ADVERTISEMENT

ತವರಿಗೆ ಮರಳಿದ ಬೆಹ್ರೆನ್‌ಡೊರ್ಫ್‌

ಪಿಟಿಐ
Published 29 ಏಪ್ರಿಲ್ 2019, 15:39 IST
Last Updated 29 ಏಪ್ರಿಲ್ 2019, 15:39 IST
ಜೇಸನ್‌ ಬೆಹ್ರೆನ್‌ಡೊರ್ಫ್‌
ಜೇಸನ್‌ ಬೆಹ್ರೆನ್‌ಡೊರ್ಫ್‌   

ಮುಂಬೈ: ಮುಂಬೈ ಇಂಡಿಯನ್ಸ್‌ ತಂಡದ ವೇಗದ ಬೌಲರ್‌ ಜೇಸನ್‌ ಬೆಹ್ರೆನ್‌ಡೊರ್ಫ್‌ ಮುಂದಿನ ಐಪಿಎಲ್‌ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ವಿಶ್ವಕಪ್‌ ಟೂರ್ನಿಗೆ ಪ್ರಕಟಿಸಲಾಗಿರುವ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಗಳಿಸಿರುವ ಅವರು ರಾಷ್ಟ್ರೀಯ ಶಿಬಿರದಲ್ಲಿ ಪಾಲ್ಗೊಳ್ಳುವ ಸಲುವಾಗಿ ತವರಿಗೆ ಮರಳಿದ್ದಾರೆ.

‘ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ ಕ್ಷಣಗಳು ಅವಿಸ್ಮರಣೀಯ. ಈ ಬಾರಿಯ ಲೀಗ್‌ನಿಂದ ನಿರ್ಗಮಿಸುವ ಸಮಯ ಬಂದಿದೆ. ತಂಡವು ಫೈನಲ್‌ ಪ್ರವೇಶಿಸುವುದನ್ನು ಎದುರು ನೋಡುತ್ತಿದ್ದೇನೆ. ಎಲ್ಲರೂ ಚೆನ್ನಾಗಿ ಆಡಿ. ಮುಂದಿನ ವರ್ಷ ಮತ್ತೆ ಬರುತ್ತೇನೆ’ ಎಂದು ಬೆಹ್ರೆನ್‌ಡೊರ್ಫ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

ಈ ಸಲ ಐದು ಪಂದ್ಯಗಳನ್ನು ಆಡಿದ್ದ ಬೆಹ್ರೆನ್‌ಡೊರ್ಫ್‌, 165ರನ್‌ ನೀಡಿ ಐದು ವಿಕೆಟ್‌ ಕಬಳಿಸಿದ್ದರು.

‘ಒಳ್ಳೆಯದಾಗಲಿ ಜೇಸನ್‌. ವಿಶ್ವಕಪ್‌ನಲ್ಲಿ ಚೆನ್ನಾಗಿ ಆಡಿ. ನೀವು ಮತ್ತೆ ತಂಡದಲ್ಲಿ ಆಡುವ ಸಮಯಕ್ಕಾಗಿ ಎಲ್ಲರೂ ಕಾಯುತ್ತೇವೆ’ ಎಂದು ಮುಂಬೈ ಇಂಡಿಯನ್ಸ್‌ ಟ್ವೀಟ್‌ ಮಾಡಿದೆ.

ಆಸ್ಟ್ರೇಲಿಯಾ ತಂಡದ ರಾಷ್ಟ್ರೀಯ ಶಿಬಿರ ಮೇ 2ರಂದು ಆರಂಭವಾಗಲಿದೆ. ರಾಜಸ್ಥಾನ್‌ ರಾಯಲ್ಸ್‌ ತಂಡದ ಸ್ಟೀವ್‌ ಸ್ಮಿತ್‌, ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಡೇವಿಡ್‌ ವಾರ್ನರ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿರುವ ಮಾರ್ಕಸ್‌ ಸ್ಟೊಯಿನಿಸ್‌ ಅವರೂ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.