ADVERTISEMENT

ಆ್ಯಷಸ್ ಸರಣಿಯಲ್ಲಿ ಸಾಧನೆ: ಹರಾಜಿಗೆ ಬ್ರಾಡ್ಮನ್ ‘ಐತಿಹಾಸಿಕ’ ಬ್ಯಾಟ್

ಪಿಟಿಐ
Published 8 ಡಿಸೆಂಬರ್ 2021, 13:25 IST
Last Updated 8 ಡಿಸೆಂಬರ್ 2021, 13:25 IST
ಡೊನಾಲ್ಡ್ ಬ್ರಾಡ್ಮನ್‌ –ಟ್ವಿಟರ್ ಚಿತ್ರ
ಡೊನಾಲ್ಡ್ ಬ್ರಾಡ್ಮನ್‌ –ಟ್ವಿಟರ್ ಚಿತ್ರ   

ಮೆಲ್ಬರ್ನ್‌: ಆ್ಯಷಸ್ ಸರಣಿಯಲ್ಲಿ ಸ್ಮರಣೀಯ ಸಾಧನೆ ಮಾಡಿರುವ ಡೊನಾಲ್ಡ್ ಬ್ರಾಡ್ಮನ್ ಅವರ ಐತಿಹಾಸಿಕ ಬ್ಯಾಟ್‌ ಹರಾಜಾಗಲಿದೆ. 1934ರ ಸರಣಿಯಲ್ಲಿ ಎರಡು ತ್ರಿಶತಕಗಳನ್ನು ಸಿಡಿಸಲು ಬ್ರಾಡ್ಮನ್ ಬಳಸಿದ್ದ ಬ್ಯಾಟ್ ಇದಾಗಿದೆ.

ಆರಂಭಿಕ ಬ್ಯಾಟರ್‌ ಬಿಲ್ ಪಾನ್ಸ್‌ಫಾರ್ಡ್‌ ಅವರ ಜೊತೆ ಮೊದಲ ವಿಕೆಟ್‌ಗೆ ದಾಖಲೆಯ 451 ರನ್ ಸೇರಿಸುವುದಕ್ಕೂ ಬ್ರಾಡ್ಮನ್ ಈ ಬ್ಯಾಟ್ ಬಳಸಿದ್ದರು. ನ್ಯೂ ಸೌತ್ ವೇಲ್ಸ್‌ನ ಸದರ್ನ್ ಹೈಲ್ಯಾಂಡ್ಸ್‌ನಲ್ಲಿರುವ ಖಾಸಗಿ ಮಾಲೀಕತ್ವದ ಬ್ರಾಡ್ಮನ್ ವಸ್ತುಸಂಗ್ರಹಾಲಯದಲ್ಲಿ 1999ರಿಂದ ಈ ಬ್ಯಾಟನ್ನು ಪ್ರದರ್ಶನಕ್ಕಿಡಲಾಗಿದೆ.

1934ರ ಆ್ಯಷಸ್ ಸರಣಿಯ ಎಲ್ಲ ಐದು ಪಂದ್ಯಗಳಲ್ಲಿ ಈ ಬ್ಯಾಟ್ ಬಳಸಿ ಬ್ರಾಡ್ಮನ್ ಆಡಿದ್ದರು. ಸರಣಿಯಲ್ಲಿ ಒಟ್ಟು 758 ರನ್ ಕಲೆ ಹಾಕಿದ್ದರು. 52 ಟೆಸ್ಟ್ ಪಂದ್ಯಗಳಲ್ಲಿ 6996 ರನ ಗಳಿಸಿರುವ ಬ್ರಾಡ್ಮನ್ ಆ್ಯಷಸ್ ಸರಣಿಯ ಹೆಡಿಂಗ್ಲಿ ಪಂದ್ಯದಲ್ಲಿ 304 ಮತ್ತು ಓವಲ್‌ ಪಂದ್ಯದಲ್ಲಿ 244 ರನ್ ಗಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.