ADVERTISEMENT

IPL 2020 | RCB vs KKR: ಆರ್‌ಸಿಬಿಗೆ 8 ವಿಕೆಟ್‌ಗಳ ಸುಲಭ ಜಯ

ಬುಧವಾರ (ಅ.21) ಅಬುಧಾಬಿಯಲ್ಲಿ ಐಪಿಎಲ್‌ 2020 ಟೂರ್ನಿಯ 39ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌–ರಾಯಲ್ ಚಾಲೆಂಜರ್ಸ್‌ ನಡುವೆ ಹಣಾಹಣಿ ನಡೆಯುತ್ತಿದೆ. ಈಗಾಗಲೇ 12 ಪಾಯಿಂಟ್ಸ್‌ಗಳನ್ನು ಸಂಗ್ರಹಿಸಿಕೊಂಡಿರುವ ವಿರಾಟ್ ಕೊಹ್ಲಿ ಬಳಗವು ಮತ್ತೊಂದು ಜಯದ ಕನಸಿನಲ್ಲಿದೆ. 10 ಪಾಯಿಂಟ್ ಗಳಿಸಿರುವ ಕೋಲ್ಕತ್ತ ಸಹ ಹೊಸ ನಾಯಕನ ನೇತೃತ್ವದಲ್ಲಿ ಗೆಲುವಿನ ಹುಮ್ಮಸ್ಸಿನಲ್ಲಿದೆ. ಕೆಕೆಆರ್‌ಗೆ ಏಯಾನ್ ಮಾರ್ಗನ್ ಸಾರಥ್ಯವಿದ್ದು, ಲಾಕಿ ಫರ್ಗ್ಯುಸನ್ ಬೌಲಿಂಗ್‌ ಶಕ್ತಿಯಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ದಿನೇಶ್ ಕಾರ್ತಿಕ್‌, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ ಮಿಂಚುತ್ತಿದ್ದಾರೆ. ಇನ್ನೂ ಆರ್‌ಸಿಬಿ ಪರ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಮತ್ತು ದೇವದತ್ತ ಪಡಿಕ್ಕಲ್ ಬ್ಯಾಟಿಂಗ್‌ ಬಲವಿದೆ. ಬೌಲಿಂಗ್‌ನಲ್ಲಿ ಕ್ರಿಸ್ ಮೊರಿಸ್, ನವದೀಪ್ ಸೈನಿ ಮತ್ತು ಯಜುವೇಂದ್ರ ಚಾಹಲ್ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ.

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 16:59 IST
Last Updated 21 ಅಕ್ಟೋಬರ್ 2020, 16:59 IST

ಗೆಲುವಿನೊಂದಿಗೆ ಪಾಯಿಂಟ್‌ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ಆರ್‌ಸಿಬಿ

13.3 ಓವರ್‌ನಲ್ಲೇ ಆರ್‌ಸಿಬಿಗೆ ಜಯ

ಗುರ್‌ಕೀರತ್‌ 4 ಫೋರ್‌ ಸಿಡಿಸಿ 21 ರನ್‌ ಗಳಿಸಿದರು. ಕೊಹ್ಲಿ 17 ರನ್‌ ಕಲೆ ಹಾಕಿದರು. ಈ ಮೂಲಕ ಆರ್‌ಸಿಬಿ 13.2 ಓವರ್‌ಗಳಲ್ಲಿ ಗೆಲುವು ಸಾಧಿಸಿತು.

ಆರ್‌ಸಿಬಿ 11 ಓವರ್‌ಗಳಲ್ಲಿ 67 ರನ್‌

ಆರ್‌ಸಿಬಿ 11 ಓವರ್‌ಗಳಲ್ಲಿ 67 ರನ್‌. ವಿರಾಟ್‌ ಕೊಹ್ಲಿ 9ರನ್‌, ಗುರ್‌ಕೀರತ್‌ ಸಿಂಗ್‌ 12 ರನ್‌ ಗಳಿಸಿದ್ದಾರೆ.

ಆರ್‌ಸಿಬಿ ಎರಡು ವಿಕೆಟ್‌ ಪತನ

16 ರನ್‌ ಗಳಿಸಿದ್ದ ಆ್ಯರನ್‌ ಫಿಂಚ್ ಲಾಕಿ ಫರ್ಗ್ಯುಸನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಇದೇ ಓವರ್‌ನಲ್ಲಿ ಪಡಿಕ್ಕಲ್‌ (25) ಸಹ ರನ್‌ಔಟ್‌ ಆದರು.

ADVERTISEMENT

ಆರ್‌ಸಿಬಿ: 7 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 46 ರನ್‌ ಗಳಿಸಿದೆ. ವಿರಾಟ್‌ ಕೊಹ್ಲಿ ಮತ್ತು ಗುರ್‌ಕೀರತ್‌ ಸಿಂಗ್‌ ಮಾನ್ ಕಣದಲ್ಲಿದ್ದಾರೆ.

ಆರ್‌ಸಿಬಿ: 6 ಓವರ್‌ಗೆ 44 ರನ್‌

85 ರನ್‌ ಗುರಿ ಬೆನ್ನಟ್ಟಿರುವ ಆರ್‌ಸಿಬಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರುತ್ತಿದೆ. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ದೇವದತ್ತ ಪಡಿಕ್ಕಲ್‌ (24) ಆ್ಯರನ್‌ ಫಿಂಚ್ (16) ಕಣದಲ್ಲಿದ್ದಾರೆ.

6 ಓವರ್‌ ಮುಕ್ತಾಯಕ್ಕೆ 44 ರನ್‌ ಗಳಿಸಿದೆ.

ಸಿರಾಜ್‌ ಹೊಸ ದಾಖಲೆ

ಆರ್‌ಸಿಬಿಗೆ 85 ರನ್‌ ಗುರಿ

ಕೆಕೆಆರ್‌ 20 ಓವರ್‌ಗೆ 8 ವಿಕೆಟ್‌ ನಷ್ಟಕ್ಕೆ 84 ರನ್‌ ಗಳಿಸಿತು. ಲಾಕಿ ಫರ್ಗ್ಯುಸನ್ 19 ರನ್‌ ಮತ್ತು ಕುಲ್‌ದೀಪ್‌ ಯಾದವ್‌ 12 ರನ್‌ ಗಳಿಸಿದರು. ಕೊನೆಯ ಓವರ್‌ನಲ್ಲಿ ಕ್ರಿಸ್‌ ಮೋರಿಸ್‌ 9 ರನ್‌ ನೀಡಿದರು. ಕೊನೆಯ ಬಾಲ್‌ನಲ್ಲಿ ಕುಲ್‌ದೀಪ್‌ ರನ್‌ಔಟ್‌ ಆದರು.

ಕೆಕೆಆರ್‌ 19 ಓವರ್‌ಗೆ 74 ರನ್‌

ಕೆಕೆಆರ್‌ 19 ಓವರ್‌ಗೆ 74 ರನ್‌ ಗಳಿಸಿದ್ದು, 7 ವಿಕೆಟ್‌ ಕಳೆದುಕೊಂಡಿದೆ. ಲಾಕಿ ಫರ್ಗ್ಯುಸನ್(14) ಮತ್ತು ಕುಲ್‌ದೀಪ್‌ ಯಾದವ್‌ (6)

ಆರ್‌ಸಿಬಿ ಬೌಲಿಂಗ್‌ ಮಿಂಚು

ಮೊಹಮ್ಮದ್‌ ಸಿರಾಜ್‌–3 ವಿಕೆಟ್‌; 6 ರನ್‌; 2 ಮೇಡನ್‌
ಯಜುವೇಂದ್ರ ಚಾಹಲ್–2 ವಿಕೆಟ್‌; 15 ರನ್‌
ವಾಷಿಂಗ್ಟನ್ ಸುಂದರ್‌– 1 ವಿಕೆಟ್‌; 14 ರನ್‌
ನವದೀಪ್‌ ಸೈನಿ– 1 ವಿಕೆಟ್‌; 23 ರನ್‌
ಕ್ರಿಸ್‌ ಮೋರಿಸ್‌– 6 ರನ್‌; 1 ಮೇಡನ್‌
ಇಸುರು ಉದಾನ– 6 ರನ್‌

ಮಾರ್ಗನ್‌ ಔಟ್‌

ಭರವಸೆ ಮೂಡಿಸಿದ್ದ ಏಯಾನ್‌ ಮಾರ್ಗನ್‌ (30) ವಾಷಿಂಗ್ಟನ್‌ ಸುಂದರ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಹೊರ ನಡೆದರು. ಕೆಕೆಆರ್‌ 17 ಓವರ್‌ಗೆ 65 ರನ್‌ ಗಳಿಸಿದ್ದು, 7 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದೆ.

ಲಾಕಿ ಫರ್ಗ್ಯುಸನ್(8) ಮತ್ತು ಕುಲ್‌ದೀಪ್‌ ಯಾದವ್‌ (4) ಕಣದಲ್ಲಿದ್ದಾರೆ.

ಕೆಕೆಆರ್‌ 15 ಓವರ್‌ಗೆ 52 ರನ್‌

ಕುಲ್‌ದೀಪ್‌ ಯಾದವ್(3) ಮತ್ತು ಏಯಾನ್‌ ಮಾರ್ಗನ್‌ (26) ಕಣದಲ್ಲಿದ್ದಾರೆ. ಮಾರ್ಗನ್‌ ಹೋರಾಟ ಮುಂದುವರಿಸಿದ್ದು, ಕೆಕೆಆರ್‌ 15 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 52 ರನ್‌ ದಾಖಲಾಗಿದೆ.

ಚಾಹಲ್‌ಗೆ ಎರಡನೇ ವಿಕೆಟ್‌

17 ಎಸೆತ ಎದುರಿಸಿದ ಪ್ಯಾಟ್ ಕಮಿನ್ಸ್ (4) ಚಾಹೆಲ್‌ ಎಸೆತವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗದೆ ಕ್ಯಾಚ್‌ ನೀಡಿ ಹೊರ ನಡೆದರು.

ಕೆಕೆಆರ್‌ 13 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 41 ರನ್‌ ಗಳಿಸಿದೆ.

12 ಓವರ್‌ ಕಳೆದರೂ 40 ರನ್‌ ದಾಟಿಲ್ಲ!

ಕೆಕೆಆರ್‌ 12 ಓವರ್‌ಗಳಿಗೆ 5 ವಿಕೆಟ್ ಕಳೆದುಕೊಂಡು 39ರನ್‌ ಗಳಿಸಿದೆ. ಎಯಾನ್ ಮಾರ್ಗನ್ (16) ಮತ್ತು ಪ್ಯಾಟ್ ಕಮಿನ್ಸ್ (4) ಕ್ರೀಸ್‌ನಲ್ಲಿದ್ದಾರೆ. ಆರ್‌ಸಿಬಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡುತ್ತಿದೆ.

ಕಾರ್ತಿಕ್‌ ವಿಕೆಟ್‌ ಪಡೆದ ಚಾಹಲ್‌

9ನೇ ಓವರ್‌ ಮಾಡಿದ ಸ್ಪಿನ್ನರ್‌ ಯಜುವೇಂದ್ರ ಚಾಹಲ್ ನಾಲ್ಕನೇ ಎಸೆತದಲ್ಲಿ ದಿನೇಶ್‌ ಕಾರ್ತಿಕ್‌ ಅವರನ್ನು ಎಲ್‌ಬಿಡಬ್ಲ್ಯು ಮೂಲಕ ಪೆವಿಲಿನ್‌ಗೆ ಕಳುಹಿಸಿದರು. ವಿರಾಟ್‌ ಕೊಹ್ಲಿ ಡಿಆರ್‌ಎಸ್‌ ತೆಗೆದುಕೊಂಡು ಕಾರ್ತಿಕ್‌ ವಿಕೆಟ್‌ ಗಟ್ಟಿ ಮಾಡಿಕೊಂಡರು. ನಂತರ ಬ್ಯಾಟಿಂಗ್‌ ಬಂದ ಪ್ಯಾಟ್ ಕಮಿನ್ಸ್ ಡಿಆರ್‌ಎಸ್‌ ಮೂಲಕ ವಿಕೆಟ್‌ ಉಳಿಸಿಕೊಂಡರು.

 ಕೆಕೆಆರ್‌ 9 ಓವರ್ ಮುಕ್ತಾಯಕ್ಕೆ 5 ವಿಕೆಟ್‌ ಕಳೆದುಕೊಂಡು 33 ರನ್‌ ಗಳಿಸಿದೆ. ಚಾಹಲ್‌ 3 ರನ್‌ ನೀಡಿ 1 ವಿಕೆಟ್‌ ಪಡೆದಿದ್ದಾರೆ.

ಎಬಿಡಿ 100 ಕ್ಯಾಚ್‌

ಆರ್‌ಸಿಬಿ ವಿಕೆಟ್‌ ಕೀಪರ್‌ ಎಬಿ ಡಿ ವಿಲಿಯರ್ಸ್‌ ಎರಡು ಕ್ಯಾಚ್‌ ಪಡೆಯುವ ಮೂಲಕ ಐಪಿಎಲ್‌ನಲ್ಲಿ 100 ಕ್ಯಾಚ್‌ಗಳು ಅವರ ಖಾತೆಗೆ ಸೇರ್ಪಡೆಯಾಗಿವೆ. 

ಪವರ್‌ ಪ್ಲೇ ಮುಕ್ತಾಯ: ಕೆಕೆಆರ್‌ 17 ರನ್‌, 4 ವಿಕೆಟ್‌ ನಷ್ಟ

ನಾಯಕ ಎಯಾನ್ ಮಾರ್ಗನ್ ಮತ್ತು ದಿನೇಶ್ ಕಾರ್ತಿಕ್ ಕಣದಲ್ಲಿದ್ದು, ಏಳು ಓವರ್‌ ಮುಕ್ತಾಯಕ್ಕೆ ತಂಡ 23 ರನ್‌ ದಾಖಲಿಸಿದೆ. ಪ್ರಮುಖ ನಾಲ್ಕು ವಿಕೆಟ್‌ ಕಳೆದುಕೊಂಡಿರುವ ಕೆಕೆಆರ್‌ ಒತ್ತಡದಲ್ಲಿದೆ. ಸಿರಾಜ್‌ 3 ಓವರ್‌ಗಳಲ್ಲಿ ಕೇವಲ 2 ರನ್‌ ನೀಡಿ ಮೂರು ವಿಕೆಟ್ ಪಡೆದಿದ್ದಾರೆ. ಎರಡು ಮೇಡನ್‌ ಓವರ್‌ ಮಾಡಿದ್ದಾರೆ. ಕ್ರಿಸ್‌ ಮೋರಿಸ್‌ ಸಹ 2 ಓವರ್ ಮಾಡಿ 3 ರನ್‌ ನೀಡಿದ್ದು, ಒಂದು ಮೇಡನ್‌ ಓವರ್‌ ಸಹ ಸೇರಿದೆ.

ಇಸುರು ಉದಾನ 7ನೇ ಓವರ್‌ನಲ್ಲಿ 6 ರನ್‌ ನೀಡಿದರು.

ಮೊಹಮ್ಮದ್‌ ಸಿರಾಜ್‌ಗೆ ಮತ್ತೊಂದು ವಿಕೆಟ್‌!

ನಾಲ್ಕನೇ ಓವರ್‌ನ ಮೂರನೇ ಎಸೆತದಲ್ಲಿ ಸಿರಾಜ್‌ ಎಸೆತದಲ್ಲಿ ಟಾಮ್‌ ಬ್ಯಾಂಟನ್‌ ಕ್ಯಾಚ್‌ ನೀಡಿ ಪೆವಿಲಿಯನ್‌ಗೆ ಮರಳಿದರು. 3.4 ಓವರ್‌ಗಳಲ್ಲಿ 14 ರನ್‌ ಗಳಿಸಿರುವ ಕೆಕೆಆರ್‌ 4 ವಿಕೆಟ್‌ ಕಳೆದುಕೊಂಡಿದೆ.

ಬ್ಯಾಂಟನ್‌ 8 ಎಸೆತಗಳಲ್ಲಿ 10 ರನ್‌ ಗಳಿಸಿದರು. ಮೊಹಮ್ಮದ್‌ ಸಿರಾಜ್‌ ಎರಡು ಓವರ್‌ಗಳಲ್ಲಿ ಒಂದೂ ರನ್‌ ನೀಡದೆ 3 ವಿಕೆಟ್‌ ಗಳಿಸಿದ್ದಾರೆ.

ಮೂರನೇ ಓವರ್‌ನಲ್ಲಿ ವಿಕೆಟ್‌ ಪಡೆದ ನವದೀಪ್‌ ಸೈನಿ

ನವದೀಪ್‌ ಸೈನಿ ತಮ್ಮ ಮೊದಲ ಓವರ್‌ ಎರಡನೇ ಎಸೆತದಲ್ಲಿ ನಿತೀಶ್‌ ರಾಣಾ ವಿಕೆಟ್‌ ಪಡೆದರು. ಟಾಮ್‌ ಬ್ಯಾಂಟನ್‌ ಮತ್ತು ದಿನೇಶ್ ಕಾರ್ತಿಕ್‌ ಕ್ರೀಸ್‌ನಲ್ಲಿದ್ದು, ಬ್ಯಾಂಟನ್‌ ಇದೇ ಓವರ್‌ನಲ್ಲಿ ಫೋರ್‌ ಮತ್ತು ಸಿಕ್ಸರ್‌ ಸಿಡಿಸಿ ಭರವಸೆ ಮೂಡಿಸಿದ್ದಾರೆ.

3ನೇ ಓವರ್‌: 3 ವಿಕೆಟ್‌ ನಷ್ಟಕ್ಕೆ 14 ರನ್‌

ಎರಡನೇ ಓವರ್‌: ಎರಡು ವಿಕೆಟ್‌ ಉರುಳಿಸಿದ ಸಿರಾಜ್‌

ಪಂದ್ಯದ ಎರಡನೇ ಓವರ್‌ ಬೌಲಿಂಗ್‌ ಮಾಡಿದ ಮೊಹಮ್ಮದ್‌ ಸಿರಾಜ್‌ ಎರಡು ವಿಕೆಟ್‌ ಉರುಳಿಸುವ ಮೂಲಕ ಕೆಕೆಆರ್‌ ಮೇಲೆ ಒತ್ತಡ ಹಾಕಿದ್ದಾರೆ. ರಾಹುಲ್‌ ತ್ರಿಪಾಠಿ ವಿಕೆಟ್‌ ಹಿಂದೆ ಕ್ಯಾಚ್‌ ನೀಡಿದರೆ, ನಿತೀಶ್‌ ರಾಣಾ ಕ್ಲೀನ್‌ ಬೌಲ್ಡ್‌ ಆದರು. 2ನೇ ಓವರ್ ಅಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ ಕೆಕೆಆರ್‌ 3ರನ್‌ ಗಳಿಸಿದೆ.

ಮೊದಲ ಓವರ್‌: ಕ್ರಿಸ್‌ ಮೋರಿಸ್‌ ಬೌಲಿಂಗ್‌

ಗಿಲ್‌ ಮತ್ತು ತ್ರಿಪಾಠಿ ತಲಾ ಒಂದು ರನ್‌ ಗಳಿಸಿದರು. 1 ಓವರ್‌ ಮುಕ್ತಾಯ: 3 ರನ್‌

ಕ್ರಿಸ್‌ ಮೋರಿಸ್‌: 0,0 (ವೈಡ್‌),1,0,1,0,0

ಕೆಕೆಆರ್‌: ಶುಭಮನ್‌ ಗಿಲ್‌ ಮತ್ತು ರಾಹುಲ್‌ ತ್ರಿಪಾಠಿ ಜೋಡಿಯ ಬ್ಯಾಟಿಂಗ್‌ ಆರಂಭ

ಉಭಯ ತಂಡಗಳ ಟೀಂ 11 ಹೀಗಿದೆ:

ಕೆಕೆಆರ್‌ ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆ

ರೈಡರ್ಸ್: ಶುಭಮನ್‌ ಗಿಲ್‌, ರಾಹುಲ್‌ ತ್ರಿಪಾಠಿ, ನಿತೀಶ್‌ ರಾಣಾ, ಟಾಮ್‌ ಬ್ಯಾಂಟನ್‌, ಎಯಾನ್ ಮಾರ್ಗನ್(ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್‌), ಪ್ಯಾಟ್ ಕಮಿನ್ಸ್, ಲಾಕಿ ಫರ್ಗ್ಯುಸನ್, ಕುಲ್‌ದೀಪ್‌ ಯಾದವ್‌, ಪ್ರಸಿಧ್ ಕೃಷ್ಣ, ವರುಣ್‌ ಚಕ್ರವರ್ತಿ

ಆರ್‌ಸಿಬಿ ಬಳಗದಲ್ಲಿ...

ಆರ್‌ಸಿಬಿ: ದೇವದತ್ತ ಪಡಿಕ್ಕಲ್‌, ಆ್ಯರನ್‌ ಫಿಂಚ್, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್‌ (ವಿಕೆಟ್‌ ಕೀಪರ್‌), ಗುರ್‌ಕೀರತ್ ಮನ್ ಸಿಂಗ್‌, ಕ್ರಿಸ್‌ ಮೋರಿಸ್‌, ವಾಷಿಂಗ್ಟನ್ ಸುಂದರ್‌, ಇಸುರು ಉದಾನ, ನವದೀಪ್‌ ಸೈನಿ, ಮೊಹಮ್ಮದ್‌ ಸಿರಾಜ್‌, ಯಜುವೇಂದ್ರ ಚಾಹಲ್

ಕೆಕೆಆರ್ ಟಾಸ್‌ ಗೆದ್ದಿದ್ದು, ಆರ್‌ಸಿಬಿ ಎದುರು ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿದೆ

ಅಂತಿಮ ಹಂತದ ಸಿದ್ಧತೆ

ಹಲವು ದಾಖಲೆಗಳ ನಿರೀಕ್ಷೆಯಲ್ಲಿ...

ಐಪಿಎಲ್‌ನಿಂದ ಡ್ವೇನ್‌ ಬ್ರಾವೊ ಹೊರಕ್ಕೆ

ಇಂದು ಗೆಲುವು ಯಾರಿಗೆ?

ಪಂದ್ಯಕ್ಕಾಗಿ ತಯಾರಿ ನಡೆಸಿರುವ ಕೆಕೆಆರ್‌

ಅಬುಧಾಬಿ ಕ್ರೀಡಾಂಗಣದಲ್ಲಿ ಈ ಟೂರ್ನಿಯಲ್ಲಿ ಕೆಕೆಆರ್‌ 9 ಪಂದ್ಯಗಳನ್ನು ಆಡಿದ್ದು, ಆ ಪೈಕಿ 5 ಪಂದ್ಯಗಳಲ್ಲಿ ಗೆದ್ದು ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಆರ್‌ಸಿಬಿ ಇದೇ ಕ್ರೀಡಾಂಗಣದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.