ADVERTISEMENT

IPL 2025: ರಾಜಸ್ಥಾನಗೆ 188 ರನ್‌ಗಳ ಗೆಲುವಿನ ಗುರಿ ನೀಡಿದ ಚೆನ್ನೈ

​ಪ್ರಜಾವಾಣಿ ವಾರ್ತೆ
Published 20 ಮೇ 2025, 15:50 IST
Last Updated 20 ಮೇ 2025, 15:50 IST
   

ನವದೆಹಲಿ: ಪಾಯಿಂಟ್ಸ್‌ ಪಟ್ಟಿಯ ತಳದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ 188 ರನ್‌ಗಳ ಗೆಲುವಿನ ನೀಡಿದೆ.

ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ.

ಟಾಸ್‌ ಗೆದ್ದ ರಾಜಸ್ಥಾನ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್‌ ಮಾಡಿತು.

ADVERTISEMENT

ಚೆನ್ನೈ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 187 ರನ್‌ಗಳಿಸಿತು. ಆಯುಷ್‌ 43, ಬ್ರೇವಿಸ್‌ 42 ಶಿವಂ ದುಬೆ 39 ರನ್‌ಗಳಿಸಿದರು.

ರಾಜಸ್ಥಾನ ಪರ ಯಧುವೀರ್‌ ಮತ್ತು ಆಕಾಶ್‌ ತಲಾ 3 ವಿಕೆಟ್‌ ಪಡೆದರು.

ಐಪಿಎಲ್‌ ಪ್ಲೇ ಆಫ್ ದೃಷ್ಟಿಯಿಂದ ಈ ಪಂದ್ಯ ಏನೂ ಮಹತ್ವ ಪಡೆದಿಲ್ಲ. ಸಿಎಸ್‌ಕೆ ಇನ್ನೂ ಒಂದು ಪಂದ್ಯ ಬಾಕಿ ಇದೆ. ಈ ಪಂದ್ಯ ರಾಯಲ್ಸ್ ತಂಡಕ್ಕೆ ಈ ಸಾಲಿನ ಕೊನೆಯದ್ದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.