಾಯಿತು. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಅಫ್ಗಾನಿಸ್ತಾನ ಮೂರು ವಿಕೆಟ್‌ಗಳಿಂದ ಮಣಿಸಿತು.

ಶುಕ್ರವಾರ ಬ್ರಿಸ್ಟಲ್‌ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಪಾಕ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 47.5 ಓವರ್‌ಗಳಲ್ಲಿ 262 ರನ್‌ ಪೇರಿಸಿತು. ಬಾಬರ್ ಆಜಂ ಅವರನ್ನು ಹೊರತು ಪಡಿಸಿದರೆ ಶೋಯಬ್ ಮಲಿಕ್ (44; 59 ಎ, 1ಸಿ, 4 ಬೌಂ) ಮಾತ್ರ ಮಿಂಚಿದರು.

ಗುರಿ ಬೆನ್ನತ್ತಿದ ಅಫ್ಗಾನಿಸ್ತಾನ 49.4 ಓವರ್‌ಗಳಲ್ಲಿ ನಿರಾಯಾಸವಾಗಿ ಗೆಲುವು ಸಾಧಿಸಿತು. ಮೊದಲ ವಿಕೆಟ್‌ಗೆ ಮೊಹಮ್ಮದ್ ಶೆಹಜಾದ್ ಮತ್ತು ಹಜ್ರತ್ ಉಲ್ಲಾ ಜಜಾರಿ 80 ರನ್‌ಗಳನ್ನು ಸೇರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮಧ್ಯಮ ಕ್ರಮಾಂಕದ ಹಶ್ಮತ್ ಉಲ್ಲಾ ಶಾಹಿದಿ ಅಜೇಯ ಅರ್ಧಶತಕ (74; 102 ಎ, 7 ಬೌಂ) ಗಳಿಸಿದ ಗೆಲುವಿನ ರೂವಾರಿ ಎನಿಸಿದರು.

ADVERTISEMENT

ಸಂಕ್ಷಿಪ್ತ ಸ್ಕೋರು:

ಪಾಕಿಸ್ತಾನ: 47.5 ಓವರ್‌ಗಳಲ್ಲಿ 262 (ಇಮಾಮ್ ಉಲ್ ಹಕ್ 32, ಬಾಬರ್ ಅಜಂ 112, ಶೋಯಬ್ ಮಲಿಕ್ 44; ಮೊಹಮ್ಮದ್ ನಬಿ 46ಕ್ಕೆ3, ದೌಲತ್ ಜದ್ರಾನ್ 37ಕ್ಕೆ2, ರಶೀದ್ ಖಾನ್ 27ಕ್ಕೆ2); ಅಫ್ಗಾನಿಸ್ತಾನ: 49.4 ಓವರ್‌ಗಳಲ್ಲಿ 7ಕ್ಕೆ 263 (ಹಜರತ್ ಉಲ್ಲಾ ಜಜಾರಿ 49, ರಹಮತ್ ಶಾ 32, ಹಶ್ಮತ್ ಉಲ್ಲಾ ಶಾಹಿದಿ ಅಜೇಯ 74, ಮೊಹಮದ್ ನಬಿ 34; ವಹಾಬ್ ರಿಯಾಜ್ 46ಕ್ಕೆ3, ಇಮದ್ ವಾಸಿಂ 29ಕ್ಕೆ2). ಫಲಿತಾಂಶ: ಅಫ್ಗಾನಿಸ್ತಾನ ತಂಡಕ್ಕೆ 3 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.