ADVERTISEMENT

WI v/s Aus: ಎರಡೂವರೆ ದಿನದಲ್ಲಿ ಟೆಸ್ಟ್‌ ಗೆದ್ದ ಆಸ್ಟ್ರೇಲಿಯಾ

ಪಿಟಿಐ
Published 19 ಜನವರಿ 2024, 10:54 IST
Last Updated 19 ಜನವರಿ 2024, 10:54 IST
<div class="paragraphs"><p> ಆಸ್ಟ್ರೇಲಿಯಾ ತಂಡ</p></div>

ಆಸ್ಟ್ರೇಲಿಯಾ ತಂಡ

   

ಅಡಿಲೇಡ್‌ (ಎಪಿ): ವೇಗದ ಬೌಲರ್ ಜೋಶ್‌ ಹ್ಯಾಜಲ್‌ವುಡ್‌ (35ಕ್ಕೆ5) ಅವರು 11ನೇ ಸಲ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದರು. ಅವರ ಪರಿಣಾಮಕಾರಿ ದಾಳಿಯಿಂದ ಆಸ್ಟ್ರೇಲಿಯಾ ಮೊದಲ ಟೆಸ್ಟ್‌ನ ಮೂರನೇ ದಿನವಾದ ಭೋಜನ ವಿರಾಮದೊಳಗೇ ವೆಸ್ಟ್‌ ಇಂಡೀಸ್ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತು.

ವೆಸ್ಟ್‌ ಇಂಡೀಸ್ ತಂಡವನ್ನು (ಗುರುವಾರ 6 ವಿಕೆಟ್‌ಗೆ 73) ದಿನದ 13ನೇ ಓವರ್‌ನಲ್ಲಿ 120 ರನ್‌ಗಳಿಗೆ ಉರುಳಿಸಿದ ಆಸ್ಟ್ರೇಲಿಯಾ ಗೆಲುವಿಗೆ 26 ರನ್‌ಗಳ ಅತ್ಯಲ್ಪ ಮೊತ್ತ ಗಳಿಸಬೇಕಾಗಿತ್ತು. ಸ್ಟೀಫನ್ ಸ್ಮಿತ್‌ (11*) ಮತ್ತು ಉಸ್ಮಾನ್‌ ಕ್ವಾಜಾ (9*) ಈ ಔಪಚಾರಿಕತೆಯನ್ನು ಪೂರೈಸಿದರು. ಗೆಲುವಿಗೆ ಒಂದು ರನ್ ಬೇಕಾಗಿದ್ದಾಗ ಖ್ವಾಜಾ ಅವರು ಶಮರ್‌ ಜೋಸೆಫ್‌ ಬೌನ್ಸರ್‌ನಲ್ಲಿ ದವಡೆಗೆ ಚೆಂಡು ತಾಗಿ ಗಾಯಾಳಾಗಿ ನಿವೃತ್ತರಾದರು. ರಕ್ತ ಉಗುಳಿದ್ದರೂ ಗಾಯ ತೀವ್ರವಾಗಿಲ್ಲ ಎಂದು ಕಂಕಷನ್‌ನಲ್ಲಿ ತಿಳಿದುಬಂತು. ಅವರನ್ನು ಸ್ಕ್ಯಾನಿಂಗ್‌ಗೆ ಕಳಿಸಲಾಯಿತು. ಮಾರ್ನಸ್‌ ಲಾಬುಷೇನ್ ಗೆಲುವನ್ನು ಪೂರೈಸಿದರು.

ADVERTISEMENT

ಮೊದಲ ಇನಿಂಗ್ಸ್‌ನಲ್ಲಿ ಶತಕ (119) ಬಾರಿಸಿದ್ದ ಟ್ರಾವಿಸ್‌ ಹೆಡ್‌ ‘ಪಂದ್ಯದ ಆಟಗಾರ’ ಗೌರವಕ್ಕೆ ಪಾತ್ರರಾದರು.

ಎರಡು ಟೆಸ್ಟ್‌ಗಳ ಸರಣಿಯಲ್ಲಿ ಆತಿಥೇಯರು 1–0 ಮುನ್ನಡೆ ಸಾಧಿಸಿದ್ದು, ಎರಡನೇ ಟೆಸ್ಟ್‌ ಜನವರಿ 25ರಂದು ಬ್ರಿಸ್ಬೇನ್‌ನಲ್ಲಿ ಆರಂಭವಾಗಲಿದೆ.

ಸ್ಕೋರುಗಳು: ಮೊದಲ ಇನಿಂಗ್ಸ್: ವೆಸ್ಟ್‌ ಇಂಡೀಸ್‌: 188, ಆಸ್ಟ್ರೇಲಿಯಾ: 283; ಎರಡನೇ ಇನಿಂಗ್ಸ್‌: ವೆಸ್ಟ್‌ ಇಂಡೀಸ್‌: 35.2 ಓವರುಗಳಲ್ಲಿ 120 (ಮಿಚೆಲ್ ಸ್ಟಾರ್ಕ್ 46ಕ್ಕೆ2, ಜೋಶ್‌ ಹ್ಯಾಜಲ್‌ವುಡ್‌ 35ಕ್ಕೆ5, ನಥಾನ್ ಲಯನ್ 4ಕ್ಕೆ2), ಆಸ್ಟ್ರೇಲಿಯಾ: 6.4 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 26.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.