ADVERTISEMENT

ಕೂಚ್‌ ಬಿಹಾರ್‌ ಕ್ರಿಕೆಟ್: ರೋಹಿತ್‌ಗೆ ಐದು ವಿಕೆಟ್‌

ಕರ್ನಾಟಕ ವಿರುದ್ಧ ಕೇರಳ ಸಾಧಾರಣ ಮೊತ್ತ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 20:00 IST
Last Updated 18 ಜನವರಿ 2020, 20:00 IST

ಮೈಸೂರು: ರೋಹಿತ್‌ ಕುಮಾರ್‌ (58ಕ್ಕೆ 5) ಅವರ ಪ್ರಭಾವಿ ಬೌಲಿಂಗ್‌ ದಾಳಿಗೆ ಪರದಾಟ ನಡೆಸಿದ ಕೇರಳ ತಂಡ ಇಲ್ಲಿ ಆರಂಭವಾದ ಕೂಚ್‌ ಬಿಹಾರ್‌ ಟ್ರೋಫಿ (19 ವರ್ಷ ವಯಸ್ಸಿನೊಳಗಿನವರ) ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧ 194 ರನ್‌ಗಳಿಗೆ ಆಲೌಟಾಗಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ನಾಲ್ಕು ದಿನಗಳ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕೇರಳ ತಂಡ ಆಗಿಂದಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡಿತು. ವರುಣ್‌ ನಾಯನಾರ್‌ (68) ಮತ್ತು ಅಲ್ಫಿ ಫ್ರಾನ್ಸಿಸ್‌ (48) ಅವರು ಅಲ್ಪ ಹೋರಾಟ ನಡೆಸಿದರು. ಇವರು ಏಳನೇ ವಿಕೆಟ್‌ಗೆ 64 ರನ್‌ ಸೇರಿಸಿದರು.

ಮೊದಲ ಇನಿಂಗ್ಸ್‌ ಆರಂಭಿಸಿರುವ ಕರ್ನಾಟಕ ತಂಡ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 41 ರನ್‌ ಗಳಿಸಿದೆ. ಆರಂಭಿಕ ಆಟಗಾರರಾದ ಲೋಚನ್‌ ಗೌಡ (22) ಮತ್ತು ಅಕಿಬ್‌ ಜವಾದ್‌ (4) ಔಟಾದರು.

ADVERTISEMENT

ಸಂಕ್ಷಿಪ್ತ ಸ್ಕೋರ್: ಕೇರಳ ಮೊದಲ ಇನಿಂಗ್ಸ್ 77.1 ಓವರ್‌ಗಳಲ್ಲಿ 194 (ವರುಣ್‌ ನಾಯನಾರ್ 68, ಅಲ್ಫಿ ಫ್ರಾನ್ಸಿಸ್‌ 48, ಶೌನ್‌ ರೋಜರ್ 29, ರೋಹಿತ್‌ ಕುಮಾರ್‌ 58ಕ್ಕೆ 5, ಕೆ.ಗೌರವ್ 40ಕ್ಕೆ 2) ಕರ್ನಾಟಕ ಮೊದಲ ಇನಿಂಗ್ಸ್ 15.5 ಓವರ್‌ಗಳಲ್ಲಿ 2 ವಿಕೆಟ್‌ಗೆ 41.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.