ADVERTISEMENT

ಎಂಟರ ಘಟ್ಟಕ್ಕೆ ದಿವಿಜ್‌–ಸಿಟಾಕ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 19:37 IST
Last Updated 26 ಫೆಬ್ರುವರಿ 2020, 19:37 IST

ಸ್ಯಾಂಟಿಯಾಗೊ: ಭಾರತ ದಿವಿಜ್‌ ಶರಣ್‌ ಮತ್ತು ನ್ಯೂಜಿಲೆಂಡ್‌ನ ಆರ್ಟೆಮ್ ಸಿಟಾಕ್‌ ಜೋಡಿ ಸ್ಯಾಂಟಿಯಾಗೊದಲ್ಲಿ ನಡೆಯುತ್ತಿರುವ ಚಿಲಿ ಓಪನ್‌ ಎಟಿಪಿ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್‌ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದರು.‌

ಈ ಟೂರ್ನಿಯಲ್ಲಿ ಮೂರನೇ ಶ್ರೇಯಾಂಕ ಪಡೆದಿದ್ದ ಭಾರತ– ಕಿವೀಸ್‌ ಆಟಗಾರರ ಜೋಡಿ 7–6, 7–6 ರಿಂದ ಬ್ರೆಜಿಲ್‌ನ ಟಿಯಾಗೊ ಮೊಂತೇರೊ– ಫರ್ನಾಂಡೊ ಜೋಡಿಯನ್ನು ಸೋಲಿಸಿತು.

ದಿವಿಜ್‌– ಸಿಟಾಕ್‌ ಜೋಡಿಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್‌ನ ರಾಬರ್ಟೊ ಕಾರ್ಬಲೆಸ್‌ ಬೀನಾ– ಅಲೆಸಾಂಡ್ರೊ ಡೇವಿಡೊವಿಚ್‌ ಫೊಕಿನಾ ಜೋಡಿಯನ್ನು ಎದುರಿಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.