ADVERTISEMENT

ಟೆಸ್ಟ್‌ನಿಂದ ನಿವೃತ್ತಿ: ವಾರ್ನರ್ ಸುಳಿವು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 20:57 IST
Last Updated 14 ನವೆಂಬರ್ 2022, 20:57 IST
ಡೇವಿಡ್‌ ವಾರ್ನರ್‌– ಎಎಫ್‌ಪಿ ಚಿತ್ರ
ಡೇವಿಡ್‌ ವಾರ್ನರ್‌– ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಅವರು ಟೆಸ್ಟ್‌ ಮಾದರಿ ಕ್ರಿಕೆಟ್‌ನಿಂದ ಮುಂದಿನ ವರ್ಷ ನಿವೃತ್ತಿ ಪಡೆಯುವ ಸುಳಿವು ನೀಡಿದ್ದಾರೆ. ಸೀಮಿತ ಓವರ್‌ಗಳ ಮಾದರಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ.

‘ಇನ್ನು ಕನಿಷ್ಠ 12 ತಿಂಗಳು ಮಾತ್ರ ನಾನು ಟೆಸ್ಟ್ ಮಾದರಿಯಲ್ಲಿ ಮುಂದುವರಿಯಬಹುದು‘ ಎಂದು ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ.

36 ವರ್ಷದ ವಾರ್ನರ್ 96 ಟೆಸ್ಟ್ ಪಂದ್ಯಗಳಿಂದ46.52ರ ಸರಾಸರಿಯಲ್ಲಿ 7,817 ರನ್ ಗಳಿಸಿದ್ದಾರೆ. ಅದರಲ್ಲಿ 24 ಶತಕಗಳು, 34 ಅರ್ಧಶತಕಗಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.