ADVERTISEMENT

ಕೊರೊನಾ ವಿರುದ್ಧ ಸಮರ: ನೆರವಿನ ಹಸ್ತ ಚಾಚಿದ ಕೆಎಸ್‌ಸಿಎ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 19:30 IST
Last Updated 29 ಮಾರ್ಚ್ 2020, 19:30 IST
ರೋಜರ್‌ ಬಿನ್ನಿ
ರೋಜರ್‌ ಬಿನ್ನಿ   

ಬೆಂಗಳೂರು: ಕೊರೊನಾ ವೈರಸ್‌ ವಿರುದ್ಧದ ಹೋರಾಟದ ನೆರವಿಗಾಗಿ ಕರ್ನಾಟಕ ರಾಜ್ಯ ಕ್ರಿಕೆ್ಟ್ ಸಂಸ್ಥೆಯು ಒಂದು ಕೋಟಿ ರೂಪಾಯಿ ದೇಣಿಗೆ ನೀಡಲಿದೆ.

‘ಪ್ರಧಾನಮಂತ್ರಿಗಳ ನಾಗರಿಕ ನೆರವು ಮತ್ತು ತುರ್ತು ಪರಿಹಾರ ನಿಧಿಗೆ ₹ 50 ಲಕ್ಷವನ್ನು ಬಿಸಿಸಿಐ ಮೂಲಕ ಮತ್ತು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳ ನೆರವು ನಿಧಿಗೆ ₹ 50 ಲಕ್ಷವನ್ನು ನೀಡಲು ನಿರ್ಧರಿಸಲಾಗಿದೆ. ನಮ್ಮ ಸಂಸ್ಥೆಯ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಪದಾಧಿಕಾರಿಗಳ ಒಮ್ಮತದ ನಿರ್ಣಯ ಇದಾಗಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ನಾವು ಸದಾ ಬೆಂಬಲ ನೀಡುತ್ತೇವೆ’ ಎಂದು ಕೆಎಸ್‌ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ.

ಶನಿವಾರ ಬಿಸಿಸಿಐ ₹ 51 ಕೋಟಿ ದೇಣಿಗೆ ನೀಡಿತ್ತು.

ADVERTISEMENT

ಸಹಾಯಕ್ಕೆ ಬದ್ಧ: ಸರ್ಕಾರವು ಯಾವುದೇ ಸಂದರ್ಭದಲ್ಲಿ ನೆರವು ಕೇಳಿದರೂ ನೀಡಲು ನಾವು ಸಿದ್ದ. ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಕೆಲವು ಊರುಗಳಲ್ಲಿ ನಮ್ಮ ಕ್ರೀಡಾಂಗಣಗಳಿವೆ. ಸರ್ಕಾರ ಕೇಳಿದರೆ ಅವುಗಳ ಮೂಲಕ ಸಹಕರಿಸುತ್ತೇವೆ ಎಂದು ವಿನಯ್ ಮೃತ್ಯುಂಜಯ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.