ADVERTISEMENT

ನ್ಯೂಜಿಲೆಂಡ್‌ಗೆ ವಿಲಿಯಮ್ಸನ್‌ ಆಸರೆ

ರಾಯಿಟರ್ಸ್
Published 3 ಡಿಸೆಂಬರ್ 2018, 16:10 IST
Last Updated 3 ಡಿಸೆಂಬರ್ 2018, 16:10 IST

ಅಬುಧಾಬಿ: ನಾಯಕ ಕೇನ್‌ ವಿಲಿಯಮ್ಸನ್‌ (89; 176ಎ, 7ಬೌಂ) ಅವರ ಅರ್ಧಶತಕದ ಬಲದಿಂದ ನ್ಯೂಜಿಲೆಂಡ್‌ ತಂಡ ಪಾಕಿಸ್ತಾನ ಎದುರಿನ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಅಪಾಯದಿಂದ ಪಾರಾಗಿದೆ.

ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ಸೋಮವಾರ ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ ನಾಡಿನ ತಂಡ ಮೊದಲ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 7 ವಿಕೆಟ್‌ಗೆ 229ರನ್‌ ಕಲೆಹಾಕಿದೆ.

ಬ್ಯಾಟಿಂಗ್‌ ಆರಂಭಿಸಿದ ನ್ಯೂಜಿಲೆಂಡ್‌ 72ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಈ ಹಂತದಲ್ಲಿ ಕೇನ್‌ ಮತ್ತು ಬಿ.ಜೆ.ವಾಟ್ಲಿಂಗ್‌ (ಬ್ಯಾಟಿಂಗ್‌ 42; 180ಎ, 1ಬೌಂ) ಸುಂದರ ಇನಿಂಗ್ಸ್‌ ಕಟ್ಟಿದರು. ಈ ಜೋಡಿ ಐದನೇ ವಿಕೆಟ್‌ ಪಾಲುದಾರಿಕೆಯಲ್ಲಿ 104ರನ್‌ ಗಳಿಸಿ ತಂಡದ ಮೇಲೆ ಆವರಿಸಿದ್ದ ಆತಂಕದ ಕಾರ್ಮೋಡವನ್ನು ದೂರ ಸರಿಸಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: ಮೊದಲ ಇನಿಂಗ್ಸ್‌, 90 ಓವರ್‌ಗಳಲ್ಲಿ 7 ವಿಕೆಟ್‌ಗೆ 229 (ಜೀತ್‌ ರಾವಲ್‌ 45, ಕೇನ್‌ ವಿಲಿಯಮ್ಸನ್‌ 89, ಬಿ.ಜೆ.ವಾಟ್ಲಿಂಗ್‌ ಬ್ಯಾಟಿಂಗ್‌ 42, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 20, ವಿಲಿಯಮ್‌ ಸೋಮರ್‌ವಿಲ್ಲೆ ಬ್ಯಾಟಿಂಗ್‌12; ಹಸನ್‌ ಅಲಿ 46ಕ್ಕೆ1, ಶಾಹೀನ್‌ ಅಫ್ರಿದಿ 43ಕ್ಕೆ1, ಯಾಸಿರ್‌ ಶಾ 62ಕ್ಕೆ3, ಬಿಲಾಲ್‌ ಆಸಿಫ್‌ 57ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.