ADVERTISEMENT

IPL-2020 | DC vs MI: ಮುಂಬೈ ಇಂಡಿಯನ್ಸ್‌ಗೆ 5 ವಿಕೆಟ್ ಜಯ

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 5 ವಿಕೆಟ್‌ ಅಂತರದ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ರೋಹಿತ್ ಶರ್ಮಾ ಪಡೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 17:50 IST
Last Updated 11 ಅಕ್ಟೋಬರ್ 2020, 17:50 IST

ಪಂದ್ಯ ಗೆದ್ದು ಅಗ್ರಸ್ಥಾನಕ್ಕೇರಿದ ಮುಂಬೈ

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ ಸವಾಲಿನ ಗುರಿಯನ್ನು ಮುಂಬೈ ಇಂಡಿಯನ್ಸ್‌ ತಂಡ ಇನ್ನೂ 5 ವಿಕೆಟ್‌ ಬಾಕಿ ಇರುವಂತೆಯೇ ಗೆದ್ದು ಬೀಗಿತು. ಈ ಜಯದೊಂದಿಗೆ ಮುಂಬೈ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಕೊನೆಯ ಓವರ್‌ನಲ್ಲಿ ಬೇಕಾಗಿದ್ದ 7 ರನ್‌ಗಳನ್ನು ಪೊಲಾರ್ಡ್ ಮತ್ತು ಕೃಣಾಲ್‌ ಜೋಡಿ ಕೇವಲ 4 ಎಸೆತಗಳಲ್ಲೇ ಕಲೆಹಾಕಿತು.

ಬೌಲರ್‌: ಮಾರ್ಕಸ್‌ ಸ್ಟೋಯಿನಸ್‌ (4 1 1 4)

ADVERTISEMENT

ಕೊನೆಯ ಓವರ್‌ನಲ್ಲಿ ಬೇಕು 7 ರನ್

19 ಓವರ್‌ಗಳ ಆಟ ಮುಕ್ತಾಯವಾಗಿದ್ದು ಮುಂಬೈ ತಂಡ 5 ವಿಕೆಟ್‌ ಕಳೆದುಕೊಂಡು 156 ರನ್ ಗಳಿಸಿದೆ.

ಬಾಕಿ ಇರುವ ಒಂದು ಓವರ್‌ನಲ್ಲಿ 7 ರನ್ ಗಳಿಸಬೇಕಾಗಿದೆ.

19ನೇ ಓವರ್‌: ಎನ್ರಿಕ್‌ ನೋರ್ಟ್ರ್ಜೆ (1 0 0 1 1 0)

18ನೇ ಓವರ್ ಮುಕ್ತಾಯ: ಕಿಶನ್ ಔಟ್

28 ರನ್‌ ಗಳಿಸಿದ್ದ ಇಶಾನ್‌ ಕಿಶನ್‌ 18ನೇ ಓವರ್‌ನ ಮೂರನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ. ಇದರೊಂದಿಗೆ ರಬಾಡ ಈ ಟೂರ್ನಿಯುಲ್ಲಿ 18ನೇ ವಿಕೆಟ್ ಪಡೆದುಕೊಂಡರು.

18 ಓವರ್‌ ಅಂತ್ಯಕ್ಕೆ ಮುಂಬೈ 5 ವಿಕೆಟ್‌ ಕಳೆದುಕೊಂಡು 153 ರನ್‌ ಗಳಿಸಿದೆ.

ಉಳಿದಿರುವ 12 ಎಸೆತಗಳಲ್ಲಿ 10 ರನ್‌ ಬೇಕಾಗಿದೆ. ಪೊಲಾರ್ಡ್‌ ಹಾಗೂ ಕೃಣಾಲ್‌ ಪಾಂಡ್ಯ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕಗಿಸೊ ರಬಾಡ (1 6 W 0 1 0)

17ನೇ ಓವರ್‌ ಮುಕ್ತಾಯ

17ನೇ ಓವರ್‌ ಅಂತ್ಯಕ್ಕೆ ಮುಂಬೈ 145 ರನ್ ಗಳಿಸಿದೆ. 3 ಓವರ್‌ಗಳ ಆಟ ಬಾಕಿ ಉಳಿದಿದ್ದು, ಗೆಲ್ಲಲು 18 ರನ್ ಬೇಕಾಗಿದೆ. ಪೊಲಾರ್ಡ್ ಮತ್ತು ಕಿಶನ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಎನ್ರಿಚ್‌ ನೊರ್ಟ್ರ್ಜೆ (1 1 0 0 4 Wd 1)

16ನೇ ಓವರ್ ಮುಕ್ತಾಯ

16 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಮುಂಬೈ 4 ವಿಕೆಟ್‌ಗೆ 137 ರನ್‌ ಗಳಿಸಿದೆ.

ಕಿಶನ್‌ ಮತ್ತು ಕೀರನ್‌ ಪೊಲಾರ್ಡ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಮಾರ್ಕಸ್ ಸ್ಟೋಯಿನಸ್‌ (0 W 1 1 1 4)

ಪೆವಿಲಿಯನ್‌ಗೆ ಮರಳಿದ ಹಾರ್ದಿಕ್‌

ಸೂರ್ಯಕುಮಾರ್‌ ಯಾದವ್‌ ವಿಕೆಟ್‌ ಪತನದ ಬಳಿಕ ಕ್ರೀಸ್‌ಗೆ ಬಂದ ಹಾರ್ದಿಕ್‌ ಪಾಂಡ್ಯ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್‌ಗೆ ಮರಳಿದ್ದಾರೆ. ಸ್ಟೋಯಿನಸ್‌ ಎಸೆದ 16ನೇ ಓವರ್‌ನ ಎರಡನೇ ಎಸೆತದಲ್ಲಿ ವಿಕೆಟ್‌ ಕೀಪರ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ.

15ನೇ ಓವರ್‌ ಮುಕ್ತಾಯ: ಯಾದವ್ ವಿಕೆಟ್ ಪತನ

ಲೀಲಾಜಾಲವಾಗಿ ಬ್ಯಾಟ್‌ ಬೀಸುತ್ತಿರುವ ಸೂರ್ಯಕುಮಾರ್‌ ಯಾದವ್‌ 32 ಎಸೆತಗಳಲ್ಲಿ 53 ರನ್‌ ಗಳಿಸಿ ಔಟಾಗಿದ್ದಾರೆ.

ಇನ್ನೊಂದು ತುದಿಯಲ್ಲಿ ಇಶಾನ್ ಕಿಶನ್ ಕ್ರೀಸ್‌ನಲ್ಲಿದ್ದು, ಮುಂಬೈ ತಂಡ 3 ವಿಕೆಟ್‌ ನಷ್ಟಕ್ಕೆ 130 ರನ್ ಗಳಿಸಿದ್ದಾರೆ.

ಬೌಲರ್‌: ಕಗಿಸೊ ರಬಾಡ (4 2 6 1 1 W)

14ನೇ ಓವರ್ ಮುಕ್ತಾಯ

ಮುಂಬೈ 2 ವಿಕೆಟ್‌ಗೆ 116 ರನ್ ಗಳಿಸಿದೆ. ಯಾದವ್‌ (40) ಮತ್ತು ಕಿಶನ್‌ (15) ಕ್ರಿಸ್‌ನಲ್ಲಿದ್ದಾರೆ.

ಬೌಲರ್‌: ಮಾರ್ಕಸ್ ಸ್ಟೋಯಿನಸ್ (1 1 6 1 1 4)

13ನೇ ಓವರ್‌ ಮುಕ್ತಾಯ

ಮುಂಬೈ ತಂಡ 13ನೇ ಓವರ್‌ ಮುಕ್ತಾಯಕ್ಕೆ 2 ವಿಕೆಟ್‌ ಕಳೆದುಕೊಂಡು 103 ರನ್ ಗಳಿಸಿದೆ. ಡೆಲ್ಲಿ ಈ ಹಂತದಲ್ಲಿ 2 ವಿಕೆಟ್‌ ಕಳೆದುಕೊಂಡು 95 ರನ್ ಕಲೆಹಾಕಿತ್ತು.

ಬೌಲರ್‌: ಅಕ್ಷರ್ ಪಟೇಲ್ (0 4 4 1 1 2)

12ನೇ ಓವರ್‌ ಮುಕ್ತಾಯ

12 ಓವರ್‌ ಆಟ ಮುಗಿದಿದ್ದು ಮುಂಬೈ 2 ವಿಕೆಟ್‌ ನಷ್ಟಕ್ಕೆ 90 ರನ್‌ ಗಳಿಸಿದೆ.

ಬೌಲರ್‌: ಆರ್‌.ಅಶ್ವಿನ್‌ (4 1 1 1 1 1)

11ನೇ ಓವರ್‌ ಮುಕ್ತಾಯ

11ನೇ ಓವರ್‌ ಮುಕ್ತಾಯವಾಗಿದ್ದು ಮುಂಬೈ 81 ರನ್‌ ಗಳಿಸಿದೆ.

ಬೌಲರ್‌: ಕಗಿಸೊ ರಬಾಡ (Wd 0 0 0 1 Wd 0 0)

10ನೇ ಓವರ್‌ ಮುಕ್ತಾಯ: ಡಿ ಕಾಕ್ ವಿಕೆಟ್‌ ಪತನ

36 ಎಸೆತಗಳಲ್ಲಿ 53 ರನ್‌ ಗಳಿಸಿದ್ದ ಕ್ವಿಂಟನ್‌ ಡಿ ಕಾಕ್‌ 10ನೇ ಓವರ್‌ನಲ್ಲಿ ಔಟಾಗಿದ್ದಾರೆ. ಇಶಾನ್‌ ಕಿಶನ್‌ ಕ್ರೀಸ್‌ಗೆ ಬಂದಿದ್ದಾರೆ.

10 ಓವರ್ ಅಂತ್ಯಕ್ಕೆ ಮುಂಬೈ 2 ವಿಕೆಟ್‌ ಕಳೆದುಕೊಂಡು 78 ರನ್ ಗಳಿಸಿದೆ.

ಬೌಲರ್‌: ಆರ್‌. ಅಶ್ವಿನ್‌ (2 1 1 1 W 1)

9ನೇ ಓವರ್‌ ಮುಕ್ತಾಯ; ಡಿ ಕಾಕ್ ಅರ್ಧಶತಕ

ನಾಯಕ ರೋಹಿತ್‌ ಶರ್ಮಾ ವಿಕೆಟ್‌ ಪತನದ ಬಳಿಕ ತಂಡದ ಬ್ಯಾಟಿಂಗ್ ವಿಭಾಗವನ್ನು ಮುನ್ನಡೆಸುತ್ತಿರುವ ಕ್ವಿಂಟನ್‌ ಡಿ ಕಾಕ್‌ ಅರ್ಧಶತಕ ಬಾರಿಸಿದ್ದಾರೆ.

ಸದ್ಯ ಡಿ ಕಾಕ್‌ 34 ಎಸೆತಗಳಲ್ಲಿ 52 ರನ್‌ ಗಳಿಸಿ ಆಡುತ್ತಿದ್ದಾರೆ. ಇನ್ನೊಂದು ತುದಿಯಲ್ಲಿ ಸೂರ್ಯಕುಮಾರ್ (14) ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಮುಂಬೈ ತಂಡ 1 ವಿಕೆಟ್‌ಗೆ 72 ರನ್‌ ಕಲೆಹಾಕಿದೆ.

ಬೌಲರ್‌: ಹರ್ಷಲ್‌ ಪಟೇಲ್‌ (1 1 4 4 1 1)

8ನೇ ಓವರ್‌ ಮುಕ್ತಾಯ

ಮುಂಬೈ ತಂಡ 60 ರನ್‌ ಗಳಿಸಿ 1 ವಿಕೆಟ್‌ ಕಳೆದುಕೊಂಡಿದೆ. ಈ ಹಂತದಲ್ಲಿ ಡೆಲ್ಲಿ 2 ವಿಕೆಟ್‌ ಕಳೆದುಕೊಂಡು 61 ರನ್ ಗಳಿಸಿತ್ತು.

ಬೌಲರ್‌: ಆರ್‌.ಅಶ್ವಿನ್‌ (1 0 4 1 1 1)

7ನೇ ಓವರ್‌ ಮುಕ್ತಾಯ: ಅರ್ಧಶತಕ ಪೂರೈಸಿದ ಮುಂಬೈ

ಮುಂಬೈ ಇಂಡಿಯನ್ಸ್ 7ನೇ ಓವರ್‌ನಲ್ಲಿ ಅರ್ಧಶತಕ ಪೂರೈಸಿದೆ. ಸೂರ್ಯಕುಮಾರ್‌ ಯಾದವ್‌ (6) ಮತ್ತು ಡಿ ಕಾಕ್ (40)‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಹರ್ಷಲ್‌ ಪಟೇಲ್‌ (0 1 4 1 1 1)

6ನೇ ಓವರ್‌ ಮುಕ್ತಾಯ

ಪವರ್‌ ಪ್ಲೇ (6 ಓವರ್‌ಗಳ ಆಟ) ಮುಕ್ತಾಯವಾಗಿದ್ದು ಮುಂಬೈ ತಂಡ 1 ವಿಕೆಟ್‌ ಕಳೆದುಕೊಂಡು 44 ರನ್‌ ಗಳಿಸಿದೆ. ರೋಹಿತ್‌ ಶರ್ಮಾ 5ನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

ನೋರ್ಟ್ರ್ಜೆ ಎಸೆದ ಆರನೇ ಓವರ್‌ನಲ್ಲಿ ಡಿ ಕಾಕ್‌ 2 ಸಿಕ್ಸರ್ ಸಹಿತ13 ರನ್ ಬಾರಿಸಿದರು.

ಬೌಲರ್‌: ಎನ್ರಿಕ್‌ ನೋರ್ಟ್ರ್ಜೆ (0 0 6 0 6 1)

ಡೆಲ್ಲಿ ತಂಡ 2 ವಿಕೆಟ್‌ಗೆ 46 ರನ್‌ ಗಳಿಸಿದೆ.

5ನೆ ಓವರ್ ಮುಕ್ತಾಯ: ರೋಹಿತ್ ಶರ್ಮಾ

ಅಕ್ಷರ್ ಪಟೇಲ್ ಎಸೆದ ಇನಿಂಗ್ಸ್‌ನ 5ನೇ ಓವರ್‌ನ ಕೊನೆಯ ಎಸೆತದಲ್ಲಿ ನಾಯಕ ರೋಹಿತ್‌ ಶರ್ಮಾ ಔಟಾಗಿದ್ದಾರೆ. ಸೂರ್ಯ ಕುಮಾರ್‌ ಯಾದವ್‌ ಕ್ರೀಸ್‌ಗೆ ಬಂದಿದ್ದಾರೆ.

ಸದ್ಯ ಮುಂಬೈ 1 ವಿಕೆಟ್‌ ನಷ್ಟಕ್ಕೆ 31 ರನ್‌ ಗಳಿಸಿದೆ.

(0 2 4 1 0 W)

4ನೇ ಓವರ್‌ ಮುಕ್ತಾಯ

ನಾಲ್ಕು ಓವರ್‌ಗಳ ಅಂತ್ಯಕ್ಕೆ ಮುಂಬೈ 24 ರನ್ ಗಳಿಸಿದೆ.

ಬೌಲರ್‌: ಅರ್. ಅಶ್ವಿನ್‌ (1 0 6 0 4 1)

3ನೇ ಓವರ್‌ ಮುಕ್ತಾಯ

ಮುಂಬೈ ವಿಕೆಟ್ ನಷ್ಟವಿಲ್ಲದೆ 12 ರನ್‌ ಗಳಿಸಿದೆ.

ಬೌಲರ್‌: ಅಕ್ಷರ್ ಪಟೇಲ್‌ (1 1 0 1 2 0)

ಇನಿಂಗ್ಸ್‌ ಅರಂಭಿಸಿದ ಮುಂಬೈ

ಸವಾಲಿನ ಗುರಿ ಎದುರು ಬ್ಯಾಟಿಂಗ್‌ ಆರಂಭಿಸಿರುವ ಮುಂಬೈ ಇಂಡಿಯನ್ಸ್‌ ತಂಡ 2 ಓವರ್‌ಗಳ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 7 ರನ್ ಗಳಿಸಿದೆ.

ಮುಂಬೈ ಪರ 150ನೇ ಪಂದ್ಯ ಅಡುತ್ತಿರುವ ನಾಯಕ ರೋಹಿತ್‌ ಶರ್ಮಾ ಮತ್ತು ಕ್ವಿಂಟನ್‌ ಡಿ ಕಾಕ್‌ ಕ್ರೀಸ್‌ನಲ್ಲಿದ್ದಾರೆ.

ಕಗಿಸೊ ರಬಾಡ ಎಸೆದ ಮೊದಲ ಓವರ್‌ನಲ್ಲಿ 3 ರನ್‌ ಮತ್ತು ಎನ್ರಿನ್‌ ನೋರ್ಟ್ರ್ಜೆ ಹಾಕಿದ 2ನೇ ಓವರ್‌ನಲ್ಲಿ ನಾಲ್ಕು ರನ್‌ ಬಂದಿದೆ.

ಮುಂಬೈಗೆ 163 ರನ್ ಗುರಿ

ಜಸ್‌ಪ್ರೀತ್‌ ಬೂಮ್ರಾ ಹಾಕಿದ ಕೊನೆಯ ಓವರ್‌ನಲ್ಲಿ ಡೆಲ್ಲಿ ತಂಡ 12 ರನ್‌ ಗಳಿಸಿತು. ಹೀಗಾಗಿ ಅಯ್ಯರ್‌ ಬಳಗದ ಮೊತ್ತ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 162 ರನ್‌ ಗಳಿಸಿದೆ.

(1 2 4 1 2 2)

19ನೇ ಓವರ್‌ ಮುಕ್ತಾಯ: ಡೆಲ್ಲಿ 150 ರನ್

19 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ ತಂಡ 150 ರನ್ ಗಳಿಸಿದೆ. ಒಂದು ಓವರ್‌ ಆಟ ಬಾಕಿ ಇದ್ದು, ಧವನ್ ಮತ್ತು ಕಾರಿ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಟ್ರೆಂಟ್ ಬೌಲ್ಟ್ (1 1 1 1 4 0)

18ನೇ ಓವರ್ ಮುಕ್ತಾಯ

ಡೆಲ್ಲಿ ತಂಡದ ಮೊತ್ತ 142 ರನ್ ಆಗಿದೆ. ಧವನ್ ಮತ್ತು ಕಾರಿ ಕ್ರೀಸ್‌ನ್ಲಲಿದ್ದಾರೆ.

ಬೌಲರ್‌: ಜಸ್‌ಪ್ರೀತ್‌ ಬೂಮ್ರಾ (1 2 2 1 0 1)

17ನೇ ಓವರ್‌ ಮುಕ್ತಾಯ; ಸ್ಟೋಯಿನಸ್ ಔಟ್

ಅಪಾಯಕಾರಿ ಬ್ಯಾಟ್ಸ್‌ಮನ್ ಮಾರ್ಕಸ್‌ ಸ್ಟೋಯಿನಸ್‌ ಅವರು ಇಲ್ಲದ ರನ್ ಕದಿಯಲು ಹೋಗಿ ರನೌಟ್‌ ಆಗಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

ಸದ್ಯ ಅಲೆಕ್ಸ್‌ ಕಾರಿ ಕ್ರೀಸ್‌ಗೆ ಬಂದಿದ್ದಾರೆ. ಡೆಲ್ಲಿ ತಂಡ 135 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದೆ.

ಬೌಲರ್‌: ರಾಹುಲ್‌ ಚಹಾರ್‌ (1 1 W1 2 1 2)

16ನೇ ಓವರ್ ಮುಕ್ತಾಯ

ಡೆಲ್ಲಿ 127 ರನ್ ಗಳಿಸಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಮಾರ್ಕಸ್‌ ಸ್ಟೋಯಿನಸ್ (11)‌ ಹಾಗೂ ಅರ್ಧಶತಕ ಬಾರಿಸಿರುವ ಧವನ್‌ (50) ಕ್ರೀಸ್‌ನಲ್ಲಿದ್ದಾರೆ.

ಬೌಲರ್: ಟ್ರೆಂಟ್‌ ಬೌಲ್ಟ್‌ (Wd 4 1 0 4 4 Wd 1)

15ನೇ ಓವರ್‌ ಮುಕ್ತಾಯ: ಅಯ್ಯರ್ ಔಟ್

15 ಓವರ್‌ಗಳ ಅಂತ್ಯಕ್ಕೆ ಡೆಲ್ಲಿ 3 ವಿಕೆಟ್‌ ಕಳೆದುಕೊಂಡು 111 ರನ್‌ ಗಳಿಸಿದೆ. 33 ಎಸೆತಗಳಲ್ಲಿ 42 ರನ್‌ ಗಳಿಸಿದ್ದ ಅಯ್ಯರ್‌ ಕೃಣಾಲ್‌ ಪಾಂಡ್ಯಗೆ ವಿಕೆಟ್‌ ಒಪ್ಪಿಸಿದ್ದಾರೆ.

ಈ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸುತ್ತಿರುವ ಮಾರ್ಕಸ್‌ ಸ್ಟೋಯಿನಸ್‌ ಕ್ರೀಸ್‌ಗೆ ಬಂದಿದ್ದಾರೆ.

(4 1 1 W 2 0)

14ನೇ ಓವರ್ ಮುಕ್ತಾಯ: ಶತಕ ಪೂರೈಸಿದ ಡೆಲ್ಲಿ

14ನೇ ಓವರ್‌ನಲ್ಲಿ ಡೆಲ್ಲಿ ತಂಡದ ಮೊತ್ತ ನೂರರ ಗಡಿ ದಾಟಿದೆ. ಸದ್ಯ ಅಯ್ಯರ್‌ ಪಡೆ 2 ವಿಕೆಟ್‌ ನಷ್ಟಕ್ಕೆ 103 ರನ್‌ ಗಳಿಸಿದೆ.

ಬೌಲರ್‌: ರಾಹುಲ್‌ ಚಾಹರ್ (4 1 1 0 1 1)

13ನೇ ಓವರ್‌ ಮುಕ್ತಾಯ

ಡೆ‌ಲ್ಲಿ 2 ವಿಕೆಟ್‌ ನಷ್ಟಕ್ಕೆ 95ರನ್ ಗಳಿಸಿದೆ.

ಬೌಲರ್‌: ಕೃಣಾಲ್ ಪಾಂಡ್ಯ (0 1 1 1 1 0)

12ನೇ ಓವರ್‌ ಮುಕ್ತಾಯ

46 ಎಸೆತಗಳಲ್ಲಿ 67 ರನ್ ಜೊತೆಯಾಟವಾಡಿರುವ ಧವನ್‌ ಮತ್ತು ಅಯ್ಯರ್ ಕ್ರೀಸ್‌ನಲ್ಲಿದ್ದಾರೆ. ಡೆಲ್ಲಿ ತಂಡದ ಮೊತ್ತ 2 ವಿಕೆಟ್‌ಗೆ 91 ರನ್ ಆಗಿದೆ.

ಬೌಲರ್‌: ಜಸ್‌ಪ್ರೀತ್‌ ಬೂಮ್ರಾ (2 1 0 1 1 1)

11ನೇ ಓವರ್‌ ಮುಕ್ತಾಯ

ತಂಡದ ಮೊತ್ತ 2 ವಿಕೆಟ್‌ಗೆ 85 ರನ್‌ ಆಗಿದೆ.

ಬೌಲರ್‌: ರಾಹುಲ್‌ ಚಹಾರ್‌ (1 0 1 1 1 1)

10ನೇ ಓವರ್‌ ಮುಕ್ತಾಯ

10 ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ 80 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದೆ.

ತಲಾ 29 ರನ್‌ ಗಳಿಸಿರುವ ಧವನ್‌ ಮತ್ತು ಅಯ್ಯರ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಜೇಮ್ಸ್‌ ಪ್ಯಾಟಿನ್ಸನ್‌ (4 0 Wd 1 1 4 2)

9ನೇ ಓವರ್‌ ಮುಕ್ತಾಯ

9 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟಕ್ಕೆ 67 ರನ್‌ ಆಗಿದೆ. ಧವನ್‌ ಮತ್ತು ಅಯ್ಯರ್‌ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ರಾಹುಲ್‌ ಚಹಾರ್‌ (0 1 1 1 1 2)

8ನೇ ಓವರ್‌ ಮುಕ್ತಾಯ

ಡೆಲ್ಲಿ ತಂಡ 61 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿದೆ.

ಬೌಲರ್‌: ಕೀರನ್ ಪೊಲಾರ್ಡ್‌ (1 4 1 1 2 1)

7ನೇ ಓವರ್‌ ಮುಕ್ತಾಯ

ಡೆಲ್ಲಿ ತಂಡ 7 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 51 ರನ್‌ ಗಳಿಸಿಕೊಂಡಿದೆ. ನಾಯಕ ಅಯ್ಯರ್‌ (14) ಮತ್ತು ಧವನ್‌ (16) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕೃಣಾಲ್ ಪಾಂಡ್ಯ (1 1 0 2 1 0)

6ನೇ ಓವರ್‌ ಮುಕ್ತಾಯ

ಪವರ್‌ ಪ್ಲೇ (6 ಓವರ್‌ಗಳ ಆಟ) ಮುಕ್ತಾಯವಾಗಿದ್ದು ಡೆಲ್ಲಿ ತಂಡ 2 ವಿಕೆಟ್‌ಗೆ 46 ರನ್‌ ಗಳಿಸಿದೆ.

ಪೃಥ್ವಿ ಶಾ (4) ಮತ್ತು ಅಜಿಂಕ್ಯ ರಹಾನೆ (15) ಔಟಾಗದ್ದಾರೆ.

ಆರನೇ ಓವರ್‌: ಜೇಮ್ಸ್‌ ಪ್ಯಾಟಿನ್ಸನ್‌ (4 1 4 4 1 0)

5ನೆ ಓವರ್ ಮುಕ್ತಾಯ: ರಹಾನೆ ವಿಕೆಟ್ ಪತನ

ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿರುವ ಅಜಿಂಕ್ಯಾ ರಹಾನೆ (15) ಕೃಣಾಲ್‌ ಪಾಂಡ್ಯ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

ಸದ್ಯ ಐದು ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ ತಂಡ 2 ವಿಕೆಟ್‌ಗೆ 32 ರನ್ ಗಳಿಸಿದೆ.

ಬೌಲರ್‌: ಕೃಣಾಲ್‌ ಪಾಂಡ್ಯ (1 W 1 6 1 0)

4ನೇ ಓವರ್‌ ಮುಕ್ತಾಯ

ನಾಲ್ಕನೇ ಓವರ್‌ ಬೌಲಿಂಗ್‌ ಮಾಡಿದ ಜಸ್‌ಪ್ರೀತ್ ಬೂಮ್ರಾ ಕೇವಲ 1 ರನ್‌ ಬಿಟ್ಟುಕೊಟ್ಟರು. ಸದ್ಯ ಡೆಲ್ಲಿ ತಂಡ 1 ವಿಕೆಟ್‌ಗೆ 23 ರನ್‌ ಗಳಿಸಿದೆ. (0 0 0 0 0 1)

ಇನಿಂಗ್ಸ್‌ ಅರಂಭಿಸಿದ ಡೆಲ್ಲಿ

ಇನಿಂಗ್ಸ್‌ ಆರಂಭಿಸಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆರಂಭಿಕ ಆಘಾತ ಅನುಭವಿಸಿದೆ. ಶಿಖರ್‌ ಧವನ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಪೃಥ್ವಿ ಶಾ (4) ಮೊದಲ ಓವರ್‌ನಲ್ಲಿಯೇ ಔಟಾಗಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಅನುಭವಿ ಅಜಿಂಕ್ಯ ರಹಾನೆ ಕಣಕ್ಕಿಳಿದಿದ್ದಾರೆ.

ಸದ್ಯ ಮೂರು ಓವರ್‌ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ 1 ವಿಕೆಟ್‌ ನಷ್ಟಕ್ಕೆ 22 ರನ್‌ ಗಳಿಸಿದೆ.

ಟ್ರೆಂಟ್‌ ಬೌಲ್ಟ್‌ ಮೊದಲನೇ (0 4 W 0 2 1) ಮತ್ತು ಮೂರನೇ (1 0 0 0 4 0) ಓವರ್ ಹಾಕಿದ್ದಾರೆ. ಜೇಮ್ಸ್‌ ಪ್ಯಾಟಿನ್ಸನ್ ಎರಡನೇ ಓವರ್‌ (4 0 0 Wd 4 0 Wd 0) ಹಾಕಿದರು.‌

ಡೆಲ್ಲಿ ಬ್ಯಾಟಿಂಗ್‌

ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.