ADVERTISEMENT

ಕೌಟುಂಬಿಕ ದೌರ್ಜನ್ಯ ಆರೋಪ: ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ಮತ್ತೆ ಬಂಧನ

ಏಜೆನ್ಸೀಸ್
Published 15 ಡಿಸೆಂಬರ್ 2021, 21:54 IST
Last Updated 15 ಡಿಸೆಂಬರ್ 2021, 21:54 IST
ಮೈಕೆಲ್ ಸ್ಲೇಟರ್ –ರಾಯಿಟರ್ಸ್ ಚಿತ್ರ
ಮೈಕೆಲ್ ಸ್ಲೇಟರ್ –ರಾಯಿಟರ್ಸ್ ಚಿತ್ರ   

ಸಿಡ್ನಿ: ಕೌಟುಂಬಿಕ ದೌರ್ಜನ್ಯ ಆರೋಪದಡಿ ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕೆಲ್ ಸ್ಲೇಟರ್ ಅವರನ್ನು ಮತ್ತೆ ಬಂಧಿಸಲಾಗಿದೆ. ನ್ಯಾಯಾಲಯ ವಿಧಿಸಿದ ಷರತ್ತುಗಳನ್ನು ಅವರು ಪಾಲಿಸಲಿಲ್ಲ ಎಂದು ಆರೋಪಿಸಲಾಗಿದೆ.

ದೌರ್ಜನ್ಯಕ್ಕೆ ಸಂಬಂಧಿಸಿ ಸ್ಲೇಟರ್ ಅಕ್ಟೋಬರ್ 12ರಂದು ಬಂಧನಕ್ಕೆ ಒಳಗಾಗಿದ್ದರು. ಅವರಿಗೆ ಜಾಮೀನು ನೀಡಿದ್ದ ನ್ಯಾಯಾಯಲವು ಮದ್ಯಪಾನ, ನಿಷೇಧಿತ ಔಷಧಿ ಸೇವನೆ, ಮೊಬೈಲ್ ಫೋನ್ ಸೇರಿದಂತೆ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಮಾಡದಂತೆ ಸೂಚಿಸಿತ್ತು.

ಆರಂಭಿಕ ಬ್ಯಾಟರ್ ಆಗಿದ್ದ ಸ್ಲೇಟರ್ ಒಂದು ದಶಕದ ವರೆಗೆ ಆಸ್ಟ್ರೇಲಿಯಾ ತಂಡದಲ್ಲಿ ಆಡಿದ್ದು ಟೆಸ್ಟ್ ಪಂದ್ಯಗಳಲ್ಲಿ 5,312 ರನ್ ಕಲೆ ಹಾಕಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.