ಬೆಂಗಳೂರು: ‘ಸಿಲಿಕಾನ್ ಸಿಟಿ’ ಖ್ಯಾತಿಯ ಬೆಂಗಳೂರಿಗೆ ‘ಗ್ಲೋಬಲ್ ಇ – ಕ್ರಿಕೆಟ್ ಪ್ರಿಮಿಯರ್ ಲೀಗ್’ ಕಾಲಿಟ್ಟಿದೆ.
ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಗ್ಲೋಬಲ್ ಇ ಕ್ರಿಕೆಟ್ ಪ್ರಿಮಿಯರ್ ಲೀಗ್ ಆರಂಭವಾಯಿತು. ಮೇ 2ರವರೆಗೆ ಲೀಗ್ ನಡೆಯಲಿದೆ. ಇದು ಎರಡನೇ ಆವೃತ್ತಿಯಾಗಿದೆ. ಆರು ತಂಡಗಳು ಕಣದಲ್ಲಿವೆ.
ಸುದ್ದಿಗಾರರೊಂದಿಗೆ ಮಾತ ನಾಡಿದ ಲೀಗ್ ಆಯೋಜಕರಾದ ಜೆಟ್ ಸಿಂಥೆಸಿಸ್ ಸಂಸ್ಥೆ ಸಂಸ್ಥಾಪಕ ಮತ್ತು ಸಿಇಒ ರಾಜನ್ ನವನಿ, ‘ಭಾರತದಲ್ಲಿ ವಿಡಿಯೊ ಗೇಮಿಂಗ್ ಮತ್ತು ಕ್ರೀಡಾ ಸಂಸ್ಕೃತಿಯನ್ನು ಒಂದುಗೂಡಿಸಿ ನವಪೀಳಿಗೆಗೆ ಇ ಕ್ರಿಕೆಟ್ ಲೀಗ್ ನೀಡುವುದು ನಮ್ಮ ಉದ್ದೇಶವಾಗಿದೆ.
ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆ. ಐಪಿಎಲ್ ಶುರುವಾದ ಮೇಲೆ ಕ್ರಿಕೆಟ್ ಅಗಾಧವಾಗಿ ಮತ್ತು ಬಹು ಆಯಾಮಗಳಲ್ಲಿ ಬೆಳೆಯುತ್ತಿದೆ. ಯುವ ಜನರ ಆಕರ್ಷಣೆಯಾಗಿದೆ. ಇಲ್ಲಿ ನಡೆಯುತ್ತಿರುವುದು ಎರಡನೇ ಆವೃತ್ತಿಯಾಗಿದೆ. ಆರು ತಂಡಗಳನ್ನು ರಚಿಸಲಾಗಿದೆ. ವೃತ್ತಿ ಪರ ರೀತಿಯಲ್ಲಿ ಬಿಡ್ ಮೂಲಕ ತಂಡಗಳ ರಚನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.