ADVERTISEMENT

IND vs ENG T20: ಭಾರತದ ಗೆಲುವಿಗೆ 172 ರನ್ ಗುರಿ; 5 ವಿಕೆಟ್‌ ಕಬಳಿಸಿದ ವರುಣ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2025, 15:47 IST
Last Updated 28 ಜನವರಿ 2025, 15:47 IST
<div class="paragraphs"><p>ಜೋಸ್ ಬಟ್ಲರ್ ಬ್ಯಾಟಿಂಗ್ ವೈಖರಿ</p></div>

ಜೋಸ್ ಬಟ್ಲರ್ ಬ್ಯಾಟಿಂಗ್ ವೈಖರಿ

   

ರಾಜ್‌ಕೋಟ್‌: ಭಾರತದ ವಿರುದ್ಧದ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 9 ವಿಕೆಟ್‌ಗಳ ನಷ್ಟಕ್ಕೆ 171 ರನ್‌ ಕಲೆ ಹಾಕಿದೆ. ಭಾರತದ ಪರ ಸ್ಪಿನ್ನರ್ ವರುಣ್ ಚಕ್ರವರ್ತಿ 24 ರನ್ ನೀಡಿ ಐದು ವಿಕೆಟ್‌ ಪಡೆದು ಮಿಂಚಿದ್ದಾರೆ.

ರಾಜ್‌ಕೋಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್‌ ಪರ ನಾಯಕ ಜೋಸ್ ಬಟ್ಲರ್‌ ಅವರ ಅಮೋಘ 76, ಓಪನರ್‌ ಬೆನ್‌ ಡುಕೆಟ್‌ ಅವರ 28 ಎಸೆತ ಎದುರಿಸಿ 51 ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್ ಅವರ (24 ಎಸೆತಗಳಲ್ಲಿ 43 ರನ್‌) ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ಉತ್ತಮ ಮೊತ್ತವನ್ನು ತಂಡ ಪೇರಿಸಿತು. 

ADVERTISEMENT

16ನೇ ಓವರ್‌ವರೆಗೂ ಇಂಗ್ಲೆಂಡ್‌ ತಂಡವು 8 ವಿಕೆಟ್‌ಗಳನ್ನು ಕಳೆದುಕೊಂಡು 127 ರನ್‌ಗಳನ್ನಷ್ಟೇ ಗಳಿಸಿತ್ತು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಲಿವಿಂಗ್‌ಸ್ಟೋನ್‌ ಅಬ್ಬರಿಸಿದರು. ಕೊನೆಯ ನಾಲ್ಕು ಓವರ್‌ಗಳಲ್ಲಿ 44 ರನ್‌ ಕಲೆಹಾಕುವ ಮೂಲಕ ತಂಡಕ್ಕೆ ಉತ್ತಮ ಸ್ಕೋರ್ ತಂದುಕೊಟ್ಟರು.

ಚಕ್ರವರ್ತಿ ಅವರು ಮಹತ್ವದ ಬಟ್ಲರ್ ವಿಕೆಟ್‌ ಪಡೆದರು. ಒಂದೇ ಓವರ್‌ನಲ್ಲಿ ಚಕ್ರವರ್ತಿ ಅವರು ಇಬ್ಬರು ಪ್ರಮುಖ ಬ್ಯಾಟರ್‌ಗಳ ವಿಕೆಟ್ ಕಬಳಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2ನೇ ಬಾರಿಗೆ ಐದು ವಿಕೆಟ್‌ ಪಡೆದು ಸಾಧನೆ ಮಾಡಿದರು. ಡುಕೆಟ್‌ ಅವರನ್ನು ಅಕ್ಸರ್ ಪಟೇಲ್ ಪೆವಿಲಿಯನ್‌ಗೆ ಕಳುಹಿಸಿದರು. ಸ್ಪಿನರ್‌ ರವಿ ಬಿಷ್ಣೋಯಿ ಕೂಡಾ ತಮ್ಮ ಕೈಚಳಕ ಪ್ರದರ್ಶಿಸಿದರು.

2023ರ ವಿಶ್ವಕಪ್‌ ನಂತರ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವೇಗಿ ಮೊಹಮ್ಮದ್ ಶಮಿ ಅವರು ಈ ಪಂದ್ಯದ ಮೂಲಕ ವಾಪಾಸ್‌ ಆದ್ದಾರೆ. ಮೂರು ಓವರ್‌ ಮಾಡಿದ ಅವರು ಯಾವುದೇ ವಿಕೆಟ್ ಪಡೆಯದೇ 25 ರನ್ ನೀಡಿದರು. 

ಇಂಗ್ಲೆಂಡ್‌ನ ಸವಾಲಿಗೆ ಎದುರಾಗಿ ಭಾರತವು ಸದ್ಯದ ಮಾಹಿತಿ ಪ್ರಕಾರ 4 ಓವರ್‌ನಲ್ಲಿ 2 ವಿಕೆಟ್‌ ಕಳೆದುಕೊಂಡು 35 ರನ್ ಕಲೆಹಾಕಿದೆ.

5 ಪಂದ್ಯಗಳ ಈ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದು ಭಾರತ ಮುನ್ನಡೆ ಸಾಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.