ADVERTISEMENT

ಅಂಗವಿಕಲರ ಕ್ರಿಕೆಟ್: ಭಾರತಕ್ಕೆ ಸರಣಿ

​ಪ್ರಜಾವಾಣಿ ವಾರ್ತೆ
Published 5 ಮೇ 2025, 16:03 IST
Last Updated 5 ಮೇ 2025, 16:03 IST
ಟ್ರೋಫಿಯೊಂದಿಗೆ ಭಾರತ ಕ್ರಿಕೆಟ್‌ ತಂಡ
ಟ್ರೋಫಿಯೊಂದಿಗೆ ಭಾರತ ಕ್ರಿಕೆಟ್‌ ತಂಡ   

ಬೆಂಗಳೂರು: ಭಾರತ ಅಂಗವಿಕಲರ ಕ್ರಿಕೆಟ್‌ ತಂಡ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಸೋಮವಾರ 5–0 ಅಂತರದಿಂದ ಸರಣಿ ಗೆದ್ದುಕೊಂಡಿದೆ.

ಪಿ.ಡಿ.ದೀಪಕ್‌ ಲೋಹಿಯಾ ಸ್ಮರಣಾರ್ಥ ಟ್ರೋಫಿಗಾಗಿ ನಡೆದ ಟೂರ್ನಿಯಲ್ಲಿ  ಕಾಲುಗಳ ನ್ಯೂನತೆಯುಳ್ಳ ಕ್ರಿಕೆಟಿಗರ ತಂಡಗಳು ಸ್ಪರ್ಧಿಸಿದ್ದವು. 

ಕುಂಬಳಗೋಡಿನಲ್ಲಿರುವ ಕಿಣಿ ಸ್ಪೋರ್ಟ್ಸ್‌ ಅರೇನಾದಲ್ಲಿ ನಡೆದ ಐದನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಶ್ರೀಲಂಕಾ 15 ಓವರ್‌ಗಳಲ್ಲಿ 88 ರನ್‌ಗಳಿಗೆ ಸರ್ವಪತನವಾಯಿತು.

ADVERTISEMENT

ಆಟಗಾರರಾದ ನರೇಂದ್ರ ಮನಗೋರ್‌ ಪಂದ್ಯಶ್ರೇಷ್ಠ, ರವೀಂದ್ರ ಸಂತೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.  

ಸರಣಿ ಗೆದ್ದ ಭಾರತ ತಂಡಕ್ಕೆ ₹ 2 ಲಕ್ಷ  ಮತ್ತು  ಶ್ರೀಲಂಕಾ ತಂಡಕ್ಕೆ ₹ 50 ಸಾವಿರ ಬಹುಮಾನ ಪ್ರದಾನ ಮಾಡಲಾಯಿತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.