ADVERTISEMENT

ವಿಮಾ ಸಂಸ್ಥೆ ಮೇಲೆ ಸ್ಟಾರ್ಕ್‌ ಮೊಕದ್ದಮೆ

ಪಿಟಿಐ
Published 9 ಏಪ್ರಿಲ್ 2019, 17:58 IST
Last Updated 9 ಏಪ್ರಿಲ್ 2019, 17:58 IST
ಮಿಷೆಲ್ ಸ್ಟಾರ್ಕ್
ಮಿಷೆಲ್ ಸ್ಟಾರ್ಕ್   

ಮೆಲ್ಬರ್ನ್: ಆಸ್ಟ್ರೇಲಿಯಾ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ ಅವರು ಪರಿಹಾರ ಕೋರಿ ವಿಮಾ ಸಂಸ್ಥೆಯ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ₹ 10 ಕೋಟಿ ಪರಿಹಾರ ಕೋರಿದ್ದಾರೆ.

ಹೋದ ವರ್ಷ ಅವರು ಐಪಿಎಲ್‌ ಟೂರ್ನಿಯ ಕೋಲ್ಕತ್ತ ನೈಟ್ ರೈಡರ್ಸ್‌ ತಂಡದಲ್ಲಿದ್ದರು. ಆದರೆ, ಟೂರ್ನಿಗೂ ಮುನ್ನ ಮೀನಖಂಡಕ್ಕೆ ಗಾಯವಾಗಿತ್ತು. ಅದರಿಂದ ಅವರು ವಿಶ್ರಾಂತಿ ಪಡೆದಿದ್ದರು.

ಐಪಿಎಲ್ ಆಡುವುದು ತಪ್ಪಿದರೆ ಪರಿಹಾರ ನೀಡುವಂತಹ ಪಾಲಿಸಿಯನ್ನು ಅವರು ವಿಮಾ ಸಂಸ್ಥೆಯಿಂದ ಖರೀದಿಸಿದ್ದರು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ ವರದಿ ಮಾಡಿದೆ.

ADVERTISEMENT

‘2018ರ ಫೆಬ್ರುವರಿ 27 ರಿಂದ ಮಾರ್ಚ್ 31ರವರೆಗಿನ ಅವಧಿಗೆ ₹ 68.54 ಲಕ್ಷ ಕಂತು ಪಾವತಿಸಿ ವಿಮೆ ಪಡೆದಿದ್ದರು. ಮಾರ್ಚ್ 10ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಅವರು ತಮ್ಮ ಬಲಗಾಲಿನ ಮೀನಖಂಡದ ನೋವು ಇರುವುದಾಗಿ ತಂಡಕ್ಕೆ ತಿಳಿಸಿದ್ದರು. ಬೂಟು ಗುರುತುಗಳಿಂದಾಗಿ ಪಿಚ್‌ ಸಮತಟ್ಟಾಗಿರಲಿಲ್ಲ. ಆದ್ದರಿಂದ ಬೌಲಿಂಗ್ ಮಾಡುವಾಗಲೇ ಮೀನಖಂಡಕ್ಕೆ ಗಾಯವಾಗಿದೆಯೆಂದು ಸ್ಟಾರ್ಕ್‌ ಪ್ರತಿಪಾದಿಸಿದ್ದರು’ ಎಂದು ವರದಿ ತಿಳಿಸಿದೆ.

ಆ ವರ್ಷದ ಐಪಿಎಲ್ ಟೂರ್ನಿಯಲ್ಲಿ ಅವರು ₹ 9.40 ಕೋಟಿ ಮೌಲ್ಯ ಪಡೆದಿದ್ದರು. ಆದರೆ ಟೂರ್ನಿಯಲ್ಲಿ ಆಡದ ಕಾರಣ ಹಣ ಲಭಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.