ADVERTISEMENT

ರಶೀದ್‌ ಖಾನ್‌, ನಬಿಗೆ ಸ್ಥಾನ

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಅಫ್ಗಾನಿಸ್ತಾನ ತಂಡ ಪ್ರಕಟ

ಪಿಟಿಐ
Published 22 ಏಪ್ರಿಲ್ 2019, 14:18 IST
Last Updated 22 ಏಪ್ರಿಲ್ 2019, 14:18 IST
ಮೊಹಮ್ಮದ್‌ ನಬೀ
ಮೊಹಮ್ಮದ್‌ ನಬೀ   

ಕಾಬೂಲ್‌: ವಿಶ್ವಕಪ್‌ ಕ್ರಿಕೆಟ್ ಟೂರ್ನಿಗೆ ಅಫ್ಗಾನಿಸ್ತಾನ ತಂಡವನ್ನು ಆಯ್ಕೆ ಮಾಡಲಾಗಿದ್ದು, ಐಪಿಎಲ್‌ನಲ್ಲಿ ಮಿಂಚುತ್ತಿರುವ ರಶೀದ್‌ ಖಾನ್‌ ಮತ್ತು ಮೊಹಮ್ಮದ್ ನಬಿ ಸ್ಥಾನ ಪಡೆದಿದ್ದಾರೆ.

ಸೋಮವಾರ ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿಯು15 ಆಟಗಾರರ ತಂಡವನ್ನು ಪ್ರಕಟಿಸಿದ್ದು,ಗುಲ್ಬದೀನ್ ನಯೀಬ್‌ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿದೆ.ಅನುಭವಿ ಆಟಗಾರರಾದಹಮೀದ್‌ ಹಸನ್‌ ಮತ್ತು ಅಸ್ಘರ್‌ ಅಫ್ಘಾನ್‌ ತಂಡದಲ್ಲಿದ್ದಾರೆ.

ಅಫ್ಘಾನ್‌ ಅವರನ್ನು ಈ ವರ್ಷದ ಆರಂಭದಲ್ಲಿಎಲ್ಲ ಮಾದರಿಯ ಕ್ರಿಕೆಟ್‌ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಹಮೀದ್‌ ಹಸನ್‌ ಗಾಯದ ಸಮಸ್ಯೆಯಿಂದ ಮೂರು ವರ್ಷ ಅಂಗಳಕ್ಕೆ ಇಳಿದಿರಲಿಲ್ಲ. ವಿಕೆಟ್‌ ಕೀಪರ್‌ಮೊಹಮ್ಮದ್‌ ಶೆಹಜಾದ್‌ ಮತ್ತು ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್ ಅವರಿಗೂ ಸ್ಥಾನ ಲಭಿಸಿದೆ.

ADVERTISEMENT

ತಂಡ ಇಂತಿದೆ: ಗುಲ್ಬದೀನ್‌ ನಯೀಬ್‌ (ನಾಯಕ), ಮೊಹಮ್ಮದ್‌ ಶೆಹಜಾದ್‌, ನೂರ್‌ ಆಲಿ ಜದ್ರಾ‌ನ್‌, ಹಜರತ್‌ವುಲ್ಲ ಜಜಾಯ್, ರಹಮತ್‌ ಶಾ, ಅಸ್ಘರ್‌ ಅಫ್ಘಾನ್, ಹಶ್ಮತ್‌ವುಲ್ಲ ಶಹೀದಿ, ನಜೀಬುಲ್ಲ ಜದ್ರಾನ್ ಶಮೀವುಲ್ಲಾ ಶಿನ್ವಾರಿ, ಮೊಹಮ್ಮದ್‌ ನಬಿ, ರಶೀದ್‌ ಖಾನ್‌, ದೌಲತ್‌ ಜದ್ರಾನ್, ಅಫ್ತಾಬ್‌ ಆಲಂ, ಹಮೀದ್‌ ಹಸನ್‌, ಮುಜೀಬ್ ಉರ್‌ ರೆಹಮಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.