ನಾರ್ತ್ ಸೌಂಡ್, ಆ್ಯಂಟೀಗಾ: ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡಿರುವ ವೃದ್ಧಿಮಾನ್ ಸಹಾ ಮತ್ತು ಶಿವಂ ದುಬೆ ಆರನೇ ವಿಕೆಟ್ಗೆ 124 ರನ್ಗಳ ಅಮೂಲ್ಯ ಜೊತೆಯಾಟದಲ್ಲಿ ಭಾಗಿಯಾಗಿದರು. ಇದರಿಂದ ಭಾರತ ‘ಎ’ ತಂಡ ಮೊದಲ ಅನಧಿಕೃತ ಟೆಸ್ಟ್ ಪಂದ್ಯದ ಎರಡನೇ ದಿನವಾದ ಗುರುವಾರ ವೆಸ್ಟ್ ಇಂಡೀಸ್ ‘ಎ’ ವಿರುದ್ಧ 71 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಸಂಪಾದಿಸಿದೆ.
ವೆಸ್ಟ್ ಇಂಡೀಸ್ ‘ಎ’ ತಂಡದ 228 ರನ್ಗಳಿಗೆ ಉತ್ತರವಾಗಿ ಎರಡನೇ ದಿನದ ಕೊನೆಗೆ ಭಾರತ ‘ಎ’ 8 ವಿಕೆಟ್ಗೆ 299 ರನ್ ಹೊಡೆದಿದೆ.
ಗಾಯಾಳಾಗಿದ್ದ ಕಾರಣ ಸುಮಾರು ಒಂದು ವರ್ಷ ವಿಶ್ರಾಂತಿಯಲ್ಲಿದ್ದ ಬಂಗಾಳದ ಕೀಪರ್ ಸಹಾ, ಆರು ಬೌಂಡರಿಗಳಿರುವ 61 ರನ್ಗಳೊಡನೆ (146 ಎಸೆತ) ಅಜೇಯರಾಗಿದ್ದಾರೆ. ಸಹಾ ಮತ್ತು ದುಬೆ ಜೊತೆಗೂಡುವ ಮೊದಲು ಭಾರತ 5 ವಿಕೆಟ್ಗೆ 168 ರನ್ಗಳೊಡನೆ ಪರದಾಡುತಿತ್ತು. ದುಬೆ ಅತ್ಯುಪಯುಕ್ತ 71 ರನ್ ಬಾರಿಸಿದರು. ಕೃಷ್ಣಪ್ಪ ಗೌತಮ್ (6) ಮತ್ತು ಶಾಬಾಜ್ ನದೀಮ್ (0) ನಂತರ ಬೇಗನೇ ನಿರ್ಗಮಿಸಿದರು.
ಸ್ಕೋರುಗಳು: ವೆಸ್ಟ್ ಇಂಡೀಸ್ ‘ಎ’: 66.5 ಓವರುಗಳಲ್ಲಿ 228; ಭಾರತ ‘ಎ’: 99 ಓವರುಗಳಲ್ಲಿ 8 ವಿಕೆಟ್ಗೆ 299 (ಪ್ರಿಯಾಂಕ್ ಪಾಂಚಾಲ್ 49, ಶುಭಮನ್ ಗಿಲ್ 40, ವೃದ್ಧಿಮಾನ್ ಸಹಾ ಔಟಾಗದೇ 61, ಶಿವಂ ದುಬೆ 71,: ಮಿಗೆಲ್ ಕುಮಿನ್ಸ್ 36ಕ್ಕೆ3).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.