ADVERTISEMENT

ಹಿರಿಯ ಕ್ರಿಕೆಟಿಗ ಚೇತನ್‌ ಚೌಹಾನ್‌ಗೆ ಕೋವಿಡ್‌-19

ಪಿಟಿಐ
Published 12 ಜುಲೈ 2020, 21:22 IST
Last Updated 12 ಜುಲೈ 2020, 21:22 IST
ಚೇತನ್‌ ಚೌಹಾನ್‌
ಚೇತನ್‌ ಚೌಹಾನ್‌   

ಲಖನೌ:ಭಾರತದ ಹಿರಿಯ ಕ್ರಿಕೆಟಿಗ ಮತ್ತು ಉತ್ತರ ಪ್ರದೇಶದಲ್ಲಿ ಸಂಪುಟ ಸಚಿವ ಕೂಡ ಆಗಿರುವಚೇತನ್‌ಚೌಹಾನ್‌ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಚೇತನ್‌ಚೌಹಾನ್‌ ಅವರಲ್ಲಿ ಕೊರೊನಾ ಗುಣಲಕ್ಷಣಗಳು ಕಾಣಿಕೊಂಡಿದ್ದರಿಂದ ಶುಕ್ರವಾರ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು.

72 ವರ್ಷದಚೌಹಾನ್‌ ಅವರು ಲಖನೌನ ಸಂಜಯ್‌ ಗಾಂಧಿ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಚೌಹಾನ್‌ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅವರ ಕುಟುಂಬದ ಇನ್ನುಳಿದ ಸದಸ್ಯರನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ಅವರೆಲ್ಲರೂ ಹೋಮ್‌ ಕ್ವಾರಂಟೈನ್‌ನಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.

ಚೌಹಾನ್, ಕೊರೊನಾ ವೈರಸ್ ಸೋಂಕಿಗೆ ಒಳಗಾದ ಕೆಲವೇ ಕೆಲವು ಮಾಜಿ ಅಂತರರಾಷ್ಟ್ರೀಯ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.

ಕೆಲ ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟಿಗರಾದ ಶಾಹಿದ್ ಆಫ್ರಿದಿ ಮತ್ತು ಸ್ಕಾಟ್ಲೆಂಡ್‌ನ ಮಜೀದ್ ಹಕ್ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಅವರೀಗ ಚಿಕಿತ್ಸೆ ಪಡೆದು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಚೇತನ್‌ಚೌಹಾನ್‌ ಅವರು 1969 ಮತ್ತು 1978ರ ಅವಧಿಯಲ್ಲಿ ಭಾರತದ ಪರ 40 ಟೆಸ್ಟ್ ಪಂದ್ಯಗಳಲ್ಲಿ ಆಡಿ, 2084 ರನ್ ಗಳಿಸಿದ್ದಾರೆ. ಸುನೀಲ್‌ ಗಾವಸ್ಕರ್‌ ಜೊತೆ ಹಲವು ವರ್ಷಗಳ ಕಾಲ ಟೆಸ್ಟ್‌ ಪಂದ್ಯಗಳಲ್ಲಿ ಆರಂಭ ಆಟಗಾರರಾಗಿದ್ದರು. ಏಳು ಏಕದಿನ ಪಂದ್ಯಗಳಲ್ಲಿ 153 ರನ್ ಕಲೆಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.