ADVERTISEMENT

ಭಾರತ ‘ಎ’ – ಶ್ರೀಲಂಕಾ ‘ಎ’ ತಡಗಳ ನಡುವಿನ ಪಂದ್ಯ ರದ್ದು

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 13:26 IST
Last Updated 14 ಜೂನ್ 2019, 13:26 IST
ಹುಬ್ಬಳ್ಳಿ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಶುಕ್ರವಾರ ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವೆ ನಡೆದ 4ನೇ ಏಕ ದಿನ ಪಂದ್ಯದ ವೇಳೆ ಮಳೆ ಬಂದ ಕಾರಣ ಪಿಚ್‌ಗೆ ಹೊದಿಕೆ ಹೊದಿಸಲಾಯಿತು –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಶುಕ್ರವಾರ ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವೆ ನಡೆದ 4ನೇ ಏಕ ದಿನ ಪಂದ್ಯದ ವೇಳೆ ಮಳೆ ಬಂದ ಕಾರಣ ಪಿಚ್‌ಗೆ ಹೊದಿಕೆ ಹೊದಿಸಲಾಯಿತು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡಗಳ ನಡುವೆ ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ಶುಕ್ರವಾರ ನಡೆದ 4ನೇ ಏಕ ದಿನ ಪಂದ್ಯವು ಮಳೆಯಿಂದಾಗಿ ರದ್ದಾಯಿತು.

ಬೆಳಿಗ್ಗೆಯೇ ಮಳೆಯಾದ ಕಾರಣ ಪಂದ್ಯ ಎರಡು ಗಂಟೆ(11.15) ವಿಳಂಬವಾಗಿ ಆರಂಭಗೊಂಡಿತು. ಟಾಸ್‌ ಗೆದ್ದ ಭಾರತ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. 36 ಓವರ್‌ಗೆ ಪಂದ್ಯವನ್ನು ಕಡಿತಗೊಳಿಸಲಾಗಿತ್ತು.

ಶ್ರೀಲಂಕಾವು 3.3 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಠಕ್ಕೆ 22 ರನ್‌ ಕಲೆ ಹಾಕಿತು. ನಿರೋಶನ್‌ ಡಿಕ್ವೆಲ್ಲಾ 11(7), ಸುಧೀರ ಸಮರವಿಕ್ರಮ 4 (4) ಮತ್ತು ಭಾನುಕ ರಾಜಪಕ್ಷೆ 5 (10) ರನ್‌ ಗಳಿಸಿದರು. ಎರಡನೇ ಓವರ್‌ನಲ್ಲಿ ತುಷಾರ್‌ ದೇಶಪಾಂಡೆ ಅವರ ಬಾಲ್‌ಗೆ ಹೊಡೆಯಲು ಹೋದ ಸುಧೀರ ಸಮರವಿಕ್ರಮ ಕ್ಯಾಚಿತ್ತು ಔಟಾದರು.

ADVERTISEMENT

ಐದು ಏಕ ದಿನ ಸರಣಿಯಲ್ಲಿ ಭಾರತ ‘ಎ’ ತಂಡವು 2–1 ರಿಂದ ಮುನ್ನೆಡೆ ಕಾಯ್ದುಕೊಂಡಿದ್ದು, ಶನಿವಾರ(ಜೂನ್‌ 15) ನಡೆಯುವ ಫೈನಲ್‌ ಪಂದ್ಯವು ಕುತೂಹಲ ಕೆರಳಿಸಿದೆ.

ಶನಿವಾರ ಪಂದ್ಯ ಆರಂಭ: ಬೆಳಿಗ್ಗೆ 9 ಗಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.