ADVERTISEMENT

ಟ್ರೆಂಡ್‌ ಆದ ‘ಈ ಸಲ ಕಪ್‌ ನಮ್ದು’ ಪೋಸ್ಟ್‌: RCB ಗೆಲುವಿಗೆ ಅಭಿಮಾನಿಗಳ ಹರ್ಷ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮಾರ್ಚ್ 2024, 3:31 IST
Last Updated 18 ಮಾರ್ಚ್ 2024, 3:31 IST
<div class="paragraphs"><p>ಆರ್‌ಸಿಬಿ ಗೆಲುವಿಗೆ ಸಂಭ್ರಮಿಸಿದ ಅಭಿಮಾನಿಗಳು</p></div>

ಆರ್‌ಸಿಬಿ ಗೆಲುವಿಗೆ ಸಂಭ್ರಮಿಸಿದ ಅಭಿಮಾನಿಗಳು

   

ಪಿಟಿಐ ಚಿತ್ರ

ಬೆಂಗಳೂರು: ಪ್ರತಿ ಬಾರಿ ಐಪಿಎಲ್‌ ಆರಂಭವಾದಾಗ ಆರ್‌ಸಿಬಿ ಗೆಲುವಿಗಾಗಿ ಕಾತುರರಾಗಿದ್ದ ಅಭಿಮಾನಿಗಳಿಗೆ ಮಹಿಳಾ ಆರ್‌ಸಿಬಿ ತಂಡ ಕಪ್ ಗೆದ್ದುಕೊಟ್ಟಿದೆ. ಭಾನುವಾರ ನಡೆದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಆರ್‌ಸಿಬಿ ತಂಡ ಕಪ್‌ ಗೆದ್ದು ಕಳೆದ 16 ವರ್ಷಗಳಿಂದ ಹೇಳುತ್ತಿದ್ದ ‘ಈ ಸಲ ಕಪ್‌ ನಮ್ದೆ’ ಎನ್ನುವ ಘೊಷಣೆಯನ್ನು ನಿಜವಾಗಿಸಿ 'ಈ ಸಲ ಕಪ್‌ ನಮ್ದು’ ಎಂದಿದ್ದಾರೆ. 

ADVERTISEMENT

ಮಹಿಳೆಯರ ರೋಚಕ ಗೆಲುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಪುರುಷರ ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಕೂಡ ವನಿತೆಯರ ತಂಡಕ್ಕೆ ವಿಡಿಯೊ ಕಾಲ್‌ ಮಾಡಿ ಶುಭಾಶಯ ಕೋರಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ‘ಚಾಂಪಿಯನ್ಸ್‌’ ಎನ್ನುವ ಪೋಸ್ಟರ್‌ ಮೂಲಕ ಮಹಿಳಾ ತಂಡಕ್ಕೆ ಅಭಿಮಾನಿಗಳು ಶುಭಾಶಯ ಹೇಳಿದ್ದಾರೆ.  ಅಷ್ಟೆ ಅಲ್ಲದೆ ಬಗೆ ಬಗೆ ಮೀಮ್ಸ್‌ಗಳು, ಕೊನೆಯ ಗಳಿಗೆಯಲ್ಲಿ ಗೆದ್ದ ಕ್ಷಣಗಳ ವಿಡಿಯೊಗಳು ಹರಿದಾಡುತ್ತಿದ್ದು, ಎಲ್ಲದಕ್ಕೂ ‘ಈ ಸಲ ಕಪ್‌ ನಮ್ದು’ ಎನ್ನುವ ಸಾಲು ಇದ್ದೇ ಇದೆ. 

ಆರ್‌ಸಿಬಿ ತಂಡ ಗೆಲುವಿನ ನಗೆ ಬೀರುತ್ತಿದ್ದಂತೆ ಬೆಂಗಳೂರಿನಲ್ಲಿ ಅಭಿಮಾನಿಗಳು ಬೀದಿ ಬೀದಿಗಳಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಆರ್‌ಸಿಬಿ ಎಂದು ಕೂಗುತ್ತಾ ಈ ಸಲ ಕಪ್‌ ನಮ್ದು ಎಂದು ಘೋಷಣೆ ಕೂಗಿದ್ದಾರೆ. ಇದರ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.