ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕ ಪಟ್ಟಿ: ಎರಡನೇ ಸ್ಥಾನಕ್ಕೆ ರೋಹಿತ್ ಬಳಗ

ಡಬ್ಲ್ಯುಟಿಸಿ ಅಂಕಪಟ್ಟಿ: ಅಗ್ರಸ್ಥಾನಕ್ಕೇರಿದ ಪಾಕ್

ಪಿಟಿಐ
Published 25 ಜುಲೈ 2023, 11:45 IST
Last Updated 25 ಜುಲೈ 2023, 11:45 IST
ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿ ಜಯಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟ್ರೋಫಿಯೊಂದಿಗೆ ಸಂಭ್ರಮಿಸಿದರು  –ಎಎಫ್‌ಪಿ ಚಿತ್ರ
ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿ ಜಯಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟ್ರೋಫಿಯೊಂದಿಗೆ ಸಂಭ್ರಮಿಸಿದರು  –ಎಎಫ್‌ಪಿ ಚಿತ್ರ   

ದುಬೈ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್ ಪಟ್ಟಿಯಲ್ಲಿ ಭಾರತ ತಂಡವು ಎರಡನೇ ಸ್ಥಾನಕ್ಕೆ ಇಳಿದಿದೆ.

ವೆಸ್ಟ್ ಇಂಡೀಸ್‌ ತಂಡದ ಎದುರಿನ ಎರಡು ಪಂದ್ಯಗಳ ಸರಣಿಯಲ್ಲಿ 1–0ಯಿಂದ ಗೆದ್ದಿತು. ಆದರೆ ಎರಡನೇ ಪಂದ್ಯದಲ್ಲಿ ಮಳೆಯಿಂದಾಗಿ ಭಾರತಕ್ಕೆ ಜಯದ ಅವಕಾಶ ಕೈತಪ್ಪಿತು. ಪಂದ್ಯ ಡ್ರಾ ಆಯಿತು. ಪಂದ್ಯದ ಕೊನೆಯ ದಿನದಾಟ ಮಳೆಯಿಂದಾಗಿ ಸಂಪೂರ್ಣ ಸ್ಥಗಿತವಾಯಿತು.

ಅದರಿಂದಾಗಿ ಈ ಪಂದ್ಯದ ಪೂರ್ಣ ಪಾಯಿಂಟ್‌ಗಳು ತಂಡಕ್ಕೆ ಲಭಿಸಲಿಲ್ಲ. ಭಾರತವು ಒಟ್ಟು 16 ಅಂಕಗಳನ್ನು ಗಳಿಸಿದೆ. ಆದರೆ  ಜಯದ ಶೇಕಡಾವಾರು ಲೆಕ್ಕದಲ್ಲಿ 66.67 ಗಳಿಸಿದೆ. ವಿಂಡೀಸ್ ವಿರುದ್ಧದ ಮೊದಲ ಪಂದ್ಯ ಗೆದ್ದಾಗ ಶೇ 100ರಷ್ಟು ಜಯದೊಂದಿಗೆ ಮೊದಲ ಸ್ಥಾನದಲ್ಲಿತ್ತು.  ವಿಂಡೀಸ್ ತಂಡಕ್ಕೆ ಡ್ರಾ ದಿಂದಾಗಿ ನಾಲ್ಕು ಅಂಕಗಳ ಲಾಭವಾಯಿತು. ಅದರಿಂದಾಗಿ ಐದನೇ ಸ್ಥಾನಕ್ಕೇರಿದೆ.

ADVERTISEMENT

ಹೋದ ವಾರ ಗಾಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಗೆದ್ದಿತ್ತು. ಇದರಿಂದಾಗಿ ಶೇ 100ರಷ್ಟು ಶೇಕಡಾವಾರು ಲೆಕ್ಕದೊಂದಿಗೆ ಅಗ್ರಸ್ಥಾನಕ್ಕೇರಿದೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ (54.17) ಮತ್ತು ಇಂಗ್ಲೆಂಡ್ (29.17) ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.

ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ತಂಡಗಳು ಇನ್ನಷ್ಟೇ ತಮ್ಮ ಸರಣಿಗಳನ್ನು ಆಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.