ADVERTISEMENT

IPL-2020 | KKR vs CSK: ಜಡೇಜಾ ‘ಸಿಕ್ಸರ್’ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಜಯ

ದುಬೈ: ಐಪಿಎಲ್ ಟೂರ್ನಿಯ ಪ್ಲೇ ಆಫ್‌ನಿಂದ ಈಗಾಗಲೇ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತ ರೈಡರ್ಸ್‌ ತಂಡದ ವಿರುದ್ಧ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದ ಕಿಂಗ್ಸ್‌, ಕೋಲ್ಕತ್ತ ತಂಡದ ಪ್ಲೇ ಆಫ್‌ ಕನಸಿಗೆ ಅಡ್ಡಿಪಡಿಸಿದೆ. ಕೋಲ್ಕತ್ತ ತಂಡಕ್ಕೆ ಟೂರ್ನಿಯಲ್ಲಿ ಇದು 7ನೇ ಸೋಲು. ಈ ತಂಡದ ಖಾತೆಯಲ್ಲಿ 12 ಅಂಕಗಳಿದ್ದು, ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲೇ ಉಳಿದಿದೆ. ರೈಡರ್ಸ್ ತನ್ನ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ ಆಡಲಿದ್ದು, ಆ ಪಂದ್ಯದಲ್ಲಿ ಗೆದ್ದರೂ ಪ್ಲೇ ಆಫ್‌ಗೆ ತಲುಪುವುದು ಸುಲಭವಲ್ಲ. ಉಳಿದ ತಂಡಗಳ ಫಲಿತಾಂಶಗಳು ರೈಡರ್ಸ್‌ನ ಮುಂದಿನ ಹಾದಿಯನ್ನು ನಿರ್ಧರಿಸಲಿವೆ. ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್‌, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಕಿಂಗ್ಸ್‌ ಇಲವೆನ್ ಪಂಜಾಬ್‌ ತಂಡಗಳು ಮೊದಲ ನಾಲ್ಕು ಸ್ಥಾನಗಳಲ್ಲಿ ಉಳಿದಿವೆ.

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 18:22 IST
Last Updated 29 ಅಕ್ಟೋಬರ್ 2020, 18:22 IST

ಚೆನ್ನೈಗೆ 6 ವಿಕೆಟ್‌ ಜಯ

ಕೊನೆಯ ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್‌ ಸಿಡಿಸಿದ ರವೀಂದ್ರ ಜಡೇಜಾ, ಚೆನ್ನೈ ತಂಡಕ್ಕೆ 6 ವಿಕೆಟ್‌ಗಳ ಗೆಲುವು ತಂದುಕೊಟ್ಟರು.

ಕೊನೆಯ ಓವರ್‌ನಲ್ಲಿ ಚೆನ್ನೈಗೆ 10 ರನ್ ಬೇಕಿತ್ತು. ಈ ಓವರ್‌ ಎಸೆದ ಕಮಲೇಶ್ ನಾಗರಕೋಟಿ ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ 3 ರನ್ ನೀಡಿದರು. ಹೀಗಾಗಿ ಚೆನ್ನೈ ತಂಡದ ಕೈಯಿಂದ ಜಾರುವ ಸಾಧ್ಯತೆ ಇತ್ತು. ಆದರೆ, ಕೊನೆಯ ಎರಡೂ ಎಸೆತಗಳಲ್ಲಿ ಸಿಕ್ಸರ್‌ ಸಿಡಿದ ಕಾರಣ ಗೆಲುವು ಸಾಧ್ಯವಾಯಿತು.

ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿರುವ ಕಿಂಗ್ಸ್‌ ತಂಡ ಆಡಿರುವ 13 ಪಂದ್ಯಗಳಿಂದ 5ನೇ ಗೆಲುವು ಸಾಧಿಸಿತು. ಇತ್ತ ಕೆಕೆಆರ್‌ ಕೂಡ ಇಷ್ಟ ಪಂದ್ಯಗಳನ್ನು ಆಡಿದ್ದು, 12 ಪಾಯಿಂಟ್ಸ್‌ಗಳೊಂದಿಗೆ 5ನೇ ಸ್ಥಾನದಲ್ಲಿ ಉಳಿದಿದೆ.

ADVERTISEMENT

19ನೇ ಓವರ್ ಮುಕ್ತಾಯ

19 ಓವರ್‌ಗಳ ಆಟ ಮುಕ್ತಾಯವಾಗಿದ್ದು ಚೆನ್ನೈ ತಂಡ 163 ರನ್ ಗಳಿಸಿಕೊಂಡಿದೆ. ರವಿಂದ್ರ ಜಡೇಜಾ ಮತ್ತು ಸ್ಯಾಮ್‌ ಕರನ್ ಕ್ರೀಸ್‌ನಲ್ಲಿದ್ದು, ಕೊನೆಯ ಓವರ್‌ನಲ್ಲಿ 10 ರನ್‌ ಗಳಿಸಬೇಕಿದೆ.

ಬೌಲರ್‌: ಲಾಕಿ ಫರ್ಗ್ಯೂಸನ್‌ (Wd 1 0 1 4 N2 6 4)

ಪೆವಿಲಿಯನ್ ಸೇರಿಕೊಂಡ ಗಾಯಕವಾಡ್‌

ಪ್ಯಾಟ್‌ ಕಮಿನ್ಸ್ ಎಸೆದ 18ನೇ ಓವರ್‌ನಲ್ಲಿ ಗಾಯಕವಾಡ್ ವಿಕೆಟ್‌ ಒಪ್ಪಿಸಿದ್ದಾರೆ. ತಂಡದ ಮೊತ್ತ ಸದ್ಯ 4 ವಿಕೆಟ್‌ಗೆ 143 ರನ್ ಆಗಿದೆ. ಇದೊಂದಿಗೆ ಸಿಎಸ್‌ಕೆ ಒತ್ತಡ ಹೆಚ್ಚಾಗಿದೆ.

ಗಾಯಕವಾಡ್‌ 53 ಎಸೆತಗಳಲ್ಲಿ 72 ರನ್ ಗಳಿಸಿದ್ದರು.

2 ಓವರ್ ಬಾಕಿ ಇದ್ದು, 30 ರನ್ ಬೇಕಾಗಿದೆ.
ಬೌಲರ್‌: ಪ್ಯಾಟ್‌ ಕಮಿನ್ಸ್‌ (1 W 0 1 1 1)

17ನೇ ಓವರ್ ಮುಕ್ತಾಯ

ಸಿಎಸ್‌ಕೆ 3 ವಿಕೆಟ್‌ಗಳನ್ನು ಕಳೆದುಕೊಂಡು 139 ರನ್‌ ಗಳಿಸಿದೆ. 18 ಎಸೆತಗಳಲ್ಲಿ ಗೆಲ್ಲಲು 34 ರನ್‌ ಬೇಕಾಗಿದೆ.

ಬೌಲರ್‌: ಲಾಕಿ ಫರ್ಗ್ಯೂಸನ್‌ (1 1 2 4 Wd 1 1)

16ನೇ ಓವರ್ ಮುಕ್ತಾಯ

16ನೇ ಓವರ್‌ ಮುಕ್ತಾಯವಾಗಿದ್ದು, ಕಿಂಗ್ಸ್‌ 3 ವಿಕೆಟ್‌ಗೆ 128 ರನ್ ಗಳಿಸಿಕೊಂಡಿದೆ.

ನಾಲ್ಕು ಓವರ್‌ಗಳಲ್ಲಿ ಗೆಲ್ಲಲು 45 ರನ್ ಬೇಕಾಗಿದೆ.

ಬೌಲರ್‌: ಸುನೀಲ್ ನರೇನ್‌ (0 1 0 1 1 4)

15ನೇ ಓವರ್ ಮುಕ್ತಾಯ

ಅಂಬಟಿ ರಾಯುಡು ವಿಕೆಟ್ ಪತನದ ಬಳಿಕ ಬಂದ ನಾಯಕ ಧೋನಿ ಕೇವಲ 1 ರನ್‌ ಗಳಿಸಿ ಔಟಾದರು. ವರುಣ್‌ ಚಕ್ರವರ್ತಿ ಅವರು ಎಸೆತವನ್ನು ಅಂದಾಜಿಸಲು ವಿಫಲರಾದ ಅವರು ಕ್ಲೀನ್‌ ಬೌಲ್ಡ್‌ ಆದರು.

ಇದೀಗ ಸ್ಯಾಮ್‌ ಕರನ್ ಕ್ರೀಸ್‌ಗೆ ಬಂದಿದ್ದು, ತಂಡದ ಮೊತ್ತ 3 ವಿಕೆಟ್‌ಗೆ 121 ರನ್‌ ಆಗಿದೆ.

30 ಎಸೆತಗಳಲ್ಲಿ ಗೆಲ್ಲಲು 52 ರನ್ ಬೇಕಾಗಿದೆ.

ಬೌಲರ್: ವರುಣ್ ಚಕ್ರವರ್ತಿ (1 0 0 W 0 0)

14ನೇ ಓವರ್ ಮುಕ್ತಾಯ: ರಾಯುಡು ವಿಕೆಟ್ ಪತನ

20 ಎಸೆತಗಳಲ್ಲಿ 38 ರನ್ ಗಳಿಸಿದ್ದ ಅಂಬಟಿ ರಾಯುಡು ವಿಕೆಟ್ ಒಪ್ಪಿಸಿದ್ದಾರೆ. ಸದ್ಯ ನಾಯಕ ಎಂಎಸ್‌ ಧೋನಿ ಕ್ರೀಸ್‌ಗೆ ಬಂದಿದ್ದಾರೆ.

ತಂಡದ ಮೊತ್ತ 2 ವಿಕೆಟ್‌ಗೆ 120 ರನ್ ಆಗಿದೆ.

ಗಾಯಕವಾಡ್‌ (61) ಮತ್ತು ಧೋನಿ (1) ಕ್ರೀಸ್‌ನಲ್ಲಿದ್ದು, ಉಳಿದಿರುವ 36 ಎಸೆತಗಳಲ್ಲಿ ಚೆನ್ನೈ ತಂಡಕ್ಕೆ 53 ರನ್ ಬೇಕಾಗಿದೆ.

ಬೌಲರ್‌: ಪ್ಯಾಟ್ ಕಮಿನ್ಸ್‌ (1 4 4 W 1 1)

13ನೇ ಓವರ್ ಮುಕ್ತಾಯ

ಚೆನ್ನೈ ತಂಡದ ಮೊತ್ತ 1 ವಿಕೆಟ್‌ ನಷ್ಟಕ್ಕೆ 109 ರನ್ ಗಳಿಸಿದೆ.

ಬೌಲರ್‌: ವರುಣ್ ಚಕ್ರವರ್ತಿ (4 1 1 1 0 2)

12ನೇ ಓವರ್ ಮುಕ್ತಾಯ: ಶತಕ ಪೂರೈಸಿದ ಚೆನ್ನೈ

ಚೆನ್ನೈ ತಂಡ 1 ವಿಕೆಟ್‌ ಕಳೆದುಕೊಂಡು 100 ರನ್ ಗಳಿಸಿಕೊಂಡಿದೆ. ಋತುರಾಜ್ ಗಾಯಕವಾಡ್‌ (53) ಅರ್ಧಶತಕ ಗಳಿಸಿ ಆಡುತ್ತಿದ್ದಾರೆ. ಜೊತೆಗೆ ರಾಯುಡು ಮತ್ತು ಗಾಯಕವಾಡ್ ಜೋಡಿ 2ನೇ ವಿಕೆಟ್‌ ಜೊತೆಯಾಟದಲ್ಲಿ 50 ರನ್ ಕಲೆಹಾಕಿದೆ.

ಬೌಲರ್: ಕಮಲೇಶ್ ನಾಗರಕೋಟಿ (1 2 1 6 1 1)

11ನೇ ಓವರ್ ಮುಕ್ತಾಯ

11 ಓವರ್‌ಗಳ ಆಟ ಮುಗಿದಿದ್ದು, ಚೆನ್ನೈ ತಂಡ 1 ವಿಕೆಟ್‌ಗೆ 88 ರನ್‌ ಗಳಿಸಿದೆ.

ಬೌಲರ್‌: ಲಾಕಿ ಫರ್ಗ್ಯೂಸನ್ (4 1 1 6 1 1)

10ನೇ ಓವರ್ ಮುಕ್ತಾಯ

10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕಿಂಗ್ಸ್‌ 1 ವಿಕೆಟ್‌ಗೆ 74 ರನ್ ಗಳಿಸಿದೆ. ನಿತೀಶ್ ರಾಣಾ ಎಸೆದ ಈ ಓವರ್‌ನ ಮೊದಲ ಮೂರು ಎಸೆತಗಳನ್ನು ರಾಯುಡು ಬೌಂಡರಿಗಟ್ಟಿದರು.

ಬೌಲರ್‌: ನಿತೀಶ್‌ ರಾಣಾ (4 4 4 Wd 1 1)

9ನೇ ಓವರ್ ಮುಕ್ತಾಯ

9ನೇ ಓವರ್ ಮುಕ್ತಾಯವಾಗಿದ್ದು, ಚೆನ್ನೈ ತಂಡ 1 ವಿಕೆಟ್‌ ಕಳೆದುಕೊಂಡು 58 ರನ್ ಗಳಿಸಿದೆ.

ರಾಯುಡು (4) ಮತ್ತು ಗಾಯಕವಾಡ್‌ (35) ಕ್ರೀಸ್‌ನಲ್ಲಿದ್ದಾರೆ.
ಬೌಲರ್: ಸುನೀಲ್‌ ನರೇನ್‌ (1 1 1 1 1 1)

8ನೇ ಓವರ್ ಮುಕ್ತಾಯ: ವಾಟ್ಸನ್ ವಿಕೆಟ್ ಪತನ

ಆರಂಭಿಕ ಆಟಗಾರ ಶೇನ್ ವಾಟ್ಸನ್ ಕೇವಲ 14 ರನ್‌ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಸದ್ಯ 8 ಓವರ್ ಮುಗಿದಿದ್ದು, ತಂಡದ ಮೊತ್ತ 52 ರನ್ ಆಗಿದೆ. ಇದೀಗ ಅಂಬಟಿ ರಾಯುಡು ಕ್ರೀಸ್‌ಗೆ ಬಂದಿದ್ದಾರೆ.

ಬೌಲರ್: ವರುಣ್‌ ಚಕ್ರವರ್ತಿ (0 0 6 0 1 0)

7ನೇ ಓವರ್‌ ಮುಕ್ತಾಯ

ಚೆನ್ನೈ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದೆ.
ಬೌಲರ್: ಸುನೀಲ್ ನರೇನ್ (0 1 1 0 2 1)

6ನೇ ಓವರ್ ಮುಕ್ತಾಯ; ನಷ್ಟವಿಲ್ಲದೆ 44 ರನ್ ಗಳಿಸಿದ ಕಿಂಗ್ಸ್

ಫವರ್‌ ಪ್ಲೇ ಮುಕ್ತಾಯವಾಗಿದ್ದು, ಕಿಂಗ್ಸ್ ಪಡೆ ವಿಕೆಟ್ ನಷ್ಟವಿಲ್ಲದೆ 44 ರನ್ ಗಳಿಸಿದೆ. ಈ ಹಂತದಲ್ಲಿ ಕೆಕೆಆರ್‌ ವಿಕೆಟ್‌ ನಷ್ಟವಿಲ್ಲದೆ 48 ರನ್ ಗಳಿಸಿತ್ತು.

ಬೌಲರ್: ವರುಣ್‌ ಚಕ್ರವರ್ತಿ (0 0 6 0 1 0)

5ನೇ ಓವರ್ ಮುಕ್ತಾಯ

5ನೇ ಓವರ್‌ ಮುಕ್ತಾಯವಾಗಿದ್ದು, ಕಿಂಗ್ಸ್ 37 ರನ್ ಗಳಿಸಿದೆ. ವಾಟ್ಸನ್ (13), ಗಾಯಕವಾಡ್‌ (19) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಲಾಕಿ ಫರ್ಗ್ಯೂಸನ್ (4 0 4 1 0 0)

4ನೇ ಓವರ್ ಮುಕ್ತಾಯ

ಕೆಕೆಆರ್ ನೀಡಿರುವ 173 ರನ್ ಗುರಿ ಎದುರು ಬ್ಯಾಟಿಂಗ್ ಆರಂಬಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್ ತಂಡ 4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 28 ರನ್ ಗಳಿಸಿದೆ.

ಶೇನ್ ವಾಟ್ಸನ್ ಮತ್ತು ಋತುರಾಜ್‌ ಗಾಯಕವಾಡ್ ಕ್ರೀಸ್‌ನಲ್ಲಿದ್ದಾರೆ.

ಬೌಲರ್: ಸುನೀಲ್ ನರೇನ್ (1 1 0 1 1 1)

ಕಿಂಗ್ಸ್‌ಗೆ 173 ರನ್ ಗುರಿ

ಕೊನೆಯ ಓವರ್‌ನಲ್ಲಿ 1 ವಿಕೆಟ್‌ ಕಳೆದುಕೊಂಡು 9 ರನ್ ಗಳಿಸಿದ ಕೆಕೆಆರ್, ಚೆನ್ನೈ ತಂಡಕ್ಕೆ 173 ರನ್ ಗುರಿ ನೀಡಿದೆ. ಈ ಓವರ್‌ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ಮಾರ್ಗನ್‌ 2ನೇ ಎಸೆತದಲ್ಲಿ ಔಟಾದರು.

ದಿನೇಶ್ ಕಾರ್ತಿಕ್‌ (21) ಮತ್ತು ರಾಹುಲ್ ತ್ರಿಪಾಠಿ (3) ಔಟಾಗದೆ ಉಳಿದರು.
ಬೌಲರ್: ಲುಂಗಿ ಎನ್‌ಗಿಡಿ (4 W 1 1 L1 2)

19ನೇ ಓವರ್ ಮುಕ್ತಾಯ

19 ಓವರ್‌ಗಳ ಅಂತ್ಯಕ್ಕೆ ಕೆಕೆಆರ್ ತಂಡದ ಮೊತ್ತ 4 ವಿಕೆಟ್‌ಗೆ 163 ರನ್ ಆಗಿದೆ. ನಾಯಕ ಎಯಾನ್ ಮಾರ್ಗನ್‌ ಮತ್ತು ಮಾಜಿ ನಾಯಕ ದಿನೇಶ್‌ ಕಾರ್ತಿಕ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಸ್ಯಾಮ್ ಕರನ್‌ (4 1 4 2 0 2)

18ನೇ ಓವರ್ ಮುಕ್ತಾಯ: ನಿತೀಶ್ ರಾಣಾ ಔಟ್; ಕೆಕೆಆರ್‌ 150

18 ಓವರ್‌ಗಳ ಅಂತ್ಯಕ್ಕೆ ಕೆಕೆಆರ್‌ 150 ರನ್‌ ಗಳಿಸಿಕೊಂಡಿದೆ. 61 ಎಸೆತಗಳಲ್ಲಿ 87 ರನ್ ಗಳಿಸಿದ್ದ ನಿತೀಶ್ ರಾಣಾ ವಿಕೆಟ್‌ ಒಪ್ಪಿಸಿದ್ದು, ಮಾಜಿ ನಾಯಕ ದಿನೇಶ್‌ ಕಾರ್ತಿಕ್ ಕ್ರೀಸ್‌ಗೆ ಬಂದಿದ್ದಾರೆ.
ಬೌಲರ್‌: ಲುಂಗಿ ಎನ್‌ಗಿಡಿ ( Wd W 1 2 4 2 4 )

17ನೇ ಓವರ್ ಮುಕ್ತಾಯ

17ನೇ ಓವರ್‌ನ ಅಂತ್ಯಕ್ಕೆ ಕೆಕೆಆರ್ 136 ರನ್ ಗಳಿಸಿದೆ.

ಬೌಲರ್: ದೀಪಕ್ ಚಹಾರ್ (4 0 4 1 1 1)

16ನೇ ಓವರ್ ಮುಕ್ತಾಯ

ಕರಣ್ ಶರ್ಮಾ ಎಸೆದ 16ನೇ ಓವರ್‌ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದ ನಿತೀಶ್ ರಾಣಾ ತಮ್ಮ ತಂಡದ ಮೊತ್ತವನ್ನು 125ಕ್ಕೆ ಏರಿಸಿದರು.
(6 6 6 0 1 0)

15ನೇ ಓವರ್ ಮುಕ್ತಾಯ: ಶತಕ ಪೂರೈಸಿದ ಕೆಕೆಆರ್‌

15 ಓವರ್‌ಗಳ ಅಂತ್ಯಕ್ಕೆ ಕೆಕೆಆರ್‌ 106 ರನ್ ಗಳಿಸಿದೆ.
ಬೌಲರ್‌:  ರವಿಂದ್ರ ಜಡೇಜಾ (2 4 0 0 1 2)

14ನೇ ಓವರ್ ಮುಕ್ತಾಯ: ಅರ್ಧಶತಕ ಗಳಿಸಿದ ರಾಣಾ

ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ನಿತೀಶ್ ರಾಣಾ (51) 44ನೇ ಎಸೆತದಲ್ಲಿ ಅರ್ಧಶತಕ ಗಳಿಸಿ ಆಡುತ್ತಿದ್ದಾರೆ.

ಇನ್ನೊಂದು ತುದಿಯಲ್ಲಿ ಮಾರ್ಗನ್ ಕ್ರೀಸ್‌ನಲ್ಲಿದ್ದು, ತಂಡದ ಮೊತ್ತ 3 ವಿಕೆಟ್‌ಗೆ 97 ರನ್ ಆಗಿದೆ.
ಬೌಲರ್‌: ಕರಣ್‌ ಶರ್ಮಾ (1 1 0 0 1 1)

13ನೇ ಓವರ್ ಮುಕ್ತಾಯ: ಮೂರನೇ ವಿಕೆಟ್ ಪತನ

ಈ ಪಂದ್ಯದಲ್ಲಿ ಪ್ರಸಿದ್ಧ ಕೃಷ್ಣ ಬದಲು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರುವ ರಿಂಕು ಸಿಂಗ್ ಕೇವಲ 11 ರನ್ ಗಳಿಸಿ ಔಟಾಗಿದ್ದಾರೆ.
ಸದ್ಯ ನಾಯಕ ಎಯಾನ್ ಮಾರ್ಗನ್ ಕ್ರೀಸ್‌ಗೆ ಬಂದಿದ್ದು, ತಂಡದ ಮೊತ್ತ 3 ವಿಕೆಟ್‌ಗೆ 93 ರನ್‌ ಆಗಿದೆ.
ಬೌಲರ್‌: ರವೀಂದ್ರ ಜಡೇಜಾ (1 1 1 4 w 0)    

12ನೇ ಓವರ್ ಮುಕ್ತಾಯ

12 ಓವರ್‌ಗಳ ಅಂತ್ಯಕ್ಕೆ ಕೆಕೆಆರ್‌ ಮೊತ್ತ 2 ವಿಕೆಟ್‌ಗೆ 86 ರನ್‌ ಆಗಿದೆ. ರಿಂಕು (6), ರಾಣಾ (47) ಬ್ಯಾಟಿಂಗ್ ಮಾಡುತ್ತಿದ್ದಾರೆ.

ಬೌಲರ್‌: ಕರಣ್‌ ಶರ್ಮಾ (1 1 0 1 1 0)

11ನೇ ಓವರ್ ಮುಕ್ತಾಯ

ಕೆಕೆಆರ್‌ 2 ವಿಕೆಟ್‌ಗೆ 82 ರನ್ ಗಳಿಸಿದೆ.
ಬೌಲರ್‌: ಮಿಚೇಲ್ ಸ್ಯಾಂಟ್ನರ್ (1 1 1 1 4 4)

10ನೇ ಓವರ್ ಮುಕ್ತಾಯ

10 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕೆಕೆಆರ್‌ ತಂಡ 2 ವಿಕೆಟ್‌ಗಳನ್ನು ಕಳೆದುಕೊಂಡು 70 ರನ್ ಗಳಿಸಿಕೊಂಡಿದೆ. ಗಿಲ್‌ (26) ಮತ್ತು ನರೇನ್‌ (2) ವಿಕೆಟ್‌ ಒಪ್ಪಿಸಿದ್ದಾರೆ.

ರಿಂಕು ಸಿಂಗ್ (2) ಮತ್ತು ರಾಣಾ (35) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಲುಂಗಿ ಎನ್‌ಗಿಡಿ (1 1 0 4 0 1)

9ನೇ ಓವರ್ ಮುಕ್ತಾಯ: ವಿಕೆಟ್‌ ಒಪ್ಪಿಸಿದ ನರೇನ್

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಸುನೀಲ್‌ ನರೇನ್ ಕೇವಲ 7 ರನ್ ಗಳಿಸಿ ಔಟಾದರು. ಸದ್ಯ ರಿಂಕು ಸಿಂಗ್‌ ಕ್ರೀಸ್‌ಗೆ ಬಂದಿದ್ದು, ತಂಡದ ಮೊತ್ತ 2 ವಿಕೆಟ್‌ಗೆ 63 ರನ್ ಆಗಿದೆ.

ಬೌಲರ್‌: ಮಿಚೇಲ್ ಸ್ಯಾಂಟ್ನರ್‌ (0 0 W 1 1 1)

8ನೇ ಓವರ್ ಮುಕ್ತಾಯ: ಗಿಲ್‌ ವಿಕೆಟ್ ಪತನ

8 ಓವರ್‌ಗಳ ಅಂತ್ಯಕ್ಕೆ ಕೆಕೆಆರ್‌ 60 ರನ್ ಗಳಿಸಿದೆ.

ಕರಣ್ ಶರ್ಮಾ ಎಸೆದ ಈ ಓವರ್‌ನಲ್ಲಿ ಶುಭಮನ್‌ ಗಿಲ್‌ (26) ಕ್ಲೀನ್‌ ಬೌಲ್ಡ್ ಆದರು. ಇದೀಗ ಸುನೀಲ್ ನರೇನ್ ಕ್ರೀಸ್‌ಗೆ ಬಂದಿದ್ದಾರೆ.
(1 W 0 0 6 1)

7ನೇ ಓವರ್‌ ಮುಕ್ತಾಯ

7ನೇ ಓವರ್‌ನಲ್ಲಿ ಕೆಕೆಆರ್‌ 50 ರನ್ ಗಡಿ ದಾಟಿದೆ. ಗಿಲ್‌ (26) ಮತ್ತು ರಾಣಾ (26) ಕ್ರೀಸ್‌ನಲ್ಲಿದ್ದಾರೆ.
ಬೌಲರ್‌: ರವಿಂದ್ರ ಜಡೇಜಾ (1 1 1 0 0 1)

ರಾಣಾ ಬ್ಯಾಟ್‌ನಿಂದ 600ನೇ ಸಿಕ್ಸರ್‌

ಟೂರ್ನಿಯಲ್ಲಿ ಈ ಪಂದ್ಯಕ್ಕೂ ಮೊದಲು 599 ಸಿಕ್ಸರ್‌ಗಳು ದಾಖಲಾಗಿದ್ದು. ಈ ಪಂದ್ಯದ ಆರನೇ ಓವರ್ ಬೌಲಿಂಗ್ ಮಾಡಿದ ಮಿಚೇಲ್‌ ಸ್ಯಾಂಟ್ನರ್‌ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ನಿತೀಶ್ ರಾಣಾ ಟೂರ್ನಿಯ 600ನೇ ಸಿಕ್ಸರ್ ಸಿಡಿಸಿದರು. ಇದು ಟೂರ್ನಿಯ 49ನೇ ಪಂದ್ಯ.

ಈ ಪಂದ್ಯದಲ್ಲಿ ರಾಣಾ ಒಟ್ಟು 4 ಸಿಕ್ಸರ್‌ಗಳನ್ನು ಸಿಡಿಸಿದರು.

ಪವರ್ ಪ್ಲೇ ಮುಕ್ತಾಯ; ವಿಕೆಟ್‌ ನಷ್ಟವಿಲ್ಲದೆ 48 ರನ್ ಗಳಿಸಿದ ಕೆಕೆಆರ್

ಆರು ಓವರ್‌ಗಳ ಆಟ ಮುಕ್ತಾಯವಾಗಿದ್ದು, ಕೆಕೆಆರ್ ವಿಕೆಟ್ ನಷ್ಟವಿಲ್ಲದೆ 48 ರನ್ ಗಳಿಸಿದೆ.

ಗಿಲ್‌ ಮತ್ತು ರಾಣಾ ತಲಾ 24 ರನ್ ಗಳಿಸಿ ಆಡುತ್ತಿದ್ದಾರೆ.

ಬೌಲರ್‌: ಮಿಚೇಲ್‌ ಸ್ಯಾಂಟ್ನರ್ (1 0 4 4 6 0)

5ನೇ ಓವರ್ ಮುಕ್ತಾಯ

ಕೆಕೆಆರ್‌ 5 ಓವರ್‌ಗಳಲ್ಲಿ 33 ರನ್ ಗಳಿಸಿದೆ.
ಬೌಲರ್‌: ಲುಂಗಿ ಎನ್‌ ಗಿಡಿ (0 0 1 0 0 4)

4ನೇ ಓವರ್ ಮುಕ್ತಾಯ

ಕೆಕೆಆರ್‌ ವಿಕೆಟ್ ನಷ್ಟವಿಲ್ಲದೆ 28 ರನ್ ಗಳಿಸಿಕೊಂಡಿದೆ.
ಬೌಲರ್: ಸ್ಯಾಮ್ ಕರನ್ (4 1 0 0 0 0)

3ನೇ ಓವರ್ ಮುಕ್ತಾಯ

ಕೆಕೆಆರ್‌ 23 ರನ್‌ ಗಳಿಸಿದ್ದು, ಆರಂಭಿಕರಾದ ಗಿಲ್ ಮತ್ತು ರಾಣಾ ಕ್ರೀಸ್‌ನಲ್ಲಿದ್ದಾರೆ.
ಬೌಲರ್: ದೀಪಕ್ ಚಹಾರ್‌ (4 1 0 1 1 0)

2ನೇ ಓವರ್ ಮುಕ್ತಾಯ

2 ಓವರ್‌ಗಳ ಅಂತ್ಯಕ್ಕೆ ಕೆಕೆಆರ್‌ 16 ರನ್ ಗಳಿಸಿದೆ.
ಬೌಲರ್‌: ಸ್ಯಾಮ್ ಕರನ್ (1 0 0 0 1 1)

ಇನಿಂಗ್ಸ್ ಆರಂಭಿಸಿದ ಕೆಕೆಆರ್

ಕೆಕೆಆರ್‌ ಪರ ಶುಭಮನ್‌ ಗಿಲ್‌ ಮತ್ತು ನಿತೀಶ್ ರಾಣಾ ಇನಿಂಗ್ಸ್‌ ಆರಂಭಿಸಿದ್ದು, ಮೊದಲ ಓವರ್‌ನಲ್ಲಿ 13 ರನ್ ಗಳಿಸಿಕೊಂಡಿದ್ದಾರೆ.
ಬೌಲರ್‌: ದೀಪಕ್ ಚಹಾರ್ (4 4 1 4 0 0)

ಹನ್ನೊಂದರ ಬಳಗ

ಕೆಕೆಆರ್‌ನಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಪ್ರಸಿದ್ಧ ಕೃಷ್ಣ ಬದಲು ರಿಂಕ್ ಸಿಂಗ್‌ ಆಡಲಿದ್ದಾರೆ. ಸಿಎಸ್‌ಕೆ ತಂಡದಲ್ಲಿ ಫಾಫ್‌ ಡು ಪ್ಲೆಸಿ, ಇಮ್ರಾನ್‌ ತಾಹಿರ್‌ ಮತ್ತು ಮೋನು ಕುಮಾರ್‌ ಹೊರಗುಳಿಯಲಿದ್ದಾರೆ. ಅವರ ಬದಲು ಶೇನ್ ವಾಟ್ಸನ್‌, ಲುಂಗಿ ಎನ್‌ಗಿಡಿ ಮತ್ತು ಕರಣ್‌ ಶರ್ಮಾ ಆಡಲಿದ್ದಾರೆ.

ರೈಡರ್ಸ್: ಶುಭಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ನಿತೀಶ್‌ ರಾಣಾ, ಸುನೀಲ್‌ ನರೇನ್‌, ಎಯಾನ್ ಮಾರ್ಗನ್(ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್‌), ಪ್ಯಾಟ್ ಕಮಿನ್ಸ್, ಲಾಕಿ ಫರ್ಗ್ಯುಸನ್, ಕಮಲೇಶ್‌ ನಾಗರಕೋಟಿ, ರಿಂಕು ಸಿಂಗ್‌, ವರುಣ್‌ ಚಕ್ರವರ್ತಿ
ಸಿಎಸ್‌ಕೆ‌: ಶೇನ್ ವಾಟ್ಸನ್‌, ಅಂಬಟಿ ರಾಯುಡು, ಎಂಎಸ್‌ ಧೋನಿ (ನಾಯಕ/ವಿಕೆಟ್‌ ಕೀಪರ್‌), ಸ್ಯಾಮ್‌ ಕರನ್‌, ರವಿಂದ್ರ ಜಡೇಜಾ, ಎನ್‌.ಜಗದೀಶನ್‌, ರಿತುರಾಜ್‌ ಗಾಯಕವಾಡ್‌, ಲುಂಗಿ ಎನ್‌ಗಿಡಿ, ಕರಣ್ ಶರ್ಮಾ, ಮಿಚೇಲ್ ಸ್ಯಾಂಟ್ನರ್, ದೀಪಕ್‌ ಚಾಹರ್‌

ನೈಟ್‌ರೈಡರ್ಸ್‌ ಬ್ಯಾಟಿಂಗ್‌

ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂಎಸ್‌ ಧೋನಿ ಅವರು ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ತಂಡ ಕಳೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 8 ವಿಕೆಟ್‌ ಅಂತರದ ಜಯ ಸಾಧಿಸಿತ್ತು. ಐದನೇ ಸ್ಥಾನದಲ್ಲಿರುವ ಕೋಲ್ಕತ್ತ ಕಿಂಗ್ಸ್‌ ಇಲವೆನ್‌ ಪಂಜಾಬ್‌ ವಿರುದ್ಧ ಕೇವಲ 12 ರನ್‌ ಅಂತರದಿಂದ ಸೋಲು ಅನುಭವಿಸಿದೆ.

ಗೆಲುವು ಯಾರಿಗೆ? ವೋಟ್ ಮಾಡಿ

ಕೋಲ್ಕತ್ತದ ಕನಸು ಭಂಗ ಮಾಡುವತ್ತ ಚೆನ್ನೈ ಚಿತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.