ADVERTISEMENT

ಕ್ರಿಕೆಟ್: ಅಲ್ಜರಿ ಭರ್ಜರಿ ಆಟ

ಪಿಟಿಐ
Published 12 ಫೆಬ್ರುವರಿ 2021, 18:18 IST
Last Updated 12 ಫೆಬ್ರುವರಿ 2021, 18:18 IST
ಅಲ್ಜರಿ ಜೋಸೆಫ್ ಆಟದ ವೈಖರಿ  –ಎಎಫ್‌ಪಿ ಚಿತ್ರ
ಅಲ್ಜರಿ ಜೋಸೆಫ್ ಆಟದ ವೈಖರಿ  –ಎಎಫ್‌ಪಿ ಚಿತ್ರ   

ಢಾಕಾ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜೊಶುವಾ ಡಿಸಿಲ್ವಾ (92; 108ಎಸೆತ, 10ಬೌಂಡರಿ) ಮತ್ತು ಅಲ್ಜರಿ ಜೋಸೆಫ್ (82; 108ಎ, 8ಬೌಂ, 5ಸಿ) ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ ವೆಸ್ಟ್ ಇಂಡೀಸ್ ತಂಡವು ಬಾಂಗ್ಲಾದೇಶದ ಎದುರು ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಗಳಿಸಿತು.

ಶೇರ್ ಬಾಂಗ್ಲಾ ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನವಾದ ಶುಕ್ರವಾರ ವೆಸ್ಟ್ ಇಂಡೀಸ್ ತಂಡವು ಮೊದಲ ಇನಿಂಗ್ಸ್‌ನಲ್ಲಿ 142.2 ಓವರ್‌ಗಳಲ್ಲಿ 409 ರನ್‌ ಗಳಿಸಿತು. ಉತ್ತರವಾಗಿ ಬಾಂಗ್ಲಾ ತಂಡವು 36 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 105 ರನ್ ಗಳಿಸಿದೆ.

ಎನ್‌ಕ್ರುಮಾ ಬಾನರ್ 10 ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು. ಅವರು ಔಟಾದಾಗ ಕ್ರೀಸ್‌ಗೆ ಬಂದ ಅಲ್ಜರಿ ಜೋಸೆಫ್ ಮಿಂಚಿನ ಸಂಚಲನ ಮೂಡಿಸಿದರು. ಜೊಶುವಾ ಜೊತೆಗೆ ಏಳನೇ ವಿಕೆಟ್‌ಗೆ 118 ರನ್‌ಗಳನ್ನು ಸೇರಿಸಿದರು.

ADVERTISEMENT

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ವೆಸ್ಟ್ ಇಂಡೀಸ್: 142.2 ಓವರ್‌ಗಳಲ್ಲಿ 409 (ಎನ್‌ಕ್ರುಮಾ ಬಾನರ್ 90, ಜೊಶುವಾ ಡಿಸಿಲ್ವಾ 92, ಅಲ್ಜರಿ ಜೋಸೆಫ್ 82, ಅಬು ಜಯೇದ್ 98ಕ್ಕೆ4, ತೈಜುಲ್ ಇಸ್ಲಾಂ 108ಕ್ಕೆ4) ಬಾಂಗ್ಲಾದೇಶ: 36 ಓವರ್‌ಗಳಲ್ಲಿ 4ಕ್ಕೆ 105(ತಮೀಮ್ ಇಕ್ಬಾಲ್ 44, ಮೊಮಿನುಲ್ ಹಕ್ 21, ಮುಷ್ಫಿಕುರ್ ರಹೀಂ ಬ್ಯಾಟಿಂಗ್ 27, ಶಾನನ್ ಗ್ಯಾಬ್ರಿಯಲ್ 31ಕ್ಕೆ2)..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.