ADVERTISEMENT

IPL–2020 | DC vs RR: ರಾಯಲ್ಸ್‌ಗೆ 46 ರನ್ ಸೋಲು; ಅಗ್ರಸ್ಥಾನಕ್ಕೇರಿದ ಡೆಲ್ಲಿ

ಟೂರ್ನಿಯ ಆರಂಭದಲ್ಲಿ ಅಬ್ಬರಿಸಿದ್ದ ರಾಜಸ್ಥಾನ ರಾಯಲ್ಸ್‌ ತಂಡ ಈ ಪಂದ್ಯದಲ್ಲೂ ಪರಭಾವಗೊಂಡಿತು. ಇದರೊಂದಿಗೆ ಆಡಿರುವ 6 ಪಂದ್ಯಗಳಲ್ಲಿ 5ನೇ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 18:03 IST
Last Updated 9 ಅಕ್ಟೋಬರ್ 2020, 18:03 IST

ರಾಯಲ್ಸ್‌ ಆಲೌಟ್‌; ಡೆಲ್ಲಿಗೆ 5ನೇ ಗೆಲುವು

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ ಸವಾಲಿನ ಗುರಿ ಎದುರು ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ಕೇವಲ 138 ರನ್‌ಗಳಿಗೆ ಆಲೌಟ್‌ ಆಯಿತು. ಹೀಗಾಗಿ ಡೆಲ್ಲಿ ತಂಡ 46 ರನ್‌ಗಳ ಗೆಲುವು ಸಾಧಿಸಿತು.

ಇದರೊಂದಿಗೆ ಡೆಲ್ಲಿ ತಂಡ ಟೂರ್ನಿಯಲ್ಲಿ 5ನೇ ಗೆಲುವು ಸಾಧಿಸಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.

ಸತತ ನಾಲ್ಕನೇ ಸೋಲು ಅನುಭವಿಸಿದ ರಾಯಲ್ಸ್‌ 7ನೇ ಸ್ಥಾನದಲ್ಲೇ ಉಳಿದಿದೆ.

ADVERTISEMENT

ರಾಹುಲ್‌ ತೆವಾಟಿಯಾ ಔಟ್

22 ಎಸೆತಗಳಲ್ಲಿ 38 ರನ್‌ ಗಳಿಸಿದ ರಾಹುಲ್‌ ತೆವಾಟಿಯಾ, ಕಗಿಸೊ ರಬಾಡ ಎಸೆದ ಕೊನೆ ಓವರ್‌ನ ಮೊದಲ ಎಸೆತದಲ್ಲಿ ಔಟಾಗಿದ್ದಾರೆ.

19ನೇ ಓವರ್ ಮುಕ್ತಾಯ

19 ಓವರ್‌ಗಳ ಆಟ ಮುಕ್ತಾಯವಾಗಿದ್ದು ರಾಜಸ್ಥಾನ ತಂಡ 8 ವಿಕೆಟ್‌ ಕಳೆದುಕೊಂಡು 136 ರನ್ ಗಳಿಸಿದೆ. ಕೊನೆಯ ಓವರ್‌ ಬಾಕಿ ಉಳಿದಿದ್ದು, 49 ರನ್‌ ಬೇಕಾಗಿದೆ.

18ನೇ ಓವರ್ ಮುಕ್ತಾಯ

ರಾಯಲ್ಸ್‌ ಪಡೆ 8 ವಿಕೆಟ್‌ ಕಳೆದುಕೊಂಡು 129 ರನ್‌ ಗಳಿಸಿದೆ. ಹರ್ಷಲ್ ಪಟೇಲ್‌ ಎಸೆದ 18ನೇ ಓವರ್‌ನಲ್ಲಿ ಕನ್ನಡಿಗ ಶ್ರೇಯಸ್‌ ಗೋಪಾಲ್‌ 8ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ.

17ನೇ ಓವರ್ ಮುಕ್ತಾಯ

17 ಓವರ್‌ ಅಂತ್ಯಕ್ಕೆ ಸ್ಮಿತ್‌ ಪಡೆ 7 ವಿಕೆಟ್‌ ಕಳೆದುಕೊಂಡು 120 ರನ್‌ ಗಳಿಸಿದೆ.

ಬೌಲರ್‌: ಎನ್ರಿಚ್‌ ನೋರ್ಟ್ಜೆ

16ನೇ ಓವರ್ ಮುಕ್ತಾಯ

16 ಓವರ್‌ಗಳ ಆಟ ಮುಕ್ತಾಯವಾಗಿದ್ದು ರಾಯಲ್ಸ್ 7 ವಿಕೆಟ್‌ ನಷ್ಟಕ್ಕೆ 107 ರನ್ ಗಳಿಸಿದೆ.

24 ಎಸೆತಗಳಲ್ಲಿ 78 ರನ್‌ ಬೇಕಾಗಿದೆ. ತೆವಾಟಿಯಾ (13) ಮತ್ತು ಶ್ರೇಯಸ್‌ ಗೋಪಾಲ್‌ (1) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಹರ್ಷಲ್ ಪಟೇಲ್‌

15ನೇ ಓವರ್ ಮುಕ್ತಾಯ

15 ಓವರ್‌ಗಳ ಆಟ ಮುಕ್ತಾಯವಾಗಿದ್ದು ರಾಯಲ್ಸ್‌ 7ನೇ ವಿಕೆಟ್‌ ಕಳೆದುಕೊಂಡು 101 ರನ್‌ ಗಳಿಸಿದೆ.

ಕಗಿಸೊ ರಬಾಡ ಎಸೆದ ಈ ಓವರ್‌ನ ಐದನೇ ಎಸೆತದಲ್ಲಿ ಜೋಫ್ರಾ ಆರ್ಚರ್‌ (2) ಔಟಾಗಿದ್ದಾರೆ.

14ನೇ ಓವರ್ ಮುಕ್ತಾಯ: ಟೈ ವಿಕೆಟ್‌ ಪತನ

14 ಓವರ್‌ಗಳ ಆಟ ಮುಕ್ತಾಯವಾಗಿದ್ದು, ರಾಜಸ್ಥಾನ ರಾಯಲ್ಸ್ ತಂಡ 6 ವಿಕೆಟ್‌ ಕಳೆದುಕೊಂಡು 91 ರನ್‌ ಗಳಿಸಿದೆ. ಇದೀಗ ತೆವಾಟಿಯಾ ಮತ್ತು ಜೋಫ್ರಾ ಆರ್ಚರ್‌ ಕ್ರೀಸ್‌ನಲ್ಲಿದ್ದಾರೆ.

ಕೊನೆಯ 6 ಓವರ್‌ಗಳಲ್ಲಿ ರಾಯಲ್ಸ್ 35 ರನ್‌ ಗಳಿಸಿ 5 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಉಳಿದಿರುವ 36 ಎಸೆತಗಳಲ್ಲಿ ರಾಯಲ್ಸ್‌ 94 ರನ್ ಗಳಿಸಬೇಕಿದೆ.

ಬೌಲರ್‌: ಅಕ್ಷರ್ ಪಟೇಲ್‌

13ನೇ ಓವರ್ ಮುಕ್ತಾಯ: ಜೈಸ್ವಾಲ್ ಔಟ್

13 ಓವರ್‌ಗಳ ಆಟ ಮುಕ್ತಾಯವಾಗಿದ್ದು, ರಾಯಲ್ಸ್ 5 ವಿಕೆಟ್‌ ನಷ್ಟಕ್ಕೆ 89 ರನ್ ಗಳಿಸಿದೆ.

34 ರನ್‌ ಗಳಿಸಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್‌ ಈ ಓವರ್‌ನಲ್ಲಿ ಔಟಾಗಿದ್ದಾರೆ. ರಾಹುಲ್‌ ತೆವಾಟಿಯಾ (1) ಮತ್ತು ಆ್ಯಂಡ್ರೋ ಟೈ (6) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಮಾರ್ಕಸ್ ಸ್ಟೋಯಿನಸ್

12ನೇ ಓವರ್ ಮುಕ್ತಾಯ: ಲಾಮ್ರೋರ್‌ ಔಟ್

5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಮಹಿಪಾಲ್‌ ಲಾಮ್ರೋರ್‌ ಕೇವಲ 1 ರನ್ ಗಳಿಸಿ ಅಶ್ವಿನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

ಸದ್ಯ 12 ಓವರ್‌ ಮುಕ್ತಾಯವಾಗಿದ್ದು, ರಾಯಲ್ಸ್ 4 ವಿಕೆಟ್ ಕಳೆದುಕೊಂಡು 82 ರನ್ ಗಳಿಸಿದೆ.

11ನೇ ಓವರ್ ಮುಕ್ತಾಯ: ಸಂಜು ವಿಕೆಟ್ ಪತನ

ಸ್ಫೋಟಕ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಕೇವಲ 5 ರನ್‌ಗಳಿಸಿ ಔಟಾಗಿದ್ದಾರೆ. ಮಾರ್ಕ್‌ ಸ್ಟೋಯಿನಸ್‌ ಎಸೆದ 11ನೇ ಓವರ್‌ನ 3ನೇ ಎಸೆತದಲ್ಲಿ ಅವರು ವಿಕೆಟ್‌ ಒಪ್ಪಿಸಿದ್ದಾರೆ.

ಜೈಸ್ವಾಲ್‌ ಮತ್ತು ಲಾಮ್ರೋರ್‌ ಮಹಿಪಾಲ್ ಕ್ರೀಸ್‌ನಲ್ಲಿದ್ದಾರೆ.

11 ಓವರ್‌ ಮುಕ್ತಾಯಕ್ಕೆ ರಾಯಲ್ಸ್‌ 3 ವಿಕೆಟ್‌ ಕಳೆದುಕೊಂಡು 75 ರನ್ ಗಳಿಸಿದೆ.

10ನೇ ಓವರ್ ಮುಕ್ತಾಯ

10 ಓವರ್‌ ಮುಕ್ತಾಯಕ್ಕೆ ರಾಯಲ್ಸ್ ತಂಡ 2 ವಿಕೆಟ್‌ ಕಳೆದುಕೊಂಡು 65 ರನ್‌ ಗಳಿಸಿದೆ. ಈ ಹಂತದಲ್ಲಿ ಡೆಲ್ಲಿ 4 ವಿಕೆಟ್‌ಗೆ 87 ರನ್‌ ಗಳಿಸಿಕೊಂಡಿತ್ತು.

ಬೌಲರ್‌: ಅಕ್ಷರ್ ಪಟೇಲ್‌

9ನೇ ಓವರ್ ಮುಕ್ತಾಯ

ರಾಯಲ್ಸ್‌ ತಂಡ 2 ವಿಕೆಟ್‌ ಕಳೆದುಕೊಂಡು 59 ರನ್‌ ಗಳಿಸಿದೆ. ಸ್ಮಿತ್‌ ವಿಕೆಟ್‌ ಪತನದ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ ಕ್ರೀಸ್‌ಗೆ ಇಳಿದಿದ್ದಾರೆ.

ಸ್ಟೀವ್‌ ಸ್ಮಿತ್ ವಿಕೆಟ್ ಪತನ

ಎನ್ರಿಚ್‌ ನೋರ್ಟ್ಜೆ ಹಾಕಿದ 9ನೇ ಓವರ್‌ನ ಮೊದಲ ಎಸೆತದಲ್ಲಿ ರಾಯಲ್ಸ್‌ ನಾಯಕ ಸ್ಟೀವ್‌ ಸ್ಮಿತ್‌ ವಿಕೆಟ್ ಒಪ್ಪಿಸಿದ್ದಾರೆ. ಸ್ಮಿತ್‌ 24 ರನ್ ಗಳಿಸಿದ್ದರು.

8ನೇ ಓವರ್ ಮುಕ್ತಾಯ

ರಾಯಲ್ಸ್ ತಂಡ 1 ವಿಕೆಟ್‌ ನಷ್ಟಕ್ಕೆ 56 ರನ್ ಗಳಿಸಿದೆ. ಈ ಹಂತದಲ್ಲಿ ಡೆಲ್ಲಿ ತಂಡ 3 ವಿಕೆಟ್‌ ಕಳೆದುಕೊಂಡು 70 ರನ್ ಗಳಿಸಿತ್ತು.

ಬೌಲರ್‌: ಹರ್ಷಲ್ ಪಟೇಲ್‌

7ನೇ ಓವರ್ ಮುಕ್ತಾಯ: ರಾಯಲ್ಸ್ ಅರ್ಧಶತಕ

7 ಓವರ್‌ಗಳ ಆಟ ಮುಕ್ತಾಯವಾಗಿದ್ದು ರಾಯಲ್ಸ್‌ 1 ವಿಕೆಟ್‌ ನಷ್ಟಕ್ಕೆ 50 ರನ್‌ ಗಳಿಸಿದೆ.

ಬಿರುಸಾಗಿ ಬ್ಯಾಟ್‌ ಬೀಸುತ್ತಿರುವ ಸ್ಟೀವ್‌ ಸ್ಮಿತ್‌ (20) ಮತ್ತು ಯಶಸ್ವಿ ಜೈಸ್ವಾಲ್‌ (14) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಆರ್. ಅಶ್ವಿನ್‌

6ನೇ ಓವರ್ ಮುಕ್ತಾಯ

ಪವರ್‌ ಪ್ಲೇ ಮುಕ್ತಾಯವಾಗಿದ್ದು, ಸ್ಟೀವ್‌ ಸ್ಮಿತ್‌ ಪಡೆ 1 ವಿಕೆಟ್‌ ನಷ್ಟಕ್ಕೆ 41 ರನ್‌ ಗಳಿಸಿದೆ.

ಈ ಹಂತದಲ್ಲಿ ಡೆಲ್ಲಿ ತಂಡ 3 ವಿಕೆಟ್‌ಗಳನ್ನು ಕಳೆದುಕೊಂಡು 51 ರನ್‌ ಗಳಿಸಿತ್ತು.

ಬೌಲರ್‌: ಹರ್ಷಲ್‌ ಪಟೇಲ್‌

5ನೇ ಓವರ್ ಮುಕ್ತಾಯ

5 ಓವರ್‌ಗಳ ಆಟ ಮುಗಿದಿದ್ದು ರಾಯಲ್ಸ್‌ 1 ವಿಕೆಟ್‌ ನಷ್ಟಕ್ಕೆ 33 ರನ್‌ ಗಳಿಸಿದೆ.

ಬೌಲರ್‌: ಆರ್‌.ಅಶ್ವಿನ್‌

4ನೇ ಓವರ್ ಮುಕ್ತಾಯ

4 ಓವರ್‌ಗಳ ಆಟ ಮುಕ್ತಾಯವಾಗಿದ್ದು ರಾಜಸ್ಥಾನ ತಂಡ 1 ವಿಕೆಟ್‌ ನಷ್ಟಕ್ಕೆ 30 ರನ್ ಗಳಿಸಿದೆ.

ಸ್ಮಿತ್ (12) ಮತ್ತು ಜೈಸ್ವಾಲ್‌ (3)

ಬೌಲರ್‌: ಕಗಿಸೊ ರಬಾಡ

ಮೂರು ಓವರ್ ಮುಕ್ತಾಯ

185 ರನ್‌ಗಳ ಸವಾಲಿನ ಗುರಿ ಎದುರು ಬ್ಯಾಟಿಂಗ್ ಆರಂಭಿಸಿರುವ ರಾಜಸ್ಥಾನ ರಾಯಲ್ಸ್ ಮೊದಲ ವಿಕೆಟ್ ಕಳೆದುಕೊಂಡಿದೆ.

ಯಶಸ್ವಿ ಜೈಸ್ವಾಲ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ ಜೇಸನ್‌ ರಾಯ್ (13)‌ ಮೊದಲ 3ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ನಾಯಕ ಸ್ಟೀವ್‌ ಸ್ಮಿತ್‌ ಕ್ರೀಸ್‌ಗೆ ಇಳಿದಿದ್ದಾರೆ.

ರಾಯಲ್ಸ್‌ಗೆ 185 ರನ್‌ ಗುರಿ

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 184 ರನ್‌ ಗಳಿಸಿದೆ.

ಟಾಸ್ ಗೆದ್ದು ಎದುರಾಳಿ ತಂಡಕ್ಕೆ ಬ್ಯಾಟಿಂಗ್‌ ಬಿಟ್ಟುಕೊಟ್ಟ ನಾಯಕ ಸ್ಟೀವ್‌ ಸ್ಮಿತ್‌ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಫೀಲ್ಡಿಂಗ್‌ ಮತ್ತು ಬೌಲಿಂಗ್‌ನಲ್ಲಿ ಚುರುಕುತನ ತೋರಿದ ರಾಯಲ್ಸ್‌ ಕೊನೆಯಲ್ಲಿ ಎಡವಿತು. ಒಂದು ಹಂತದಲ್ಲಿ ಡೆಲ್ಲಿ ತಂಡ ಕೇವಲ 79 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಹೀಗಾಗಿ ಈ ತಂಡ ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿತ್ತು. ಆದರೆ ಮಾರ್ಕಸ್‌ ಸ್ಟೋಯಿನಸ್‌ ಮತ್ತು ಶಿಮ್ರೋನ್ ಹೆಟ್ಮೆಯರ್‌ ಅದಕ್ಕೆ ಅವಕಾಶ ನೀಡಲಿಲ್ಲ.

19ನೇ ಓವರ್ ಮುಕ್ತಾಯ

ಡೆಲ್ಲಿ ತಂಡ 19 ಓವರ್‌ ಅಂತ್ಯಕ್ಕೆ 7 ವಿಕೆಟ್‌ ಕಳೆದುಕೊಂಡು 181 ರನ್‌ ಗಳಿಸಿದೆ.

8 ಎಸೆತಗಳಲ್ಲಿ 18 ರನ್‌ ಗಳಿಸಿದ್ದ ಅಕ್ಷರ್ ಪಟೇಲ್‌ ಈ ಓವರ್‌ನ ಕೊನೆಯ ಎಸೆತದಲ್ಲಿ ಔಟಾಗಿದ್ದಾರೆ.

ಬೌಲರ್‌: ಆ್ಯಂಡ್ರೋ ಟೈ

18ನೇ ಓವರ್ ಮುಕ್ತಾಯ

18 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಡೆಲ್ಲಿ ತಂಡ 6 ವಿಕೆಟ್‌ ಕಳೆದುಕೊಂಡು 159 ರನ್‌ ಗಳಿಸಿದೆ.

ಬೌಲರ್‌: ಜೋಫ್ರಾ ಆರ್ಚರ್‌

17ನೇ ಓವರ್ ಮುಕ್ತಾಯ: ಹೆಟ್ಮೆಯರ್ ಔಟ್

ಅಪಾಯಕಾರಿಯಾಗುವ ಸೂಚನೆ ನೀಡಿದ್ದ ಶಿಮ್ರೋನ್‌ ಹೆಟ್ಮೆಯರ್‌ 17ನೇ ಓವರ್‌ನ ಕೊನೆ ಎಸೆತದಲ್ಲಿ ಔಟಾಗಿದ್ದಾರೆ.

ಕಾರ್ತಿಕ್‌ ತ್ಯಾಗಿ ಎಸೆದ ಈ ಓವರ್‌ನ 4 ಮತ್ತು 5 ನೇ ಎಸತಗಳನ್ನು ಸಿಕ್ಸರ್‌ಗೆ ಅಟ್ಟಿದ ಹೆಟ್ಮೆಯರ್‌, ಮತ್ತೆ ಅದೇ ರೀತಿ ಹೊಡೆಯಲು ಹೋಗಿ ಬೌಂಡರಿ ಗೆರೆಯಲ್ಲಿ ಕ್ಯಾಚ್‌ ನೀಡಿ ಔಟಾದರು.

ಸದ್ಯ ಡೆಲ್ಲಿ ತಂಡ 6 ವಿಕೆಟ್‌ಗೆ 149 ರನ್‌ ಗಳಿಸಿದೆ.

16ನೇ ಓವರ್ ಮುಕ್ತಾಯ

ಡೆಲ್ಲಿ ತಂಡದ ಮೊತ್ತ 5 ವಿಕೆಟ್‌ಗೆ 135 ರನ್‌ ಗಳಿಸಿದೆ. ಹೆಟ್ಮೆಯರ್‌ (33) ಮತ್ತು ಹರ್ಷಲ್‌ ಪಟೇಲ್‌ (6) ಕ್ರೀಸ್‌ನಲ್ಲಿದ್ದಾರೆ.

ಬೌಲರ್: ಆ್ಯಂಡ್ರೋ ಟೈ

15ನೇ ಓವರ್ ಮುಕ್ತಾಯ

15 ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ ತಂಡ 5 ವಿಕೆಟ್‌ ಕಳೆದುಕೊಂಡು 122 ರನ್ ಗಳಿಸಿದೆ. ಈ ಓವರ್‌ನಲ್ಲಿ 11 ರನ್‌ ಬಂದಿದೆ.

ಬೌಲರ್‌: ಕಾರ್ತಿಕ್‌ ತ್ಯಾಗಿ

14ನೇ ಓವರ್ ಮುಕ್ತಾಯ: ಸ್ಟೋಯಿನಸ್ ವಿಕೆಟ್ ಪತನ

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿದ್ದ ಮಾರ್ಕಸ್‌ ಸ್ಟೋಯಿನಸ್‌ (39) 14ನೇ ಓವರ್‌ನಲ್ಲಿ ಔಟಾಗಿದ್ದಾರೆ.

ರಾಹುಲ್‌ ತೆವಾಟಿಯಾ ಬೌಲಿಂಗ್‌ನಲ್ಲಿ ರಾಯಲ್ಸ್ ನಾಯಕ ಸ್ಟೀವ್‌ ಸ್ಮಿತ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ.

ಸದ್ಯ 14ನೇ ಓವರ್‌ ಮುಕ್ತಾಯವಾಗಿದ್ದು, ಡೆಲ್ಲಿ 5 ವಿಕೆಟ್‌ ನಷ್ಟಕ್ಕೆ 112 ರನ್‌ ಗಳಿಸಿದೆ.

13ನೇ ಓವರ್ ಮುಕ್ತಾಯ

ಡೆಲ್ಲಿ ಕ್ಯಾಪಿಟಲ್ಸ್‌ ತಂಡ 13ನೇ ಓವರ್‌ನಲ್ಲಿ 100ರ ಗಡಿ ದಾಟಿದೆ.

13 ಓವರ್‌ಗಳ ಆಟ ಮುಕ್ತಾಯವಾಗಿದ್ದು, ಸದ್ಯ ಈ ತಂಡದ 4 ವಿಕೆಟ್‌ ನಷ್ಟಕ್ಕೆ 107 ರನ್‌ ಗಳಿಸಿದೆ.’

ಬೌಲರ್‌: ಆ್ಯಂಡ್ರೋ ಟೈ

12ನೇ ಓವರ್ ಮುಕ್ತಾಯ

ಡೆಲ್ಲಿ 4 ವಿಕೆಟ್‌ ನಷ್ಟಕ್ಕೆ 96 ರನ್‌ ಗಳಿಸಿದೆ.

ಬೌಲರ್‌: ರಾಹುಲ್‌ ತೆವಾಟಿಯಾ

11ನೇ ಓವರ್ ಮುಕ್ತಾಯ

11ನೇ ಓವರ್‌ ಅಂತ್ಯಕ್ಕೆ ಡೆಲ್ಲಿ 4 ವಿಕೆಟ್‌ ಕಳೆದುಕೊಂಡು 92 ರನ್‌ ಗಳಿಸಿದೆ. ಸ್ಟೋಯಿನಸ್ (33) ಮತ್ತು ಹೆಟ್ಮೆಯರ್‌ (4) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಕಾರ್ತಿಕ್ ತ್ಯಾಗಿ

10ನೇ ಓವರ್ ಮುಕ್ತಾಯ

ಅಗತ್ಯ ಸಂದರ್ಭದಲ್ಲಿ ಸ್ಟೋಯಿನಸ್‌ ಜೊತೆಗೂಡಿ 29 ರನ್‌ ಸೇರಿಸಿದ್ದ ರಿಷಭ್‌ ಪಂತ್‌ ಕೇವಲ 5 ರನ್‌ ಗಳಿಸಿ ಔಟಾಗಿದ್ದಾರೆ.

ಇಲ್ಲದ ರನ್‌ ಕದಿಯಲು ಹೋಗಿ ಅವರು ರನೌಟ್‌ ಆಗಿದ್ದಾರೆ.

ಸದ್ಯ ಸ್ಟೋಯಿನಸ್ ಅವರಿಗೆ ಶಿಮ್ರೋನ್‌ ಹೆಟ್ಮೆಯರ್‌ ಜೊತೆಯಾಗಿದ್ದಾರೆ.

ಸದ್ಯ 10 ಓವರ್‌ಗಳ ಆಟ ಮುಗಿದಿದ್ದು, ಡೆಲ್ಲಿ 4 ವಿಕೆಟ್‌ಗೆ 87 ರನ್‌ ಗಳಿಸಿಕೊಂಡಿದೆ.

ಬೌಲರ್‌: ರಾಹುಲ್‌ ತೆವಾಟಿಯಾ

9ನೇ ಓವರ್ ಮುಕ್ತಾಯ

ಡೆಲ್ಲಿ ತಂಡ 3 ವಿಕೆಟ್‌ಗೆ 78 ರನ್‌ ಗಳಿಸಿದೆ.

ಬೌಲರ್‌: ಶ್ರೇಯಸ್‌ ಗೋಪಾಲ್‌

8ನೇ ಓವರ್‌ ಮುಕ್ತಾಯ

8 ಓವರ್‌ಗಳ ಅಂತ್ಯಕ್ಕೆ ಡೆಲ್ಲಿ ತಂಡ 3 ವಿಕೆಟ್‌ ಕಳೆದುಕೊಂಡು 70 ರನ್‌ ಗಳಿಸಿದೆ. ಮಾರ್ಕಸ್‌ ಸ್ಟೋಯಿನಸ್ (17) ಮತ್ತು ರಿಷಭ್‌ ಪಂತ್‌ (3) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ರಾಹುಲ್‌ ತೆವಾಟಿಯಾ

7ನೇ ಓವರ್ ಮುಕ್ತಾಯ

ಡೆಲ್ಲಿ ತಂಡ 3 ವಿಕೆಟ್‌ ಕಳೆದುಕೊಂಡು 66 ರನ್‌ ಗಳಿಸಿದೆ. ಪಂತ್‌ (2) ಮತ್ತು ಮಾರ್ಕಸ್‌ ಸ್ಟೋಯಿನಸ್‌ (15) ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ಶ್ರೇಯಸ್ ಗೋಪಾಲ್

6ನೇ ಓವರ್ ಮುಕ್ತಾಯ

ಡೆಲ್ಲಿ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಆರನೇ ಓವರ್‌ನ 5ನೇ ಎಸೆತದಲ್ಲಿ ರನೌಟ್‌ ಅದರು. ಅಯ್ಯರ್‌ 18 ಎಸೆತಗಳಲ್ಲಿ 22 ರನ್‌ ಗಳಿಸಿದ್ದಾರೆ.

ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾಡುತ್ತಿರುವ ಆ್ಯಂಡ್ರೋ ಟೈ ಪವರ್‌ ಪ್ಲೇನ ಕೊನೆಯ ಓವರ್‌ ಬೌಲಿಂಗ್ ಮಾಡಿದರು.

ಸದ್ಯ ಡೆಲ್ಲಿ 3 ವಿಕೆಟ್‌ ನಷ್ಟಕ್ಕೆ 51 ರನ್‌ ಗಳಿಸಿದೆ.

5ನೇ ಓವರ್ ಮುಕ್ತಾಯ

ಜೋಫ್ರಾ ಆರ್ಚರ್‌ ಎಸೆದ 5ನೇ ಓವರ್‌ನ 2ನೇ ಎಸೆತದಲ್ಲಿ ಪೃಥ್ವಿ ಶಾ (19) ಔಟಾಗಿದ್ದಾರೆ. ಶಾ ಬಲವಾಗಿ ಹೊಡೆದ ಚೆಂಡು ಎತ್ತರಕ್ಕೆ ಚಿಮ್ಮಿತು. ಅದನ್ನು ಹಿಡಿತಕ್ಕೆ ಪಡೆಯುವಲ್ಲಿ ಜೋಫ್ರಾ ತಪ್ಪು ಮಾಡಲಿಲ್ಲ.

ನಾಲ್ಕನೇ ಕ್ರಮಾಂಕದಲ್ಲಿ ರಿಷಭ್‌ ಪಂತ್‌ ಕ್ರೀಸ್‌ಗೆ ಬಂದಿದ್ದಾರೆ.

ಸದ್ಯ ಐದು ಓವರ್‌ ಮುಗಿದಿದ್ದು, ಡೆಲ್ಲಿ 2 ವಿಕೆಟ್‌ ನಷ್ಟಕ್ಕೆ 43 ರನ್‌ ಗಳಿಸಿದೆ.

4ನೇ ಓವರ್ ಮುಕ್ತಾಯ

4 ಓವರ್‌ಗಳ ಆಟ ಮುಕ್ತಾಯವಾಗಿದ್ದು ಡೆಲ್ಲಿ 1 ವಿಕೆಟ್‌ಗೆ 38 ರನ್ ಗಳಿಸಿದೆ.

ಬೌಲರ್‌: ಕಾರ್ತಿಕ್‌ ತ್ಯಾಗಿ

3ನೇ ಓವರ್ ಮುಕ್ತಾಯ

ಡೆಲ್ಲಿ ತಂಡ 1 ವಿಕೆಟ್‌ ನಷ್ಟಕ್ಕೆ 31 ರನ್‌ ಗಳಿಸಿದೆ. ಮೂರನೇ ಓವರ್‌ನಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್‌ ಸಹಿತ 18ರನ್‌ ಬಂದಿದೆ.

ಅಯ್ಯರ್‌ ಮತ್ತು ಪೃಥ್ವಿ ಕ್ರೀಸ್‌ನಲ್ಲಿದ್ದಾರೆ.

ಬೌಲರ್‌: ವರುಣ್‌ ಆ್ಯರೋನ್

2ನೇ ಓವರ್ ಮುಕ್ತಾಯ

ಎರಡನೇ ಓವರ್‌ ಬೌಲಿಂಗ್‌ ಮಾಡಿದ ಜೋಫ್ರಾ ಆರ್ಚರ್‌ ಡೆಲ್ಲಿ ತಂಡದ ಆರಂಭಿಕ ಶಿಖರ್‌ ಧವನ್‌ಗೆ ಪೆವಿಲಿಯನ್ ದಾರಿ ತೋರಿದ್ದಾರೆ.

ಧವನ್‌ ಕೇವಲ 1 ರನ್‌ ಗಳಿಸಿ ಔಟಾಗಿದ್ದಾರೆ. ನಾಯಕ ಶ್ರೇಯಸ್‌ ಅಯ್ಯರ್‌ ಮೂರನೇ ಕ್ರಮಾಂಕದಲ್ಲ ಬ್ಯಾಟಿಂಗ್‌ಗೆ ಇಳಿದಿದ್ದಾರೆ.

ಸದ್ಯ 2 ಓವರ್ ಮುಗಿದಿದ್ದು, ತಂಡದ ಮೊತ್ತ 13 ರನ್ ಆಗಿದೆ.

1ನೇ ಓವರ್‌ ಮುಕ್ತಾಯ

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಪೃಥ್ವಿ ಶಾ ಮತ್ತು ಶಿಖರ್ ಧವನ್‌ ಇನಿಂಗ್ಸ್‌ ಆರಂಭಿಸಿದ್ದು, ಮೊದಲ ಓವರ್‌ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 7 ರನ್ ಗಳಿಸಿದೆ.

ಬೌಲರ್‌: ವರುಣ್‌ ಆ್ಯರೋನ್‌

ರಾಯಲ್ಸ್‌ ಪಡೆಯಲ್ಲಿ ಎರಡು ಬದಲಾವಣೆ

<p ng-bind-html="comm[ts].comm" ng-class="get_comm_class(comm[ts]) " ng-hide="comm[ts].geo != null &amp;&amp; comm[ts].geo.length &gt; 0 &amp;&amp; comm[ts].geo.indexOf($root.$GEO.country) == -1" ng-if="comm[ts].evt != 'Plugin:news' &amp;&amp; comm[ts].evt != 'Plugin:video' &amp;&amp; comm[ts].evt != 'Plugin:comments'">ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ.&nbsp;ಟಾಮ್‌ ಕರನ್‌ ಮತ್ತು ಅಂಕಿತ್‌ ರಜಪೂತ್‌ ಅವರನ್ನು ಕೈಬಿಡಲಾಗಿದ್ದು, ಅವರ ಜಾಗದಲ್ಲಿ ಆಂಡ್ರೋ ಟೈ ಮತ್ತು ವರುಣ್‌ ಆ್ಯರೋನ್‌ ಕಣಕ್ಕಿಳಿಯಲಿದ್ದಾರೆ.</p> <p ng-bind-html="comm[ts].comm" ng-class="get_comm_class(comm[ts]) " ng-hide="comm[ts].geo != null &amp;&amp; comm[ts].geo.length &gt; 0 &amp;&amp; comm[ts].geo.indexOf($root.$GEO.country) == -1" ng-if="comm[ts].evt != 'Plugin:news' &amp;&amp; comm[ts].evt != 'Plugin:video' &amp;&amp; comm[ts].evt != 'Plugin:comments'">ಡೆಲ್ಲಿ ಕ್ಯಾಪಿಟಲ್ಸ್‌ ಕಳೆದ ಪಂದ್ಯದಲ್ಲಿ ಆಡಿದ್ದ ತಂಡವನ್ನೇ ಮುಂದುವರಿಸಿದೆ. ಈ ತಂಡ ತನ್ನ ಹಿಂದಿನ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ 59 ರನ್‌ ಅಂತರದ ಗೆಲುವು ಸಾಧಿಸಿತ್ತು.</p>

ಹನ್ನೊಂದರ ಬಳಗ

<p ng-bind-html="comm[ts].comm" ng-class="get_comm_class(comm[ts]) " ng-hide="comm[ts].geo != null &amp;&amp; comm[ts].geo.length &gt; 0 &amp;&amp; comm[ts].geo.indexOf($root.$GEO.country) == -1" ng-if="comm[ts].evt != 'Plugin:news' &amp;&amp; comm[ts].evt != 'Plugin:video' &amp;&amp; comm[ts].evt != 'Plugin:comments'"><b>ಡೆಲ್ಲಿ ಕ್ಯಾಪಿಟಲ್ಸ್‌: </b>ಪೃಥ್ವಿ ಶಾ, ಶಿಖರ್‌ ಧವನ್, ಶ್ರೇಯಸ್‌ ಅಯ್ಯರ್‌ (ನಾಯಕ), ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌),&nbsp;ಮಾರ್ಕಸ್‌ ಸ್ಟೋಯಿನಸ್‌, ಶಿಮ್ರೋನ್‌ ಹೆಟ್ಮೆಯರ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಹರ್ಷಲ್‌ ಪಟೇಲ್‌, ಕಗಿಸೊ ರಬಾಡ, ಎನ್ರಿಚ್‌ ನೋರ್ಟ್ಜೆ</p>

ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌

ಇಂದು ನಡೆಯಲಿರುವ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ರಾಜಸ್ಥಾನ ರಾಯಲ್ಸ್‌ ತಂಡದ ನಾಯಕ ಸ್ಟೀವ್‌ ಸ್ಮಿತ್‌, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಬ್ಯಾಟಿಂಗ್‌ ಬಿಟ್ಟುಕೊಟ್ಟಿದ್ದಾರೆ.

ಶಾರ್ಜಾ ಕ್ರೀಡಾಂಗಣದಲ್ಲಿ ಗೆಲುವು ಯಾರಿಗೆ?

ಟ್ವಿಟರ್‌ನಲ್ಲಿ POLL

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.