ADVERTISEMENT

ಮಯಂಕ್ ಮನಮೋಹಕ ಶತಕ: ಭಾರತ ‘ಬಿ’ ತಂಡಕ್ಕೆಜಯ

ಗಿರೀಶದೊಡ್ಡಮನಿ
Published 25 ಆಗಸ್ಟ್ 2018, 17:28 IST
Last Updated 25 ಆಗಸ್ಟ್ 2018, 17:28 IST
ಮಯಂಕ್ ಅಗರವಾಲ್ ಬ್ಯಾಟಿಂಗ್ ವೈಖರಿ -ಪ್ರಜಾವಾಣಿ ಚಿತ್ರ / ರಂಜು ಪಿ
ಮಯಂಕ್ ಅಗರವಾಲ್ ಬ್ಯಾಟಿಂಗ್ ವೈಖರಿ -ಪ್ರಜಾವಾಣಿ ಚಿತ್ರ / ರಂಜು ಪಿ   

ಬೆಂಗಳೂರು: ಮಯಂಕ್ ಅಗರವಾಲ್ ಖಾತೆಗೆ ಶನಿವಾರ ಮತ್ತೊಂದು ಶತಕ ಸೇರ್ಪಡೆಯಾಯಿತು. ಕಳೆದ ಒಂದು ವರ್ಷದಿಂದ ಎಲ್ಲ ಮಾದರಿಗಳ ಕ್ರಿಕೆಟ್‌ನಲ್ಲಿ ರನ್‌ಗಳ ಹೊಳೆ ಹರಿಸುತ್ತಿರುವ ಮಯಂಕ್‌ ನತ್ತ ಚಿತ್ತ ಹರಿಸದ ರಾಷ್ಟ್ರೀಯ ಆಯ್ಕೆಗಾರರಿಗೆ ತಿರುಗೇಟು ನೀಡುವಂತಹ ಆಟ ಅವರಿಂದ ಮೂಡಿ ಬಂದಿತು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಚತುಷ್ಕೋನ ಕ್ರಿಕೆಟ್ ಸರಣಿಯ ಏಕದಿನ ಪಂದ್ಯದಲ್ಲಿ ಮಯಂಕ್ ಆಟದ ಬಲದಿಂದ ಭಾರತ ‘ಬಿ’ ತಂಡವು 7 ವಿಕೆಟ್‌ಗಳಿಂದ ಭಾರತ ‘ಎ’ ವಿರುದ್ಧ ಜಯಿಸಿತು. ಎರಡನೇ ಪಂದ್ಯ ಗೆದ್ದಿರುವ ಬಿ ತಂಡದ ಫೈನಲ್ ಹಾದಿಯು ಸುಗಮವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ಎ ತಂಡವು 49 ಓವರ್‌ಗಳಲ್ಲಿ 217 ರನ್‌ ಗಳಿಸಿತು. ಮಧ್ಯಮವೇಗಿ ಪ್ರಸಿದ್ಧ ಕೃಷ್ಣ ( 50ಕ್ಕೆ4) ಅವರ ಪರಿಣಾಮಕಾರಿ ದಾಳಿಯಿಂದಾಗಿ ಎ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.

ADVERTISEMENT

ಗುರಿ ಬೆನ್ನತ್ತಿದ ಬಿ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ (124; 114 ಎಸೆತ, 14, 3ಸಿಕ್ಸರ್) ಮತ್ತು ಇಶಾನ್ ಕಿಶನ್ (25; 37ಎಸೆತ, 3ಬೌಂಡರಿ) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ ಜೊತೆಯಾಟದಲ್ಲಿ 50 ರನ್‌ ಸೇರಿಸಿದರು. 11ನೇ ಓವರ್‌ನಲ್ಲಿ ಎಡಗೈ ಮಧ್ಯಮವೇಗಿ ಖಲೀಲ್ ಎಸೆತದಲ್ಲಿ ಇಶಾನ್ ಔಟಾದರು.

ಮಯಂಕ್ ಜೊತೆಗೂಡಿದ ಶುಭಮನ್ ಗಿಲ್ ಎದುರಾಳಿ ಬೌಲರ್‌ಗಳನ್ನು ಚೆನ್ನಾಗಿ ಕಾಡಿದರು. ಎರಡನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ ಸೇರಿ 97 ರನ್‌ಗಳನ್ನು ಪೇರಿಸಿದರು. ಚೆಂಡು ಹೆಚ್ಚು ಎತ್ತರಕ್ಕೆ ಪುಟಿಯದ ಪಿಚ್‌ನಲ್ಲಿ ಮಯಂಕ್ ಫೀಲ್ಡರ್‌ಗಳ ಗ್ಯಾಪ್‌ನಲ್ಲಿ ಚೆಂಡನ್ನು ಬೌಂಡರಿಗೆ ಕಳಿಸಿದರು. ಮೂರು ಸೊಗಸಾದ ಸಿಕ್ಸರ್‌ಗಳನ್ನೂ ಸಿಡಿಸಿದರು.

102 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದರು. 98 ರನ್‌ಗಳಾಗಿದ್ದಾಗ ಸಿಕ್ಸರ್‌ ಸಿಡಿಸಿ ಸಂಭ್ರಮಿಸಿದರು.

29ನೇ ಓವರ್‌ನಲ್ಲಿ ಗಿಲ್ ಔಟಾದರು. ಮಯಂಕ್ ಜೊತೆಗೂಡಿದ ಮನೀಷ್ ಪಾಂಡೆ ತಮ್ಮ ಎಂದಿನ ಚುರುಕಿನ ಆಟವಾಡಲಿಲ್ಲ. ಬದಲಿಗೆ ತಾಳ್ಮೆಯಿಂದ ಮಯಂಕ್ ಆಟಕ್ಕೆ ಅನುವು ಮಾಡಿಕೊಟ್ಟರು. ಇಬ್ಬರೂ ಮೂರನೇ ವಿಕೆಟ್‌ಗೆ 56 ರನ್‌ ಸೇರಿಸಿ, ತಂಡದ ಗೆಲುವನ್ನು ಕಚಿತಪಡಿಸಿದರು. ಆದರೆ ಗೆಲುವಿಗೆ 14 ರನ್‌ಗಳು ಬೇಕಾದಾಗ ಮಯಂಕ್ ಔಟಾದರು. ಮನೀಷ್ ತಂಡವನ್ನು ವಿಜಯದ ಗಡಿ ಮುಟ್ಟಿಸಿದರು.

ಸ್ಕೋರ್

ಭಾರತ ‘ಎ’

217 (39 ಓವರ್‌ಗಳಲ್ಲಿ)

ಆರ್. ಸಮರ್ಥ್ ಎಲ್‌ಬಿಡಬ್ಲ್ಯು ಬಿ ಪ್ರಸಿದ್ಧ ಕೃಷ್ಣ 00

ಸೂರ್ಯಕುಮಾರ್ ಯಾದವ್ ಸಿ ದೀಪಕ್ ಹೂಡಾ ಬಿ ಪ್ರಸಿದ್ಧ ಕೃಷ್ಣ 20

ಅಂಬಟಿ ರಾಯುಡು ಬಿ ಶ್ರೇಯಸ್ ಗೋಪಾಲ್ 48

ನಿತೀಶ್ ರಾಣಾ ರನ್‌ಔಟ್ (ಮನೀಷ್ ಪಾಂಡೆ) 09

ಕೃಣಾಲ್ ಪಾಂಡ್ಯ ಎಲ್‌ಬಿಡಬ್ಲ್ಯು ಬಿ ದೀಪಕ್ ಹೂಡಾ 18

ಸಂಜು ಸ್ಯಾಮ್ಸನ್ ಸಿ ಕೇದಾರ್ ಜಾಧವ್ ಬಿ ಶ್ರೇಯಸ್ ಗೋಪಾಲ್ 32

ಕೃಷ್ಣಪ್ಪ ಗೌತಮ್ ಸಿ ಪ್ರಸಿದ್ಧಕೃಷ್ಣ ಬಿ ಧರ್ಮೇಂದ್ರಸಿಂಹ ಜಡೇಜ 35

ದೀಪಕ್ ಚಹಾರ್ ಸಿ ಮನೀಷ್ ಪಾಂಡೆ ಬಿ ಪ್ರಸಿದ್ಧಕೃಷ್ಣ 12

ಮೊಹಮ್ಮದ್ ಸಿರಾಜ್ ರನ್‌ಔಟ್ (ಇಶಾನ್ ಕಿಶನ್) 11

ಖಲೀಲ್ ಅಹಮದ್ ಔಟಾಗದೆ 00

ಇತರೆ: 21 (ಲೆಗ್‌ಬೈ 6, ವೈಡ್ 13, ನೋಬಾಲ್ 02)

ವಿಕೆಟ್ ಪತನ: 1–2 (ಸಮರ್ಥ್; 1.3), 2–21 (ಸೂರ್ಯಕುಮಾರ್; 3.5), 3–45 (ಅಯ್ಯರ್; 10.3), 4–86 (ರಾಣಾ; 19.1), 5–116 (ರಾಯುಡು;18.2), 6–135 (ಕೃಣಾಲ್; 34.2), 7–180 (ಗೌತಮ್: 43.2), 8–194 (ಸಂಜು; 46.2), 9–217 (ಚಾಹರ್; 48.5), 10–217 (ಸಿರಾಜ್; 49).

ಬೌಲಿಂಗ್

ಸಿದ್ಧಾರ್ಥ್ ಕೌಲ್ 7–1–40–0, ಪ್ರಸಿದ್ಧಕೃಷ್ಣ 8–0–50–4, ನವದೀಪ್ ಸೈನಿ 9–1–32–0, ಶ್ರೇಯಸ್ ಗೋಪಾಲ್ 10–1–38–2, ಧರ್ಮೇಂದ್ರಸಿಂಹ ಜಡೇಜಾ 10–1–25–1, ದೀಪಕ್ ಹೂಡಾ 5–1–26–1

ಭಾರತ ‘ಬಿ’

3ಕ್ಕೆ 218 (41.1ಓವರ್‌ಗಳಲ್ಲಿ)

ಮಯಂಕ್ ಅಗರವಾಲ್ ಸಿ ಕೃಣಾಲ್ ಪಾಂಡ್ಯ ಬಿ ಖಲೀಲ್ ಅಹಮದ್ 124

ಇಶಾನ್ ಕಿಶನ್ ಸಿ ಸಂಜು ಸ್ಯಾಮ್ಸನ್ ಬಿ ಖಲೀಲ್ ಅಹಮದ್ 25

ಶುಭಮನ್ ಗಿಲ್ ಸಿ ಸಂಜು ಸ್ಯಾಮ್ನನ್ ಬಿ ದೀಪಕ್ ಚಾಹರ್ 42

ಮನೀಷ್ ಪಾಂಡೆ ಔಟಾಗದೆ 21

ಕೇದಾರ್ ಜಾಧವ್ ಔಟಾಗದೆ 02

ಇತರೆ: 4 (ಲೆಗ್‌ಬೈ 1, ವೈಡ್ 3)

ವಿಕೆಟ್ ಪತನ: 1–50 (ಇಶಾನ್; 10.4), 2–147 (ಗಿಲ್; 28.6), 3–204 (ಮಯಂಕ್; 38.4)

ಬೌಲಿಂಗ್

ದೀಪಕ್ ಚಾಹರ್ 7–0–38–1, ಖಲೀಲ್ ಅಹಮದ್ 10–2–33–2, ಮೊಹಮ್ಮದ್ ಸಿರಾಜ್ 10–0–63–0, ಕೃಣಾಲ್ ಪಾಂಡ್ಯ 8–0–42–0, ನಿತೀಶ್ ರಾಣಾ 1–0–2–0, ಕೃಷ್ಣಪ್ಪ ಗೌತಮ್ 5–0–35–0, ಶ್ರೆಯಸ್ ಅಯ್ಯರ್ 0.1–0–4–0.

ಫಲಿತಾಂಶ: ಭಾರತ ‘ಬಿ’ ತಂಡಕ್ಕೆ 7 ವಿಕೆಟ್‌ಗಳ ಜಯ.

ಪಂದ್ಯಶ್ರೇಷ್ಠ: ಮಯಂಕ್ ಅಗರವಾಲ್

ಮುಂದಿನ ಪಂದ್ಯಗಳು: ಆಗಸ್ಟ್‌ 27

ಭಾರತ ಎ – ದಕ್ಷಿಣ ಆಫ್ರಿಕಾ ಎ

ಭಾರತ ಬಿ –ಆಸ್ಟ್ರೇಲಿಯಾ ಎ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.