ADVERTISEMENT

ಟಿ20 ಕ್ರಿಕೆಟ್: ಫೈನಲ್‌ಗೆ ಸ್ವಸ್ತಿಕ್ ಯೂನಿಯನ್, ಮೌಂಟ್ ಜಾಯ್

​ಪ್ರಜಾವಾಣಿ ವಾರ್ತೆ
Published 23 ಮೇ 2025, 16:01 IST
Last Updated 23 ಮೇ 2025, 16:01 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ಮತ್ತು ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್‌ ತಂಡಗಳು ಜಿ. ಕಸ್ತೂರಿರಂಗನ್ ಸ್ಮಾರಕ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಫೈನಲ್ ಪ್ರವೇಶಿಸಿವೆ. 

ಮಳೆಯಿಂದಾಗಿ ಓವರ್‌ಗಳು ಕಡಿತಗೊಂಡ ಸೆಮಿಫೈನಲ್ ಪಂದ್ಯದಲ್ಲಿ ಸ್ವಸ್ತಿಕ್ ಯೂನಿಯನ್ ತಂಡವು 10 ರನ್‌ಗಳಿಂದ ರಾಜಾಜಿನಗರ ಕ್ರಿಕೆಟರ್ಸ್ ವಿರುದ್ಧ ಜಯಿಸಿತು. ಸ್ವಸ್ತಿಕ್ ತಂಡವು ಮೊದಲು ಬ್ಯಾಟಿಂಗ್ ಮಾಡಿ 5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 59 ರನ್ ಗಳಿಸಿತು. ರಾಜಾಜಿನಗರ ತಂಡವು 5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 49 ರನ್ ಗಳಿಸಿತು. 

ADVERTISEMENT

ಇನ್ನೊಂದು ಸೆಮಿಫೈನಲ್‌ನಲ್ಲಿ ಮೌಂಟ್‌ ಜಾಯ್ ಕ್ಲಬ್ ತಂಡವು 6 ವಿಕೆಟ್‌ಗಳಿಂದ ಸೋಷಿಯನ್ ಕ್ರಿಕೆಟರ್ಸ್ ಎದುರು ಗೆದ್ದಿತು. 

ಸಂಕ್ಷಿಪ್ತ ಸ್ಕೋರು:  ಸ್ವಸ್ತಿಕ್ ಯೂನಿಯನ್ ಸಿಸಿ(2): 5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 59. ರಾಜಾಜಿನಗರ ಕ್ರಿಕೆಟರ್ಸ್: 5 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 49 (ಸಿರೀಶ್ ಬಳಗಾರ್ 26, ಸಿ.ಎ. ಕಾರ್ತಿಕ್ 21ಕ್ಕೆ2, ಎನ್‌.ವಿ. ಪ್ರಣವ್ 15ಕ್ಕೆ2)  

ಸೋಷಿಯಲ್ ಕ್ರಿಕೆಟರ್ಸ್: 20 ಓವರ್‌ಗಳಲ್ಲಿ 8ಕ್ಕೆ144 (ಆದರ್ಶ್ ಪ್ರಜ್ವಲ್ 45, ಕೃಶಿವ್ ಬಜಾಜ್ 43, ಅನ್ಮೋಲ್ ಮಾಥೂರ್ ಔಟಾಗದೇ 31, ಲಿಖಿತ್ ಬನ್ನೂರ್ 18ಕ್ಕೆ2, ನಿತೀಶ್ ಗೌಡ 28ಕ್ಕೆ2, ಎಸ್. ಚಿರಂತ್ 9ಕ್ಕೆ2) ಮೌಂಟ್ ಜಾಯ್ ಕ್ರಿಕೆಟ್ ಕ್ಲಬ್: 18.4 ಓವರ್‌ಗಳಲ್ಲಿ 4ಕ್ಕೆ146 (ಚಿರಾಗ್ ಆರ್ ನಾಯಕ 21, ಶರತ್ ಬೇಲೂರ್ ರವಿ 47, ಕೆ. ಗಗನದೀಪ್ ಔಟಾಗದೇ 49, ಆದಿತ್ಯ ಸೋಮಣ್ಣ ಔಟಾಗದೇ 24, ಮೊಹಮ್ಮದ್ ಅಷ್ಫಾಕ್ 14ಕ್ಕೆ3)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.