ADVERTISEMENT

IPL 2022: ಡೇವಿಡ್ ವಾರ್ನರ್ ಮುಂದೆ ತಾಕತ್ತು ಪ್ರದರ್ಶಿಸಿದ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಏಪ್ರಿಲ್ 2022, 10:42 IST
Last Updated 17 ಏಪ್ರಿಲ್ 2022, 10:42 IST
ಟ್ವಿಟರ್ ಚಿತ್ರ
ಟ್ವಿಟರ್ ಚಿತ್ರ   

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 16 ರನ್ ಅಂತರದ ಗೆಲುವು ದಾಖಲಿಸಿದೆ.

ಈ ನಡುವೆ ಡೆಲ್ಲಿ ಬ್ಯಾಟರ್ ಡೇವಿಡ್ ವಾರ್ನರ್ ವಿಕೆಟ್ ಪತನಗೊಂಡಾಗ ವಿರಾಟ್ ಕೊಹ್ಲಿ ಸಂಭ್ರಮ ಆಚರಿಸಿರುವ ಶೈಲಿಯು ಹೆಚ್ಚು ಸುದ್ದಿ ಮಾಡುತ್ತಿದೆ.

ಇದನ್ನೂ ಓದಿ:

ಡೆಲ್ಲಿ ಚೇಸಿಂಗ್ ವೇಳೆ ವನಿಂದು ಹಸರಂಗ ಅವರು ಎಸೆದ ಇನ್ನಿಂಗ್ಸ್‌ನ 12ನೇ ಓವರ್‌ನಲ್ಲಿ ಘಟನೆ ನಡೆದಿತ್ತು.

ADVERTISEMENT

ಮೈದಾನದಲ್ಲಿ ಸದಾ ಆಕ್ರಣಕಾರಿ ಶೈಲಿ ಮೈಗೂಡಿಸಿಕೊಂಡಿರುವ ವಿರಾಟ್, ನೇರವಾಗಿ ವಾರ್ನರ್ ಸಮೀಪಕ್ಕೆ ತೆರಳಿ ತಾಕತ್ತು ಪ್ರದರ್ಶಿಸಿದರು.

ಆದರೆ ಯಾವುದೇ ನಿಂದನಾತ್ಮಕ ಶಬ್ದವನ್ನು ಕೊಹ್ಲಿ ಪ್ರಯೋಗ ಮಾಡಲಿಲ್ಲ. ಇನ್ನೊಂದೆಡೆ ವಾರ್ನರ್ ತಲೆ ತಗಿಸುತ್ತಾ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ವಾರ್ನರ್ ಪುತ್ರಿಯರು ಸಹ ಬೇಸರಗೊಂಡಿರುವ ದೃಶ್ಯ ಕಂಡುಬಂತು.

ಆರ್‌ಸಿಬಿ ಗೆಲುವಿನಲ್ಲಿ ಡೇವಿಡ್ ವಾರ್ನರ್ ವಿಕೆಟ್ ಮಹತ್ವದೆನಿಸಿತ್ತು. ಐಪಿಎಲ್‌ನಲ್ಲಿ ದಾಖಲೆಯ 52ನೇ ಅರ್ಧಶತಕ ಗಳಿಸಿರುವ ವಾರ್ನರ್ 38 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್‌ನಿಂದ 66 ರನ್ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.