ADVERTISEMENT

ಕೂಚ್‌ ಬೆಹಾರ್ ಟ್ರೋಫಿ: ನಾಕೌಟ್ ಪಂದ್ಯಗಳು ಮುಂದಕ್ಕೆ

ಪಿಟಿಐ
Published 10 ಜನವರಿ 2022, 13:18 IST
Last Updated 10 ಜನವರಿ 2022, 13:18 IST
ಬಿಸಿಸಿಐ ಲೋಗೊ
ಬಿಸಿಸಿಐ ಲೋಗೊ   

ಮುಂಬೈ: ಆಟಗಾರರು ಮತ್ತು ಸಿಬ್ಬಂದಿಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) 19 ವರ್ಷದೊಳಗಿನವರ ಕೂಚ್‌ ಬೆಹಾರ್ ಟ್ರೋಫಿ ಟೂರ್ನಿಯ ನಾಕೌಟ್ ಪಂದ್ಯಗಳನ್ನು ಸೋಮವಾರ ಮುಂದೂಡಿದೆ.

ಎಂಟು ತಂಡಗಳ 32 ಆಟಗಾರರು ಮತ್ತು ಆರು ಮಂದಿ ನೆರವು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಪುಣೆಯಲ್ಲಿಮಂಗಳವಾರದಿಂದ ನಾಕೌಟ್ ಪಂದ್ಯಗಳು ನಡೆಯಬೇಕಿದ್ದವು.

‘ಎಲ್ಲರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೂಚ್‌ ಬೆಹಾರ್ ಟ್ರೋಫಿ ಟೂರ್ನಿಯ ನಾಕೌಟ್‌ ಪಂದ್ಯಗಳನ್ನು ಮುಂದಿನ ಸೂಚನೆಯವರೆಗೆ ಮುಂದೂಡಲಾಗಿದೆ. ಪರಿಸ್ಥಿತಿ ಸಹಜಸ್ಥಿತಿಗೆ ಬಂದ ಬಳಿಕ ಪರಿಷ್ಕೃತ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುವುದು‘ ಎಂದು ಬಿಸಿಸಿಐ ತಿಳಿಸಿದೆ.

ADVERTISEMENT

ಲೀಗ್‌ ಹಂತದಲ್ಲಿ 20 ತಾಣಗಳಲ್ಲಿ 93 ಪಂದ್ಯಗಳು ನಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.