ADVERTISEMENT

ಅಧ್ಯಕ್ಷರ ಇಲೆವನ್‌ಗೆ ಕಿಶನ್‌ ಆಸರೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:53 IST
Last Updated 3 ಫೆಬ್ರುವರಿ 2019, 19:53 IST

ತಿರುವನಂತಪುರ: ಆರಂಭದಲ್ಲೇ ಸಂಕಷ್ಟ ಎದುರಿಸಿದ ತಂಡಕ್ಕೆ ನಾಯಕ ಇಶಾನ್‌ ಕಿಶನ್‌ ಆಸರೆಯಾದರು.

ಕಿಶನ್‌ (ಬ್ಯಾಟಿಂಗ್‌ 40; 49ಎ, 4ಬೌಂ) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಬಲದಿಂದ ಮಂಡಳಿ ಅಧ್ಯಕ್ಷರ ಇಲೆವನ್‌ ತಂಡ ಇಂಗ್ಲೆಂಡ್‌ ಲಯನ್ಸ್‌ ಎದುರಿನ ಎರಡು ದಿನಗಳ ‘ಟೆಸ್ಟ್‌’ ಪಂದ್ಯದಲ್ಲಿ ದಿಟ್ಟ ಹೋರಾಟ ನಡೆಸಿದೆ.

ಸೇಂಟ್‌ ಕ್ಸೇವಿಯರ್‌ ಕಾಲೇಜು ಮೈದಾನದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ಸ್ಯಾಮ್‌ ಬಿಲ್ಲಿಂಗ್ಸ್‌ ನೇತೃತ್ವದ ಇಂಗ್ಲೆಂಡ್‌ ಲಯನ್ಸ್‌ 60 ಓವರ್‌ಗಳಲ್ಲಿ 6 ವಿಕೆಟ್‌ಗೆ 145ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ADVERTISEMENT

ಪ್ರಥಮ ಇನಿಂಗ್ಸ್‌ ಶುರುಮಾಡಿರುವ ಮಂಡಳಿ ಅಧ್ಯಕ್ಷರ ಇಲೆವನ್‌, ದಿನದಾಟದ ಅಂತ್ಯಕ್ಕೆ 30 ಓವರ್‌ಗಳಲ್ಲಿ 5 ವಿಕೆಟ್‌ಗೆ 134ರನ್‌ ಕಲೆಹಾಕಿದೆ.

ಬ್ಯಾಟಿಂಗ್‌ ಆರಂಭಿಸಿದ ಆತಿಥೇಯ ತಂಡ ಧ್ರುವ ಶೋರೆ (5) ಮತ್ತು ರಿಕಿ ಭುಯಿ (0) ಅವರ ವಿಕೆಟ್‌ ಬೇಗನೆ ಕಳೆದುಕೊಂಡಿತು. ಅಕ್ಷತ್ ರೆಡ್ಡಿ (14) ಹಾಗೂ ಸಿದ್ದೇಶ್‌ ಲಾಡ್‌ (27) ಕೂಡಾ ಬೇಗನೆ ಔಟಾದರು. ಈ ಹಂತದಲ್ಲಿ ಕಿಶನ್‌ ಮತ್ತು ಪ್ರಿಯಂ ಗರ್ಗ್‌ (26; 25ಎ, 5ಬೌಂ) ದಿಟ್ಟ ಆಟ ಆಡಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌ ಲಯನ್ಸ್‌, ಮೊದಲ ಇನಿಂಗ್ಸ್‌: 60 ಓವರ್‌ಗಳಲ್ಲಿ 6 ವಿಕೆಟ್‌ಗೆ 145 ಡಿಕ್ಲೇರ್ಡ್‌ (ಅಲೆಕ್ಸ್‌ ಡೇವಿಸ್‌ 11, ಮ್ಯಾಕ್ಸ್‌ ಹೋಲ್ಡನ್‌ 38, ಒಲ್ಲಿ ಪೋಪ್‌ 24, ಸ್ಯಾಮ್‌ ಹೇನ್‌ ಔಟಾಗದೆ 40, ವಿಲ್‌ ಜ್ಯಾಕ್ಸ್‌ ಔಟಾಗದೆ 17; ಅಂಕಿತ್‌ ರಜಪೂತ್‌ 20ಕ್ಕೆ4, ಸೌರಭ್‌ ಕುಮಾರ್‌ 25ಕ್ಕೆ1, ಜಯಂತ್‌ ಯಾದವ್‌ 17ಕ್ಕೆ1).

ಮಂಡಳಿ ಅಧ್ಯಕ್ಷರ ಇಲೆವನ್‌: ಪ್ರಥಮ ಇನಿಂಗ್ಸ್‌: 30 ಓವರ್‌ಗಳಲ್ಲಿ 5 ವಿಕೆಟ್‌ಗೆ 134 (ಅಕ್ಷತ್‌ ರೆಡ್ಡಿ 14, ಧ್ರುವ ಶೋರೆ 5, ಸಿದ್ದೇಶ್‌ ಲಾಡ್‌ 27, ಇಶಾನ್‌ ಕಿಶನ್‌ ಬ್ಯಾಟಿಂಗ್‌ 40, ‍ಪ್ರಿಯಂ ಗರ್ಗ್‌ 26, ರಿಂಕು ಸಿಂಗ್‌ ಬ್ಯಾಟಿಂಗ್‌ 13; ಜೆಮಿ ಪೋರ್ಟರ್‌ 22ಕ್ಕೆ2, ಜ್ಯಾಕ್‌ ಚಾಪೆಲ್‌ 23ಕ್ಕೆ2, ಡಾಮಿನಿಕ್‌ ಬೆಸ್‌ 27ಕ್ಕೆ1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.