ADVERTISEMENT

ಹುಬ್ಬಳ್ಳಿ, ಧಾರವಾಡ ನಗರ ತಂಡಕ್ಕೆ ಗೆಲುವು

ಕೆಎಸ್‌ಸಿಎ 16 ವರ್ಷದ ಒಳಗಿವನರ ಅಂತರ ಜಿಲ್ಲಾ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 12:47 IST
Last Updated 26 ಏಪ್ರಿಲ್ 2019, 12:47 IST

ಹುಬ್ಬಳ್ಳಿ: ಹುಬ್ಬಳ್ಳಿ ಮತ್ತು ಧಾರವಾಡ ನಗರ ತಂಡಗಳು, ಕೆಎಸ್‌ಸಿಎ 16 ವರ್ಷದ ಒಳಗಿನವರ ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಗೆಲುವು ಪಡೆದವು.

ಬಿಜಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ನಗರ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 263 ರನ್‌ ಗಳಿಸಿತ್ತು. ಅನೀಶ ಭೂಸದ 71, ವಲ್ಲಭ ನಾಡಿಗೇರ 74 ರನ್‌ ಗಳಿಸಿ ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಎದುರಾಳಿ ಗದಗ ನಗರ ತಂಡ 38.2 ಓವರ್‌ಗಳಲ್ಲಿ 121 ರನ್ ಗಳಿಸಲಷ್ಟೇ ಶಕ್ತವಾಯಿತು. ಸುಜಲ್‌ ಪಾಟೀಲ ಮೂರು ಮತ್ತು ಕಿರಣ ಚಿಮ್ಮಲಗಿ ನಾಲ್ಕು ವಿಕೆಟ್‌ ಕಬಳಿಸಿದರು.

ದಿನದ ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕಾರವಾರ ನಗರ ತಂಡ 34 ಓವರ್‌ಗಳಲ್ಲಿ 89 ರನ್‌ ಗಳಿಸಿತ್ತು. ಧಾರವಾಡ ನಗರ ತಂಡದ ತೇಜಸ್‌ ಮುರ್ಡೇಶ್ವರ, ನಿತೀಶ ಪಾಲಂಕರ ತಲಾ ಮೂರು ವಿಕೆಟ್‌ ಉರುಳಿಸಿದರೆ, ಎಂ.ಎಸ್‌. ಮನೀಷ ಎರಡು ವಿಕೆಟ್‌ ಪಡೆದು ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ತಂಡ 24.1 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ADVERTISEMENT

ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಬೆಳಗಾವಿ ನಗರ ತಂಡ 49.4 ಓವರ್‌ಗಳಲ್ಲಿ 276 ರನ್‌ ಗಳಿಸಿತು. ಕೇದಾರ ಉಸಲಕರ್ (67), ಸಿದ್ದಾಂತ ಕದಮ್‌ (51) ತಂಡದ ಸವಾಲಿನ ಮೊತ್ತಕ್ಕೆ ಕಾರಣರಾದರು. ಎದುರಾಳಿ ಗದಗ ತಂಡ 29.1 ಓವರ್‌ಗಳಲ್ಲಿ 69 ರನ್‌ ಗಳಿಸಿ ತನ್ನ ಹೋರಾಟ ಮುಗಿಸಿ ಸೋಲೊಪ್ಪಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.