ADVERTISEMENT

IPL Playoffs 2025 | ದಕ್ಷಿಣ ಆಫ್ರಿಕಾ ಆಟಗಾರರನ್ನು ಬಿಡಿ: ಬಿಸಿಸಿಐ ಸೂಚನೆ

ಐಪಿಎಲ್‌ ಪ್ಲೇ ಆಫ್‌: ತಂಡಗಳಿಗೆ ಬಿಸಿಸಿಐ ಸೂಚನೆ

ಪಿಟಿಐ
Published 16 ಮೇ 2025, 0:25 IST
Last Updated 16 ಮೇ 2025, 0:25 IST
<div class="paragraphs"><p>ಐಪಿಎಲ್ ಟ್ರೋಫಿ</p></div>

ಐಪಿಎಲ್ ಟ್ರೋಫಿ

   

ಪಿಟಿಐ

ನವದೆಹಲಿ: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಆಡುವ ದಕ್ಷಿಣ ಆಫ್ರಿಕಾದ ಆಟಗಾರರನ್ನು ಮೇ 26ರ ಒಳಗೆ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಐಪಿಎಲ್‌ ಫ್ರಾಂಚೈಸಿಗಳಿಗೆ ಬಿಸಿಸಿಐ ಗುರುವಾರ ಸೂಚನೆ ನೀಡಿದೆ. ಹೀಗಾಗಿ ಈ ಆಟಗಾರರು ಪ್ಲೇ ಆಫ್‌ ಹಂತದಿಂದ ಲಭ್ಯರಿರುವುದಿಲ್ಲ.

ADVERTISEMENT

ಆದರೆ ವೆಸ್ಟ್‌ ಇಂಡೀಸ್ ಆಟಗಾರರು ಟೂರ್ನಿಯ ಉಳಿದೆಲ್ಲಾ ಪಂದ್ಯಗಳಿಗೆ ಲಭ್ಯರಿರಲಿದ್ದಾರೆ ಎಂದು ತಂಡಗಳಿಗೆ ನೀಡಿದ ಸೂಚನೆಯಲ್ಲಿ ತಿಳಿಸಲಾಗಿದೆ. ಭಾರತ– ಪಾಕಿಸ್ತಾನ ಗಡಿ ಸಂಘರ್ಷದ ಪರಿಣಾಮ ಮೇ 9 ರಿಂದ ಸ್ಥಗಿತಗೊಂಡಿದ್ದ ಐಪಿಎಲ್‌ನ ಉಳಿದ ಪಂದ್ಯಗಳು 17 ರಿಂದ (ಶನಿವಾರ) ಮುಂದುವರಿಯಲಿವೆ. ಮೂಲ ವೇಳಾಪಟ್ಟಿಯ ಪ್ರಕಾರ ಮೇ 25ರಂದು ಫೈನಲ್ ನಡೆಯಬೇಕಿತ್ತು. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಅಂತಿಮ ಪಂದ್ಯ ಜೂನ್‌ 3ಕ್ಕೆ ನಿಗದಿ ಆಗಿದೆ.

ಹೊರದೇಶಗಳ ಆಟಗಾರರ ಲಭ್ಯತೆಗೆ ಸಂಬಂಧಿಸಿ ಬಿಸಿಸಿಐ, ಕ್ರಿಕೆಟ್‌ ಸೌತ್‌ ಆಫ್ರಿಕಾ ಸೇರಿದಂತೆ ವಿದೇಶಿ ಮಂಡಳಿಗಳ ಜೊತೆ ಮಾತುಕತೆ ನಡೆಸಿತ್ತು. ಆದರೆ ಲಾರ್ಡ್ಸ್‌ನಲ್ಲಿ ಜೂನ್‌ 11ರಿಂದ ಡಬ್ಲ್ಯುಟಿಸಿ ಫೈನಲ್ ಇರುವ ಕಾರಣ ದಕ್ಷಿಣ ಆಫ್ರಿಕಾದ ಕ್ರಿಕೆಟ್‌ ಮಂಡಳಿ ತನ್ನ ಬಿಗಿಪಟ್ಟು ಸಡಿಲಿಸಲಿಲ್ಲ.

ದಕ್ಷಿಣ ಆಫ್ರಿಕಾ ಆಟಗಾರರು ಮೇ 31ರಂದು ಇಂಗ್ಲೆಂಡ್‌ನಲ್ಲಿ ಕೂಡಿಕೊಳ್ಳಲಿದ್ದಾರೆ. ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯಗಳ  ಸರಣಿಯನ್ನು ಆಡಲಿದ್ದು ಮೊದಲ ಪಂದ್ಯ ಇದೇ ತಿಂಗಳ 29ರಂದು ನಡೆಯಲಿದೆ.

ದಕ್ಷಿಣ ಆಫ್ರಿಕಾದ ಆಟಗಾರರಾದ ಮಾರ್ಕೊ ಯಾನ್ಸೆನ್‌ (ಪಂಜಾಬ್ ಕಿಂಗ್ಸ್‌), ಟ್ರಿಸ್ಟನ್‌ ಸ್ಟಬ್ಸ್ (ಡೆಲ್ಲಿ ಕ್ಯಾಪಿಟಲ್ಸ್), ಕಗಿಸೊ ರಬಾಡ (ಗುಜರಾತ್‌ ಟೈಟನ್ಸ್‌), ಕಾರ್ಬಿನ್ ಬಾಷ್ (ಮುಂಬೈ ಇಂಡಿಯನ್ಸ್) ಅವರು ತಮ್ಮ ತಂಡಗಳ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಲಯದಲ್ಲಿರುವ ಇಂಗ್ಲೆಂಡ್‌ ಬ್ಯಾಟರ್‌ ಜೋಸ್‌ ಬಟ್ಲರ್ ಅವರನ್ನು ಟೈಟನ್ಸ್‌ ತಂಡ ಪ್ಲೇ ಆಫ್‌ ಪಂದ್ಯಗಳಿಗೆ ಕಳೆದುಕೊಳ್ಳುವುದು ನಿಚ್ಚಳವಾಗಿದೆ. ಅವರು ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.