ADVERTISEMENT

ಭಾರತ ಪ್ರವಾಸದಿಂದ ಹಿಂದೆ ಸರಿದ ಗೇಲ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 20:20 IST
Last Updated 27 ನವೆಂಬರ್ 2019, 20:20 IST
ಕ್ರಿಸ್ ಗೇಲ್
ಕ್ರಿಸ್ ಗೇಲ್   

ಜೋಹಾನ್ಸ್‌ಬರ್ಗ್‌ (ಪಿಟಿಐ): ಮುಂದಿನ ತಿಂಗಳು ಭಾರತದಲ್ಲಿ ನಡೆಯಲಿರುವ ಮೂರು ಏಕದಿನ ಪಂದ್ಯಗಳಲ್ಲಿ ಆಡಲಿರುವ ವೆಸ್ಟ್‌ ಇಂಡೀಸ್ ತಂಡದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಇರುವುದಿಲ್ಲ. ಅವರು ಈ ಸರಣಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಅದಕ್ಕೂ ಮುನ್ನ ನಡೆಯಲಿರುವ ಟ್ವೆಂಟಿ–20 ಸರಣಿಯಲ್ಲಿಯೂ ಅವರು ಅಡುವುದು ಖಚಿತವಿಲ್ಲ.

‘ವೆಸ್ಟ್ ಇಂಡೀಸ್ ತಂಡದಲ್ಲಿ ಏಕದಿನ ಪಂದ್ಯಗಳನ್ನು ಆಡಲು ಕರೆ ಬಂದಿತ್ತು. ಆದರೆ ನಾನು ನಿರಾಕರಿಸಿದೆ. ತಂಡದಲ್ಲಿರುವ ಯುವ ಆಟಗಾರರೊಂದಿಗೆ ಈ ವರ್ಷ ನಾನು ಆಡಬೇಕು ಎಂಬುದು ಮಂಡಳಿಯ ಆಶಯ. ಆದರೆ, ನಾನೇ ವಿಶ್ರಾಂತಿ ತೆಗೆದುಕೊಂಡೆ’ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋಗೆ ಹೇಳಿಕೆ ಕೊಟ್ಟಿದ್ದಾರೆ.

‘ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಬಿಗ್‌ ಬ್ಯಾಷ್ ಲೀಗ್ ಟೂರ್ನಿಯಲ್ಲಿಯೂ ನಾನು ಆಡುವುದಿಲ್ಲ. ಮುಂಬರಲಿರುವ ಟೂರ್ನಿಗಳ ಬಗ್ಗೆ ನನಗೆ ಗೊತ್ತಿಲ್ಲ. ಆದರೂ ಬಾಂಗ್ಲಾದೇಶ ಲೀಗ್‌ ನಲ್ಲಿ ತಂಡವೊಂದರಲ್ಲಿ ನನ್ನ ಹೆಸರು ಸೇರಿಕೊಂಡಿದೆ. ಆ ಕುರಿತು ನನಗೆ ಗೊತ್ತೂ ಇಲ್ಲ’ ಎಂದು ಗೇಲ್ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.