ADVERTISEMENT

ಹೇಮಂತ್, ರಂಜಾಬ್‌ ಶತಕ

ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ ಕ್ರಿಕೆಟ್‌: ಚಾಮರಾಜಪೇಟೆ ಕ್ಲಬ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 18:30 IST
Last Updated 15 ಡಿಸೆಂಬರ್ 2018, 18:30 IST

ಬೆಂಗಳೂರು: ಹೇಮಂತ್‌ (112) ಮತ್ತು ರಂಜಾಬ್‌ (102) ಅವರ ಶತಕಗಳ ಬಲದಿಂದ ಚಾಮರಾಜಪೇಟೆ ಕ್ಲಬ್‌ ತಂಡ ಜೆ.ಬಿ.ಮಲ್ಲಾರಾಧ್ಯ ಶೀಲ್ಡ್‌ಗಾಗಿ ನಡೆಯುತ್ತಿರುವ ಕೆಎಸ್‌ಸಿಎ ಗುಂಪು–1, ಡಿವಿಷನ್‌–5ರ ಲೀಗ್‌ ಕಮ್‌ ನಾಕೌಟ್‌ ಕ್ರಿಕೆಟ್‌ ಟೂರ್ನಿಯ ಯಂಗ್‌ ಕ್ರಿಕೆಟರ್ಸ್‌ (2) ಎದುರಿನ ಪಂದ್ಯದಲ್ಲಿ 272ರನ್‌ಗಳ ಜಯಭೇರಿ ಮೊಳಗಿಸಿದೆ.

ಸಂಕ್ಷಿಪ್ತ ಸ್ಕೋರ್‌: ಚಾಮರಾಜಪೇಟೆ ಕ್ಲಬ್‌: 45.2 ಓವರ್‌ಗಳಲ್ಲಿ 476 (ಪ್ರಶಾಂತ್‌ 90, ರಂಜಾಬ್‌ 102, ಗೌತಮ್‌ 44, ಹೇಮಂತ್‌ 112; ಅನೀಶ್‌ 70ಕ್ಕೆ3). ಯಂಗ್‌ ಕ್ರಿಕೆಟರ್ಸ್‌ (2): 38 ಓವರ್‌ಗಳಲ್ಲಿ 204 (ವಿ.ನಿಖಿಲ್‌ 99; ಕಾರ್ತಿಕೇಯ 47ಕ್ಕೆ3, ಹೇಮಂತ್‌ 37ಕ್ಕೆ3). ಫಲಿತಾಂಶ: ಚಾಮರಾಜಪೇಟೆ ಕ್ಲಬ್‌ಗೆ 272ರನ್‌ ಗೆಲುವು.

ಡೈಮಂಡ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 307 (ಎಂ.ಸರ್ವೇಶ್‌ ರಾಜು 81, ಎಂ.ವಿ.ಶ್ರೇಯಸ್‌ 120; ರಾಹುಲ್‌ 62ಕ್ಕೆ3). ಬ್ಲೇಜ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 213 (ಸುಧೀರ್‌ 46; ಕಿರಣ್‌ 39ಕ್ಕೆ3). ಫಲಿತಾಂಶ: ಡೈಮಂಡ್‌ ಕ್ಲಬ್‌ಗೆ 94ರನ್‌ ಜಯ.

ADVERTISEMENT

ಗಾರ್ಫೀಲ್ಡ್‌ ಕ್ರಿಕೆಟರ್ಸ್‌: 34.5 ಓವರ್‌ಗಳಲ್ಲಿ 158 (ಸುದರ್ಶನ್‌ 37; ರವಿ 32ಕ್ಕೆ3, ಎಂ.ಜೆ.ವಿವೇಕಾನಂದ 32ಕ್ಕೆ3). ಯುವಕ ಸಂಘ ಕ್ಲಬ್‌: 21.5 ಓವರ್‌ಗಳಲ್ಲಿ 124 (ಎಚ್‌.ಎಸ್‌.ರವಿ 50; ಆನಂದ್‌ 40ಕ್ಕೆ6, ಕದಿರ್‌ ವೇಲು 6ಕ್ಕೆ2). ಫಲಿತಾಂಶ: ಗಾರ್ಫೀಲ್ಡ್‌ ಕ್ರಿಕೆಟರ್ಸ್‌ಗೆ 34ರನ್‌ ಗೆಲುವು.

ಫ್ರೆಂಡ್ಸ್‌ ಕ್ಲಬ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 189 (ರಾಮಮೂರ್ತಿ 63, ಕಿಶೋರ್ 33; ಆರ್ಯನ್‌ ರಾಯ್‌ 23ಕ್ಕೆ3, ಆಸೀಫ್‌ ‍ಪಾಷಾ 46ಕ್ಕೆ3). ನ್ಯೂ ನ್ಯಾಷನಲ್‌ ಕ್ಲಬ್‌: 35.2 ಓವರ್‌ಗಳಲ್ಲಿ 7 ವಿಕೆಟ್‌ಗೆ 191 (ಆಫ್ರೋಜ್‌ ಪಾಷಾ 63, ಆರ್ಯನ್‌ ರಾಯ್‌ 64; ಕಿಶೋರ್‌ 27ಕ್ಕೆ4). ಫಲಿತಾಂಶ: ನ್ಯೂ ನ್ಯಾಷನಲ್‌ ಕ್ಲಬ್‌ಗೆ 3 ವಿಕೆಟ್‌ ಜಯ.

ಬೆಂಗಳೂರು ಯುನೈಟೆಡ್‌ ಕ್ಲಬ್‌ (2): 34.5 ಓವರ್‌ಗಳಲ್ಲಿ 8 ವಿಕೆಟ್‌ಗೆ 175 (ಕೇತಜ್‌ 80; ಬಿ.ಎಂ.ಉಲ್ಲಾಸ್‌ 32ಕ್ಕೆ4, ಲಿಖಿತ್‌ 19ಕ್ಕೆ2). ಕ್ಯಾರವಾನ್‌ ಕ್ರಿಕೆಟರ್ಸ್‌: 25.5 ಓವರ್‌ಗಳಲ್ಲಿ 7 ವಿಕೆಟ್‌ಗೆ 179. ಫಲಿತಾಂಶ: ಕ್ಯಾರವಾನ್‌ ಕ್ರಿಕೆಟರ್ಸ್‌ಗೆ 3 ವಿಕೆಟ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.