ADVERTISEMENT

ಟೆಸ್ಟ್‌ ಕ್ರಿಕೆಟ್ ಆಡಲು ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ: ವಿರಾಟ್ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2021, 13:50 IST
Last Updated 3 ಆಗಸ್ಟ್ 2021, 13:50 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ನಾಟಿಂಗ್‌ಹ್ಯಾಂ: ಟೆಸ್ಟ್‌ ಕ್ರಿಕೆಟ್‌ ಆಡಲು ಆಟಗಾರರಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ ಎಂದು ನನಗನಿಸುತ್ತದೆ ಎಂದು ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಮತ್ತು ಇಂಗ್ಲೆಂಡ್‌ ತಂಡಗಳು ಸೆಣಸಲಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯು ನಾಳೆಯಿಂದ (ಬುಧವಾರ) ಆರಂಭವಾಗಲಿದೆ.ಎರಡನೇ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ)ಮೊದಲ ಸರಣಿ ಇದಾಗಿದೆ.

ಕ್ರೀಡಾವಾಹಿನಿಯೊಂದರಸಂದರ್ಶನದಲ್ಲಿ ಹಿರಿಯ ಕ್ರಿಕೆಟಿಗ ದಿನೇಶ್‌ ಕಾರ್ತಿಕ್‌ ಅವರೊಂದಿಗೆ ಭಾಗವಹಿಸಿದಕೊಹ್ಲಿ,ʼಟೆಸ್ಟ್‌ ಕ್ರಿಕೆಟ್‌ ಮೂರು ವರ್ಷಗಳ ಹಿಂದೆಯೂ ಸಂಕಷ್ಟದಲ್ಲಿತ್ತು. ಈ ಮಾದರಿಯ ಕ್ರಿಕೆಟ್‌ ಉಳಿದಿರಲು ಆಟಗಾರರೇಕಾರಣ ಎಂದು ನನಗನಿಸುತ್ತದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಟೆಸ್ಟ್‌ ಕ್ರಿಕೆಟ್‌ ಆಡಬೇಕೆನ್ನುವ ಮನಸ್ಥಿತಿ ಮತ್ತು ಹಪಾಹಪಿ ನಮ್ಮಲ್ಲಿ ಇಲ್ಲವಾದರೆ, ಅದರಿಂದ ದೀರ್ಘ ಮಾದರಿಯ ಕ್ರಿಕೆಟ್‌ಗೆ ದೊಡ್ಡ ಹೊಡೆತ ಬೀಳಲಿದೆ. ಇದನ್ನುನಾನು ಖಚಿತವಾಗಿ ಹೇಳಬಲ್ಲೆʼ ಎಂದು ಹೇಳಿದ್ದಾರೆ.

ADVERTISEMENT

ʼಡಬ್ಲ್ಯುಟಿಸಿ ಸಕಾರಾತ್ಮಕ ನಡೆಯಾಗಿದ್ದು, ಸರಿಯಾದ ದಿಕ್ಕಿನಲ್ಲಿದೆ. ಆಟಗಾರರು ಟೆಸ್ಟ್‌ ಕ್ರಿಕೆಟ್‌ನಿಂದ ಏನನ್ನು ಬಯಸುತ್ತಾರೆ ಎಂಬುದರ ಮೇಲೆ ಟೆಸ್ಟ್‌ಕ್ರಿಕೆಟ್‌ ನಿಂತಿದೆ. ಜನರು ಟಿವಿಯಲ್ಲಿ ಟೆಸ್ಟ್‌ ಪಂದ್ಯಗಳನ್ನು ವೀಕ್ಷಿಸುವಾಗ ಒಂದೇಒಂದು ಎಸೆತವನ್ನೂ ತಪ್ಪಿಸಿಕೊಳ್ಳಬಾರದೆಂದು ಭಾವಿಸಿದರೆ, ಅದು ಖಂಡಿತಾ ಟೆಸ್ಟ್‌ ಕ್ರಿಕೆಟ್‌ ಅನ್ನು ಉಳಿಸುತ್ತದೆʼ ಎಂದಿದ್ದಾರೆ.

ಸಾಕಷ್ಟುತಂಡಗಳುಸುದೀರ್ಘಮಾದರಿಯ ಕ್ರಿಕೆಟ್‌ನಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಕಾರ್ತಿಕ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ʼಮುಖ್ಯವಾಗಿ ನೀವು ನಿಮ್ಮದೃಷ್ಟಿಯಲ್ಲಿಪ್ರಾಮಾಣಿಕವಾಗಿರಬೇಕು. ಟೆಸ್ಟ್‌ ಕ್ರಿಕೆಟ್ ಕಠಿಣವಾದುದು ಎಂಬುದು ನಿಮಗೆ ಗೊತ್ತು. ಕನ್ನಡಿಯ ಮುಂದೆ ನಿಂತು ನೀವು ಟೆಸ್ಟ್‌ ಕ್ರಿಕೆಟ್‌ ಆಡಲು ಬಯಸುವಿರಾ ಎಂದು ಕೇಳಿಕೊಳ್ಳಿ. ಉತ್ತರ ಹೌದು ಎಂದಾದರೆ, ಪಟ್ಟುಬಿಡದೆ ಆಡಿ. ಕೆಲವೊಮ್ಮೆ ನಾನು ಗಮನಿಸಿದಂತೆ ಟೆಸ್ಟ್‌ ಕ್ರಿಕೆಟ್‌ಆಡಲು ಆಟಗಾರರಿಗೆ ಸಾಕಷ್ಟು ಪ್ರೋತ್ಸಾಹ ಸಿಗುತ್ತಿಲ್ಲ ಎಂಬುದುನನ್ನಪ್ರಾಮಾಣಿಕವಾದ ಭಾವನೆ.ಅದಕ್ಕಾಗಿಯೇಹೆಚ್ಚಿನ ತಂಡಗಳು ಟೆಸ್ಟ್ಕ್ರಿಕೆಟ್‌ಅನ್ನು ಕೈಬಿಡುತ್ತವೆʼ ಎಂದಿದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.