ADVERTISEMENT

ಗಂಗೂಲಿ ಸಹೋದರನ ಪತ್ನಿಗೆ ಕೋವಿಡ್‌–19

ಪಿಟಿಐ
Published 20 ಜೂನ್ 2020, 11:05 IST
Last Updated 20 ಜೂನ್ 2020, 11:05 IST
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಾಂದರ್ಭಿಕ ಚಿತ್ರ
ಕೊರೊನಾ ವೈರಸ್ ಸೋಂಕು ಪರೀಕ್ಷೆ– ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಬಂಗಾಳ ಕ್ರಿಕೆಟ್‌ ಸಂಸ್ಥೆಯ (ಸಿಎಬಿ) ಕಾರ್ಯದರ್ಶಿ ಸ್ನೇಹಶಿಶ್‌‌ ಗಂಗೂಲಿ ಅವರ ಪತ್ನಿಗೆ ಕೋವಿಡ್‌–19 ಇರುವುದು ಖಚಿತಪಟ್ಟಿದೆ.

ಪಶ್ಚಿಮ ಬಂಗಾಳದ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಸ್ನೇಹಶಿಶ್‌ ಅವರುಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಅವರ ಹಿರಿಯ ಸಹೋದರ.

ADVERTISEMENT

ಸ್ನೇಹಶಿಶ್‌ ಅವರ ಅತ್ತೆ ಹಾಗೂ ಮಾವ, ಸ್ನೇಹಶಿಶ್‌ ಅವರ ಮೊಮಿನ್‌‌ಪುರ ಮನೆಯಲ್ಲಿದ್ದ ಕೆಲಸದವರೊಬ್ಬರಿಗೂ ಹೋದ ವಾರ ಕೊರೊನಾ ಸೋಂಕು ತಗುಲಿತ್ತು. ಅವರೆಲ್ಲಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ನೇಹಶಿಶ್‌ ಅವರ ವರದಿಯು ‘ನೆಗೆಟಿವ್‌’ ಆಗಿದ್ದರಿಂದ ಅವರಿಗೆ ಮನೆಯಲ್ಲೇ ಸ್ವಯಂ ಪ್ರತ್ಯೇಕವಾಸದಲ್ಲಿರಲು ಸೂಚಿಸಲಾಗಿದೆ.

‘ನಾಲ್ಕು ಮಂದಿಯೂ ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಸ್ಥಳೀಯ ಕ್ಲಿನಿಕ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅವರ ಗಂಟಲು ದ್ರವವನ್ನು ಪಡೆದು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಿಗೆ ಕೋವಿಡ್‌ ಇರುವುದು ದೃಢಪಟ್ಟ ಬೆನ್ನಲ್ಲೇ ಎಲ್ಲರನ್ನೂ ಸಮೀಪದ ನರ್ಸಿಂಗ್‌ ಹೋಂ ಒಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದೂ ಅಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.