ಅಡಿಲೇಡ್: ಡೇವಿಡ್ ವಾರ್ನರ್ (100; 56ಎಸೆತ, 10ಬೌಂಡರಿ, 4ಸಿಕ್ಸರ್) ಅಬ್ಬರದ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು 134 ರನ್ಗಳಿಂದ ಶ್ರೀಲಂಕಾ ಎದುರು ಭಾನುವಾರ ನಡೆದ ಟ್ವೆಂಟಿ–20 ಪಂದ್ಯದಲ್ಲಿ ಜಯಿಸಿತು.
ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು 20 ಓವರ್ಗಳಲ್ಲಿ 2 ವಿಕೆಟ್ಗಳಿಗೆ 233 ರನ್ ಗಳಿಸಿತು. ಆ್ಯರನ್ ಫಿಂಚ್ (64) ಮತ್ತು ಗ್ಲೆನ್ ಮ್ಯಾಕ್ಸ್ವೆಲ್ (62 ರನ್) ಅರ್ಧಶತಕ ಹೊಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರು
ಆಸ್ಟ್ರೇಲಿಯಾ: 20 ಓವರ್ಗಳಲ್ಲಿ 2ಕ್ಕೆ233 (ಆ್ಯರನ್ ಫಿಂಚ್ 64, ಡೇವಿಡ್ ವಾರ್ನರ್ ಔಟಾಗದೆ 100, ಗ್ಲೆನ್ ಮ್ಯಾಕ್ಸ್ವೆಲ್ 62, ಲಕ್ಷಣ್ ಸಂದಕನ್ 41ಕ್ಕೆ1, ದಸುನ್ ಶನಾಕ 10ಕ್ಕೆ1)
ಶ್ರೀಲಂಕಾ: 20 ಓವರ್ಗಳಲ್ಲಿ 9ಕ್ಕೆ 99 (ಕುಶಾಲ ಪೆರೆರಾ 16, ದಸುನ ಶನಾಕ 17, ಲಸಿತ್ ಮಾಲಿಂಗ 13, ಮಿಷೆಲ್ ಸ್ಟಾರ್ಕ್ 18ಕ್ಕೆ2, ಪ್ಯಾಟ್ ಕಮಿನ್ಸ್ 27ಕ್ಕೆ2, ಆ್ಯಡಂ ಜಂಪಾ 14ಕ್ಕೆ3)
ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 134 ರನ್ಗಳ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.