ADVERTISEMENT

ಇಂಗ್ಲೆಂಡ್‌ ಜಯಭೇರಿ; ಮಿಥಾಲಿ ಹೋರಾಟ ವ್ಯರ್ಥ

ಬೆಮೌಂಟ್ –ನತಾಲಿಯಾ ಆಕರ್ಷಕ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 20:32 IST
Last Updated 27 ಜೂನ್ 2021, 20:32 IST
ಮಿಥಾಲಿ ರಾಜ್ ಬ್ಯಾಟಿಂಗ್ 
ಮಿಥಾಲಿ ರಾಜ್ ಬ್ಯಾಟಿಂಗ್    

ಬ್ರಿಸ್ಟಲ್: ಭಾರತ ತಂಡದ ನಾಯಕಿ ಮಿಥಾಲಿ ರಾಜ್ (72; 108ಎಸೆತ, 7ಬೌಂಡರಿ) ಅರ್ಧಶತಕ ವ್ಯರ್ಥವಾಯಿತು. ಟಾಮಿ ಬೆಮೌಂಟ್ ಮತ್ತು ನತಾಲಿಯಾ ಶಿವರ್ ಅವರ ಆಕರ್ಷಕ ಅರ್ಧಶತಕಗಳ ಬಲದಿಂದ ಇಂಗ್ಲೆಂಡ್ ಭಾನುವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಜಯಿಸಿತು.

ಕೌಂಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.ಅದರಿಂದಾಗಿ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 201 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆತಿಥೇಯ ತಂಡವು 34.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 202 ರನ್‌ ಗಳಿಸಿ ಗೆದ್ದಿತು.

ಬೆಮೌಂಟ್ (ಔಟಾಗದೆ 87; 87ಎಸೆತ,12ಬೌಂಡರಿ 1ಸಿಕ್ಸರ್ ) ಮತ್ತು ನತಾಲಿಯಾ (74; 74ಎ, 10ಬೌಂ, 1ಸಿ) ಮುರಿಯದ ಮೂರನೇ ವಿಕೆಟ್ ಜೊತೆಯಾಟದಲ್ಲಿ 119 ರನ್ ಸೇರಿಸಿದರು. ತಂಡವು ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ADVERTISEMENT

ಮಿಥಾಲಿ ಆಸರೆ: ಸೋಫಿ ಎಕ್ಸೆಲ್ಸ‌್ಟನ್ (40ಕ್ಕೆ3) ಅವರ ಉತ್ತಮ ದಾಳಿ ನಡೆಸಿದರು. ಇದರಿಂದಾಗಿ ಭಾರತ ತಂಡದ ಆರಂಭ ಚೆನ್ನಾಗಿರಲಿಲ್ಲ. ಈ ಹಂತದಲ್ಲಿ ಮಿಥಾಲಿ ಆಸರೆಯಾದರು.

ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶಫಾಲಿ ವರ್ಮಾ (15; 14ಎ, 3 ಬೌಂಡರಿ) ಅವರು ಸ್ಮೃತಿ ಮಂದಾನ ಅವರೊಂದಿಗೆ ಇನಿಂಗ್ಸ್ ಆರಂಭಿಸಿದರು.ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಿದ ಶಫಾಲಿ ಐದನೇ ಓವರ್‌ನಲ್ಲಿ ಔಟಾದರು, ಸ್ಮತಿ ಲಯ ಕಂಡುಕೊಳ್ಳಲು ಪರದಾಡಿದರು. ಅದರಿಂದಾಗಿ 25 ಎಸೆತಗಳಲ್ಲಿ 10 ರನ್‌ ಮಾತ್ರ ಗಳಿಸಿದರು. ಹತ್ತನೇ ಓವರ್‌ನಲ್ಲಿ ಔಟಾದರು. ಈ ಹಂತದಲ್ಲಿ ಪೂನಮ್ ರಾವತ್ ಜೊತೆಗೂಡಿದ ಅನುಭವಿ ಆಟಗಾರ್ತಿ ಮಿಥಾಲಿ ಇನಿಂಗ್ಸ್‌ಗೆ ಚೇತರಿಕೆ ನೀಡಿದರು. ಮೂರನೇ ವಿಕೆಟ್‌ಗೆ ಇಬ್ಬರೂ 56 ರನ್ ಸೇರಿಸಿದರು

ಹರ್ಮನ್‌ಪ್ರೀತ್ ಕೌರ್ ವೈಫಲ್ಯದ ಸರಣಿ ಮುಂದುವರಿಯಿತು. ಕೇವಲ ಒಂದು ರನ್ ಗಳಿಸಿ ಔಟಾದರು. ಮಿಥಾಲಿ ಯೊಂದಿಗೆ ಸೇರಿದ ದೀಪ್ತಿ ಶರ್ಮಾ (30; 46ಎ) ಆರನೇ ವಿಕೆಟ್ ಜೊತೆಯಾಟದಲ್ಲಿ 65 ರನ್‌ ಸೇರಿಸಿದರು.

ಇಂಗ್ಲೆಂಡ್ ತಂಡದ ಕ್ಯಾಥರಿನ್ ಬ್ರಂಟ್ ಮತ್ತು ಅನ್ಯಾ ಶ್ರಬ್‌ಸೋಲ್ ತಲಾ ಎರಡು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.