ADVERTISEMENT

IPL-2020 | ಸೂಪರ್‌ ಓವರ್‌ನಲ್ಲಿ ಜಯದ ನಗೆ ಬೀರಿದ ಆರ್‌ಸಿಬಿ

ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಸೋಮವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದಾರೆ. ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ.

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 19:07 IST
Last Updated 28 ಸೆಪ್ಟೆಂಬರ್ 2020, 19:07 IST

ಹೀಗಿತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೂಪರ್‌ ಓವರ್‌

8 ರನ್‌ಗಳ ಗುರಿ ಎದುರು ಸೂಪರ್‌ ಓವರ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಎಬಿ ಡಿ ವಿಲಿಯರ್ಸ್‌ ಮತ್ತು ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್ ಮಾಡಿದರು. ಮುಂಬೈ ಪರ ಜಸ್‌ಪ್ರೀತ್‌ ಬೂಮ್ರಾ ಬೌಲಿಂಗ್ ಮಾಡಿದರು.

ಕೊಹ್ಲಿ ಪಡೆ ವಿಕೆಟ್‌ ನಷ್ಟವಿಲ್ಲದೆ 9 ರನ್‌ ಗಳಿಸಿ ಜಯದ ನಗೆ ಬೀರಿತು.

ಮೊದಲ ಎಸೆತ: ಎಬಿ ಡಿ ವಿಲಿಯರ್ಸ್‌ 1 ರನ್‌
ಎರಡನೇ ಎಸೆತ: ಕೊಹ್ಲಿ 1 ರನ್‌
ಮೂರನೇ ಎಸೆತ: ವಿಲಿಯರ್ಸ್‌ 0
ನಾಲ್ಕನೇ ಎಸೆತ: ವಿಲಿಯರ್ಸ್‌ 4 ರನ್
ಐದನೇ ಎಸೆತ: ವಿಲಿಯರ್ಸ್‌ 1 ರನ್
ಆರನೇ ಎಸೆತ: ಕೊಹ್ಲಿ 4 ರನ್‌

ADVERTISEMENT

ಹೀಗಿತ್ತು ಮುಂಬೈ ಇಂಡಿಯನ್ಸ್‌ ಸೂಪರ್‌ ಓವರ್‌

ಸೂಪರ್‌ ಓವರ್‌ನಲ್ಲಿ ಮುಂಬೈ ಪರ ಕೀರನ್‌ ಪೊಲಾರ್ಡ್‌ ಮತ್ತು ಹಾರ್ದಿಕ್‌ ಪಾಂಡ್ಯ ಬ್ಯಾಟಿಂಗ್ ಮಾಡಿದರು. ಆರ್‌ಸಿಬಿ ಪರ ನವದೀಪ್‌ ಶೈನಿ ಬೌಲಿಂಗ್ ಮಾಡಿದರು.

ಮೊದಲ ಎಸೆತ: ಪೊಲಾರ್ಡ್‌ 1 ರನ್‌
ಎರಡನೇ ಎಸೆತ: ಹಾರ್ದಿಕ್‌ 1 ರನ್‌
ಮೂರನೇ ಎಸೆತ: ಪೊಲಾರ್ಡ್‌ 0
ನಾಲ್ಕನೇ ಎಸೆತ: ಪೊಲಾರ್ಡ್‌ 4 ರನ್
ಐದನೇ ಎಸೆತ: ಪೊಲಾರ್ಡ್‌ ಔಟ್‌
ಆರನೇ ಎಸೆತ: 1 ಬೈಸ್‌

ಸ್ಕೋರ್‌ ಲೆವಲ್‌: ಸೂಪರ್‌ ಓವರ್‌ಗೆ ಸಾಗಿದ ಪಂದ್ಯ

ಮುಂಬೈ ಗೆಲುವಿಗೆ ಕೊನೆಯ ಓವರ್‌ನಲ್ಲಿ 19 ರನ್‌ ಅಗತ್ಯವಿತ್ತು. ಆದರೆ, ಪೊಲಾರ್ಡ್‌ ಮತ್ತು ಕಿಶನ್‌ 18 ರನ್‌ ಗಳಿಸಿಕೊಂಡರು.

ಹೀಗಾಗಿ ಎರಡೂ ತಂಡದ ಮೊತ್ತ ಸಮವಾಗಿದ್ದು, ಪಂದ್ಯ ಸೂಪರ್‌ ಓವರ್‌ಗೆ ಸಾಗಿದೆ.

ಕೀಶನ್–ಪೊಲಾರ್ಡ್‌ ಶತಕದ ಜೊತೆಯಾಟ

11.2 ಓವರ್‌ಗಳಲ್ಲಿ ಕೇವಲ 78 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಮುಂಬೈಗೆ ಕೀರನ್‌ ಪೊಲಾರ್ಡ್‌ ಮತ್ತು ಇಶಾನ್‌ ಕಿಶನ್‌ ಆಧಾರವಾದರು.

ಈ ಜೋಡಿ ಐದನೇ ವಿಕೆಟ್‌ಗೆ ಕೇವಲ 46 ಎಸೆತಗಳಲ್ಲಿ 105 ರನ್‌ ಕಲೆಹಾಕಿ ಆಡುತ್ತಿದೆ.

ಸದ್ಯ 19 ಓವರ್‌ಗಳ ಆಟ ಅಂತ್ಯವಾಗಿದ್ದು, ಪೊಲಾರ್ಡ್‌ 55 ಮತ್ತು ಕಿಶನ್‌ 86 ರನ್‌ ಗಳಿಸಿದ್ದಾರೆ.

ಗೆಲ್ಲಲು ಕೊನೆಯ ಓವರ್‌ನಲ್ಲಿ 19 ರನ್‌ ಗಳಿಸಬೇಕಿದೆ.

18ನೇ ಓವರ್ ಮುಕ್ತಾಯ: 31 ರನ್‌ ಅಗತ್ಯ

ಕೀರನ್‌ ಪೊಲಾರ್ಡ್‌ ಮತ್ತು ಇಶನ್‌ ಕಿಶನ್‌ 17 ಮತ್ತು 18ನೇ ಓವರ್‌ಗಳಲ್ಲಿ ಬರೋಬ್ಬರಿ 49 ರನ್‌ ಚಚ್ಚಿರು.

ಗೆಲ್ಲಲು ಇನ್ನು ಉಳಿದಿರುವ 2 ಓವರ್‌ಗಳಲ್ಲಿ 31 ರನ್‌ ಗಳಿಸಬೇಕಿದೆ.

17ನೇ ಓವರ್‌ನಲ್ಲಿ 27 ರನ್‌ ಬಾರಿಸಿದ ಪೊಲಾರ್ಡ್‌

 4, 6, 6, 2, 6, 3

ಇದು ಆಡ್ಯಂ  ಜಂಪಾ ಎಸೆದ 17ನೇ ಓವರ್‌ ವಿವರ.

10 ಎಸೆತಗಳಲ್ಲಿ 11 ರನ್‌ ಗಳಿಸಿ ಆಡುತ್ತಿದ್ದ ಪೊಲಾರ್ಡ್‌ ಈ ಓವರ್‌ ಬಳಿಕ 16 ಎಸೆತಗಳಲ್ಲಿ 38 ರನ್‌ ಗಳಿಸಿಕೊಂಡರು.

ಈ ಓವರ್‌ಗೂ ಮುನ್ನ ಮುಂಬೈ ಇಂಡಿಯನ್ಸ್‌ 122 ರನ್‌ ಗಳಿಸಿತ್ತು. ಉಳಿದಿರುವ 18 ಎಸೆತಗಳಲ್ಲಿ 54 ರನ್‌ ಗಳಿಸಬೇಕಿದೆ.

16ನೇ ಓವರ್ ಮುಕ್ತಾಯ; 4 ವಿಕೆಟ್‌ಗೆ 122 ರನ್

ಕಿಶನ್‌ (70) ಮತ್ತು ಕೀರನ್‌ ಪೊಲಾರ್ಡ್‌ (11) ಕ್ರೀಸ್‌ನಲ್ಲಿದ್ದಾರೆ.

15ನೇ ಓವರ್ ಮುಕ್ತಾಯ; 4 ವಿಕೆಟ್‌ಗೆ 112 ರನ್

ಕಿಶನ್‌ (61) ಮತ್ತು ಕೀರನ್‌ ಪೊಲಾರ್ಡ್‌ (10) ಕ್ರೀಸ್‌ನಲ್ಲಿದ್ದಾರೆ.

ಅರ್ಧಶತಕದ ಪೂರೈಸಿದ ಇಶಾನ್‌ ಕಿಶನ್

ಈ ಟೂರ್ನಿಯಲ್ಲಿ ಮೊದಲ ಪಂದ್ಯವಾಡಿದ ಇಶನ್‌ ಕಿಶನ್‌ ತಮ್ಮ ಐಪಿಎಲ್‌ ಕರಿಯರ್‌ನ 4ನೇ ಅರ್ಧಶತಕ ಸಿಡಿಸಿದರು.

ಸದ್ಯ 15ನೇ ಓವರ್ ಮುಕ್ತಾಯವಾಗಿದ್ದು ಮುಂಬೈ 4 ವಿಕೆಟ್‌ಗೆ 98 ರನ್ ಗಳಿಸಿದೆ.

ಕಿಶನ್‌ (51) ಮತ್ತು ಕೀರನ್‌ ಪೊಲಾರ್ಡ್‌ (5) ಕ್ರೀಸ್‌ನಲ್ಲಿದ್ದಾರೆ.

13 ಓವರ್ ಮುಕ್ತಾಯ: 4‌ ನಷ್ಟಕ್ಕೆ 89 ರನ್

13 ಓವರ್‌ಗಳ ಆಟ ಮುಕ್ತಾಯವಾಗಿದ್ದು ಮುಂಬೈ 4‌ ನಷ್ಟಕ್ಕೆ 89 ರನ್ ಗಳಿಸಿದೆ.

ಇಶನ್‌ ಕಿಶನ್‌ (45) ಮತ್ತು ಕೀರನ್‌ ಪೊಲಾರ್ಡ್‌ (2) ಕ್ರೀಸ್‌ನಲ್ಲಿದ್ದಾರೆ.

ಮೂರನೇ ಕ್ಯಾಚ್ ಪಡೆದ ಪವನ್ ನೇಗಿ

ಅತ್ಯುತ್ತಮವಾಗಿ ಫೀಲ್ಡಿಂಗ್‌ ಮಾಡುತ್ತಿರುವ ಪವನ್‌ ನೇಗಿ ಮೂರು ಉತ್ತಮ ಕ್ಯಾಚ್‌ಗಳನ್ನು ಪಡೆದರು.

ಎರಡನೇ ಓವರ್‌ ಎಸೆದ ವಾಷಿಂಗ್ಟನ್‌ ಸುಂದರ್‌ ಬೌಲಿಂಗ್‌ನಲ್ಲಿ ರೋಹಿತ್‌ ಶರ್ಮಾ, ಯಜುವೇಂದ್ರ ಚಾಹಲ್‌ ಎಸೆದ 7ನೇ ಓವರ್‌ನಲ್ಲಿ ಕ್ವಿಂಟನ್‌ ಡಿ ಕಾಕ್‌ ಮತ್ತು ಆ್ಯಡಂ ಜಂಪಾ ಎಸೆದ 12ನೇ ಓವರ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಅವರಿಗೆ ಪೆವಿಲಿಯನ್‌ ದಾರಿ ತೋರಿದರು.

11ನೇ ಓವರ್‌ ಮುಕ್ತಾಯ: 3 ವಿಕೆಟ್‌ಗೆ 77 ರನ್38‌

ಹಾರ್ದಿಕ್‌ ಪಾಂಡ್ಯ (15) ಮತ್ತು ಕಿಶನ್‌ (19) ಕ್ರೀಸ್‌ನಲ್ಲಿದ್ದಾರೆ.

10ನೇ ಓವರ್‌ ಮುಕ್ತಾಯ: 3 ವಿಕೆಟ್‌ಗೆ 63 ರನ್‌

ಹತ್ತು ಓವರ್‌ಗಳ ಆಟ ಮುಗಿದಿದ್ದು ಮುಂಬೈ ಇಂಡಿಯನ್ಸ್‌ 3 ವಿಕೆಟ್‌ ಕಳೆದುಕೊಂಡು 63 ರನ್‌ ಗಳಿಸಿದೆ.

ಗೆಲ್ಲಲು ಇನ್ನು ಉಳಿದಿರುವ 60 ಎಸೆತಗಳಲ್ಲಿ 139 ರನ್‌ ಗಳಿಸಬೇಕಿದೆ.

ಹಾರ್ದಿಕ್‌ ಪಾಂಡ್ಯ (10) ಮತ್ತು ಕಿಶನ್‌ (25) ಕ್ರೀಸ್‌ನಲ್ಲಿದ್ದಾರೆ. ಈ ಹಂತದಲ್ಲಿ ಆರ್‌ಸಿಬಿ 1 ವಿಕೆಟ್‌ಗೆ 85 ರನ್‌ ಗಳಿಸಿತ್ತು.

9ನೇ ಓವರ್‌ ಮುಕ್ತಾಯ: 3 ವಿಕೆಟ್‌ಗೆ 58 ರನ್‌

ಹಾರ್ದಿಕ್‌ ಪಾಂಡ್ಯ (13) ಮತ್ತು ಕಿಶನ್‌ (22) ಕ್ರೀಸ್‌ನಲ್ಲಿದ್ದಾರೆ.

ಈ ಹಂತದಲ್ಲಿ ಆರ್‌ಸಿಬಿ 81 ರನ್‌ ಗಳಿಸಿ ಒಂದು ವಿಕೆಟ್‌ ಕಳೆದುಕೊಂಡಿತ್ತು.

8ನೇ ಓವರ್‌ ಮುಕ್ತಾಯ: 3 ವಿಕೆಟ್‌ಗೆ 52 ರನ್‌

ಮುಂಬೈ ತಂಡ ಮೂರು ವಿಕೆಟ್‌ ಕಳೆದುಕೊಂಡಿದ್ದು, 8 ಓವರ್ ಮುಕ್ತಾಯಕ್ಕೆ 52 ರನ್‌ ಗಳಿಸಿದೆ.

ಹಾರ್ದಿಕ್‌ ಪಾಂಡ್ಯ (10) ಮತ್ತು ಕಿಶನ್‌ (19) ಕ್ರೀಸ್‌ನಲ್ಲಿದ್ದಾರೆ.

3ನೇ ವಿಕೆಟ್ ಪತನ

7ನೇ ಓವರ್‌ನಲ್ಲಿ ಬೌಲಿಂಗ್ ಮಾಡಿದ ಯಜುವೇಂದ್ರ ಚಾಹಲ್‌ ಅವರು ಕ್ವಿಂಟನ್‌ ಡಿ ಕಾಕ್‌ಗೆ ಪೆವಿಲಿಯನ್‌ ದಾರಿ ತೋರಿದರು.

ಸದ್ಯ ತಂಡದ ಮೊತ್ತ 6.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 39 ಆಗಿದೆ.

6ನೇ ಓವರ್‌ ಮುಕ್ತಾಯ: 2 ವಿಕೆಟ್‌ ನಷ್ಟಕ್ಕೆ 35 ರನ್‌

ಐಪಿಎಲ್‌ನಲ್ಲಿ 53ನೇ ಪಂದ್ಯವಾಡುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟ್ಸ್‌ಮನ್‌ ಕ್ವಿಂಟನ್‌ ಡಿ ಕಾಕ್‌ 1500 ರನ್‌ ಪೂರೈಸಿದ್ದಾರೆ.

ಅವರು ಸದ್ಯ 10 ರನ್‌ ಗಳಿಸಿದ್ದು, ಅವರೊಟ್ಟಿಗೆ ಇಶನ್‌ (15) ಕ್ರೀಸ್‌ನಲ್ಲಿದ್ದಾರೆ.

ಈ ಹಂತದಲ್ಲಿ ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 59 ರನ್‌ ಗಳಿಸಿತ್ತು.

5ನೇ ಓವರ್‌ ಮುಕ್ತಾಯ: 2 ವಿಕೆಟ್‌ಗೆ 31ರನ್‌

ಕಿಶನ್‌ (13) ಮತ್ತು ಡಿ ಕಾಕ್‌ (9) ಕ್ರೀಸ್‌ನಲ್ಲಿದ್ದಾರೆ.

4ನೇ ಓವರ್ ಮುಕ್ತಾಯ: 2 ವಿಕೆಟ್‌ ನಷಕ್ಕೆ 24 ರನ್‌

ಕಿಶನ್‌ (6) ಮತ್ತು ಡಿ ಕಾಕ್‌ (9) ಕ್ರೀಸ್‌ನಲ್ಲಿದ್ದಾರೆ.

3 ಓವರ್‌ ಮುಕ್ತಾಯ: 2 ವಿಕೆಟ್‌ಗೆ 23 ರನ್‌

ಡಿ ಕಾಕ್‌ (9) ಮತ್ತು ಇಶಾನ್‌ ಕಿಶನ್‌ (5) ಕ್ರೀಸ್‌ನಲ್ಲಿದ್ದಾರೆ.

2ನೇ ವಿಕೆಟ್‌ ಪತನ

ನಾಯಕ ರೋಹಿತ್‌ ನಿರ್ಗಮನಗೊಳಿಸಿದ ಬಳಿಕ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್‌ ಶೂನ್ಯಕ್ಕೆ ಮರಳಿದ್ದಾರೆ.

2ನೇ ಓವರ್‌ ಮುಕ್ತಾಯ: 1 ವಿಕೆಟ್‌ ನಷ್ಟಕ್ಕೆ 16

ಮುಂಬೈ ಇಂಡಿಯನ್ಸ್‌ ಪರ ಕ್ವಿಂಟನ್‌ ಡಿ ಕಾಕ್‌ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದ ನಾಯಕ ರೋಹಿತ್‌ ಶರ್ಮಾ (8) ವಿಕೆಟ್‌ ಒಪ್ಪಿಸಿದ್ದಾರೆ.

ವಾಷಿಂಗ್ಟನ್‌ ಸುಂದರ್‌ ಎಸೆದ ಎರಡನೇ ಓವರ್‌ನಲ್ಲಿ ಅವರು ಪವನ್‌ ನೇಗಿಗೆ ಕ್ಯಾಚ್‌ ನೀಡಿ ನಿರ್ಗಮಿಸಿದ್ದಾರೆ. ಸದ್ಯ ಡಿ ಕಾಕ್‌ (7) ಮತ್ತು ಸೂರ್ಯಕುಮಾರ್‌ ಯಾದವ್ (0)‌ ಕ್ರೀಸ್‌ನಲ್ಲಿದ್ದಾರೆ.

ಇನಿಂಗ್ಸ್ ಮುಕ್ತಾಯ: ಮುಂಬೈ ಇಂಡಿಯನ್ಸ್‌ಗೆ 202 ರನ್‌ ಗುರಿ

ಐಪಿಎಲ್‌ನಲ್ಲಿ 35ನೇ ಅರ್ಧಶತಕ ಸಿಡಿಸಿದ ಎಬಿ ಡಿ ವಿಲಿಯರ್ಸ್‌ (55) ಹಾಗೂ ಶಿವಂ ದುಬೆ (27) ತಂಡದ ಮೊತ್ತವನ್ನು 201ಕ್ಕೆ ಏರಿಸಿದರು.

19ನೇ ಓವರ್ ಮುಕ್ತಾಯ; 3 ವಿಕೆಟ್‌ಗೆ 181 ರನ್

ವಿಲಿಯರ್ಸ್‌ (54) ಮತ್ತು ದುಬೆ (8) ಕ್ರೀಸ್‌ನಲ್ಲಿದ್ದಾರೆ.

18ನೇ ಓವರ್ ಮುಕ್ತಾಯ: 3 ವಿಕೆಟ್‌ಗೆ 164 ರನ್

ಟ್ರೆಂಟ್‌ ಬೌಲ್ಟ್‌ ಎಸೆದ 18ನೇ ಓವರ್‌ನಲ್ಲಿ ದೇವದತ್ತ (54) ವಿಕೆಟ್‌ ಒಪ್ಪಿಸಿದರು.

18 ಓವರ್ ಮುಕ್ತಾಯವಾಗಿದ್ದು ಆರ್‌ಸಿಬಿ 3 ವಿಕೆಟ್‌ ಕಳೆದುಕೊಂಡು 164 ರನ್‌ ಕಲೆಹಾಕಿದೆ. ವಿಲಿಯರ್ಸ್‌ (43) ಜೊತೆಗೆ ದುಬೆ (2) ಕ್ರೀಸ್‌ನಲ್ಲಿದ್ದಾರೆ.

17ನೇ ಓವರ್‌ ಮುಕ್ತಾಯ: 2 ವಿಕೆಟ್‌ಗೆ 154 ರನ್‌

ಪಡಿಕ್ಕಲ್‌ (54) ಮತ್ತು ವಿಲಿಯರ್ಸ್‌ (37) ಕ್ರೀಸ್‌ನಲ್ಲಿದ್ದಾರೆ. ಇನ್ನು ಮೂರು ಓವರ್‌ಗಳ ಆಟ ಬಾಕಿ ಇದೆ.

ಪಡಿಕ್ಕಲ್‌ 2ನೇ ಅರ್ಧಶತಕ

ಐಪಿಎಲ್‌ನಲ್ಲಿ ಮೂರನೇ ಪಂದ್ಯವಾಡುತ್ತಿರುವ ಕರ್ನಾಟಕದ ಯುವ ಪ್ರತಿಭೆ ದೇವದತ್ತ ಪಡಿಕ್ಕಲ್‌ 2ನೇ ಅರ್ಧಶತಕ ಪೂರೈಸಿದರು.

ಸದ್ಯ 16 ಓವರ್‌ ಮುಕ್ತಾಯವಾಗಿದ್ದು, ಪಡಿಕ್ಕಲ್‌ (54) ಮತ್ತು ವಿಲಿಯರ್ಸ್‌ (20) ಕಲೆಹಾಕಿದ್ದಾರೆ.

15ನೇ ಓವರ್ ಮುಕ್ತಾಯ; 2 ವಿಕೆಟ್‌ಗೆ 123 ರನ್

ಪಡಿಕ್ಕಲ್‌ (49) ಮತ್ತು ವಿಲಿಯರ್ಸ್‌ (12) ಕ್ರೀಸ್‌ನಲ್ಲಿದ್ದಾರೆ.

14ನೇ ಓವರ್ ಮುಕ್ತಾಯ: 2 ವಿಕೆಟ್‌ಗೆ 110ರನ್

ಕೇವಲ 6 ಓವರ್‌ಗಳಲ್ಲಿ 59 ರನ್‌ ಗಳಿಸಿದ್ದ ಆರ್‌ಸಿಬಿ ನಂತರದ ಎಂಟು ಓವರ್‌ಗಳಲ್ಲಿ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು 51 ರನ್‌ ಗಳಿಸಿದೆ.

ಇದರೊಂದಿಗೆ ವಿರಾಟ್‌ ಪಡೆ ನೂರು ರನ್‌ ಪೂರೈಸಿದೆ.

ಪಡಿಕ್ಕಲ್ (44)‌ ಮತ್ತು ವಿಲಿಯರ್ಸ್‌ (4) ಕ್ರೀಸ್‌ನಲ್ಲಿದ್ದಾರೆ.

ಕೊಹ್ಲಿ ವಿಕೆಟ್ ಪತನ

ಕಳೆದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 15 ಮತ್ತು 2 ರನ್‌ ಗಳಿಸಿ ನಿರಾಸೆ ಮೂಡಿಸಿದ್ದ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ ಮತ್ತೊಮ್ಮೆ ದೊಡ್ಡ ಇನಿಂಗ್ಸ್‌ ಆಡಲು ವಿಫಲರಾದರು.

101 ಎಸೆತಗಳನ್ನು ಎದುರಿಸಿದ ಕೊಹ್ಲಿ ಕೇವಲ 3 ರನ್‌ ಗಳಿಸಿ ರಾಹುಲ್ ಚಾಹರ್‌ಗೆ ವಿಕೆಟ್‌ ಒಪ್ಪಿಸಿದರು.

ಸದ್ಯ ಆರ್‌ಸಿಬಿ 13 ಓವರ್‌ ಅಂತ್ಯಕ್ಕೆ 2 ವಿಕೆಟ್‌ ಕಳೆದುಕೊಂಡು 96 ರನ್‌ ಗಳಿಸಿದೆ.

ಆರಂಭಿಕ ಪಡಿಕ್ಕಲ್ (31)‌ ಜೊತೆಗೆ ಅನುಭವಿ ಎಬಿ ಡಿ ವಿಲಿಯರ್ಸ್‌ (3) ಕ್ರೀಸ್‌ನಲ್ಲಿದ್ದಾರೆ.

12 ಓವರ್‌ ಮುಕ್ತಾಯ: 1 ವಿಕೆಟ್‌ ನಷ್ಟಕ್ಕೆ 91ರನ್

ಪಡಿಕ್ಕಲ್‌ (29) ಮತ್ತು ಕೊಹ್ಲಿ (3) ಕ್ರೀಸ್‌ನಲ್ಲಿದ್ದಾರೆ.

11ನೇ ಓವರ್‌ ಮುಕ್ತಾಯ: 1 ವಿಕೆಟ್‌ಗೆ 88 ರನ್‌

ಪಡಿಕ್ಕಲ್‌ (27) ಮತ್ತು ಕೊಹ್ಲಿ (2) ಕ್ರೀಸ್‌ನಲ್ಲಿದ್ದಾರೆ.

10ನೇ ಓವರ್‌ ಮುಕ್ತಾಯ: 1 ವಿಕೆಟ್‌ಗೆ 85 ರನ್‌

ದೇವದತ್ತ ಪಡಿಕಲ್‌ 25 ರನ್‌ ಗಳಿಸಿ ಆಡುತ್ತಿದ್ದು, ಅವರೊಟ್ಟಿಗೆ ವಿರಾಟ್‌ ಕೊಹ್ಲಿ (1) ಕ್ರೀಸ್‌ನಲ್ಲಿದ್ದಾರೆ.

9ನೇ ಓವರ್‌ ಮುಕ್ತಾಯ: 1 ವಿಕೆಟ್‌ಗೆ 81 ರನ್‌

ಅರ್ಧಶತಕ ಗಳಿಸಿದ್ದ ಆ್ಯರನ್‌ ಫಿಂಚ್‌ (52) ಟ್ರೆಂಟ್‌ ಬೌಲ್ಟ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದ್ದಾರೆ.

ಪಡಿಕ್ಕಲ್‌ (23) ಜೊತೆಗೆ ನಾಯಕ ವಿರಾಟ್‌ ಕೊಹ್ಲಿ ಕ್ರೀಸ್‌ನಲ್ಲಿದ್ದಾರೆ.‌ 

8ನೇ ಓವರ್‌ ಮುಕ್ತಾಯ: ಅರ್ಧಶತಕ ಪೂರೈಸಿದ ಫಿಂಚ್‌

8 ಓವರ್‌ಗಳ ಆಟ ಮುಕ್ತಾಯವಾಗಿದ್ದುಯ ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 74 ರನ್‌ ಗಳಿಸಿದೆ.

ಸ್ಫೋಟಕ ಆಟವಾಡುತ್ತಿರುವ ಫಿಂಚ್ 31ನೇ ಎಸೆತದಲ್ಲಿ ಅರ್ಧಶತಕ ಪೂರೈಸಿದ್ದಾರೆ. ಇದು ಅವರು ಈ ಬಾರಿ ಗಳಿಸಿದ ಮೊದಲ ಮತ್ತು ಒಟ್ಟಾರೆ‌ ಐಪಿಎಲ್‌ನಲ್ಲಿ 14ನೇ ಅರ್ಧಶತಕವಾಗಿದೆ.

7ನೇ ಓವರ್ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 65 ರನ್‌

ಪಡಿಕ್ಕಲ್‌ (15) ಮತ್ತು ಫಿಂಚ್‌ (45) ಕ್ರೀಸ್‌ನಲ್ಲಿದ್ದಾರೆ.

6ನೇ ಓವರ್ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 59 ರನ್‌

ಆರು ಓವರ್‌ಗಳ ಆಟ ಮುಕ್ತಾಯವಾಗಿದ್ದು ಆರ್‌ಸಿಬಿ ವಿಕೆಟ್‌ ನಷ್ಟವಿಲ್ಲದೆ 59 ರನ್‌ ಗಳಿಸಿದೆ.

ಬಿರುಸಿನ ಬ್ಯಾಟಿಂಗ್‌ ನಡೆಸುತ್ತಿರುವ ಆ್ಯರನ್‌ ಫಿಂಚ್‌ 25 ಎಸೆತಗಳಲ್ಲಿ 40 ರನ್‌ ಗಳಿಸಿದ್ದು, ಅವರಿಗೆ ದೇವದತ್ತ ಪಡಿಕಲ್ (14)‌ ಉತ್ತಮ ಬೆಂಬಲ ನೀಡುತ್ತಿದ್ದಾರೆ.

5ನೇ ಓವರ್ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 49 ರನ್‌

ಪಡಿಕ್ಕಲ್‌ (9) ಮತ್ತು ಫಿಂಚ್‌ (40) ಕ್ರೀಸ್‌ನಲ್ಲಿದ್ದಾರೆ.

4ನೇ ಓವರ್ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 35 ರನ್‌

ಪಡಿಕ್ಕಲ್‌ (8) ಮತ್ತು ಫಿಂಚ್‌ (27) ಕ್ರೀಸ್‌ನಲ್ಲಿದ್ದಾರೆ.

3ನೇ ಓವರ್ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 26ರನ್‌

ಪಡಿಕ್ಕಲ್‌ (8) ಮತ್ತು ಫಿಂಚ್‌ (18) ಕ್ರೀಸ್‌ನಲ್ಲಿದ್ದಾರೆ.

2ನೇ ಓವರ್ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 16ರನ್‌

ಪಡಿಕ್ಕಲ್‌ (7) ಮತ್ತು ಫಿಂಚ್‌ (9) ಕ್ರೀಸ್‌ನಲ್ಲಿದ್ದಾರೆ.

1ನೇ ಓವರ್‌ ಮುಕ್ತಾಯ: ವಿಕೆಟ್‌ ನಷ್ಟವಿಲ್ಲದೆ 8 ರನ್‌

ಆರ್‌ಸಿಬಿ ಮೊದಲ ಓವರ್‌ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 8 ರನ್‌ ಗಳಿಸಿದೆ.

ಪಡಿಕ್ಕಲ್‌ (7) ಮತ್ತು ಫಿಂಚ್‌ (1) ಕ್ರೀಸ್‌ನಲ್ಲಿದ್ದಾರೆ.

ಆಟ ಶುರು

ಆರ್‌ಸಿಬಿ ಪರ ದೇವದತ್ತ ಪಡಿಕಲ್‌ ಮತ್ತು ಆ್ಯರನ್‌ ಫಿಂಚ್‌ ಇನಿಂಗ್ಸ್‌ ಆರಂಭಿಸಿದ್ದು, ಮುಂಬೈ ಇಂಡಿಯನ್ಸ್ ಪರ ಟ್ರೆಂಟ್‌ ಬೌಲ್ಟ್‌ ಮೊದಲ ಓವರ್‌ ಮಾಡುತ್ತಿದ್ದಾರೆ.

ಟಾಸ್ ಗೆದ್ದು ಬೌಲಿಂಗ್‌ ಆಯ್ದುಕೊಂಡ ರೋಹಿತ್

ಈ ಬಾರಿಯ ಐಪಿಎಲ್‌ ಕ್ರಿಕೆಟ್‌ ಟೂರ್ನಿಯ ಹತ್ತನೇ ಪಂದ್ಯದಲ್ಲಿ ಟಾಸ್‌ ಗೆದ್ದಿರುವ ಮುಂಬೈ ಇಂಡಿಯನ್ಸ್‌ ತಂಡದ ನಾಯಕ ರೋಹಿತ್‌ ಶರ್ಮಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.‌

RCB vs MI

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.