ADVERTISEMENT

PHOTOS: RCB vs RR- ಪರಿಸರಕ್ಕಾಗಿ ಹಸಿರು ಜರ್ಸಿಯಲ್ಲಿ ಮಿಂಚಿದ ಬೆಂಗಳೂರು ಬಾಯ್ಸ್

ಇಂದು ಜೈಪುರದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಆರ್‌ಸಿಬಿ ತಂಡ ಪರಿಸರ ಉಳಿಸಿ ಎಂಬ ಅಭಿಯಾನದ ಅಂಗವಾಗಿ ಹಸಿರು ಜರ್ಸಿಯಲ್ಲಿ ಆಟ ಆಡಿ ಪರಿಸರ ಪ್ರಿಯರ ಗಮನ ಸೆಳೆಯಿತು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 14:02 IST
Last Updated 13 ಏಪ್ರಿಲ್ 2025, 14:02 IST
<div class="paragraphs"><p>ಇಂದು ಜೈಪುರದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಆರ್‌ಸಿಬಿ ತಂಡ ಪರಿಸರ ಉಳಿಸಿ ಎಂಬ ಅಭಿಯಾನದ ಅಂಗವಾಗಿ ಹಸಿರು ಜರ್ಸಿಯಲ್ಲಿ ಆಟ ಆಡಿ ಪರಿಸರ ಪ್ರಿಯರ ಗಮನ ಸೆಳೆಯಿತು</p></div>

ಇಂದು ಜೈಪುರದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಆರ್‌ಸಿಬಿ ತಂಡ ಪರಿಸರ ಉಳಿಸಿ ಎಂಬ ಅಭಿಯಾನದ ಅಂಗವಾಗಿ ಹಸಿರು ಜರ್ಸಿಯಲ್ಲಿ ಆಟ ಆಡಿ ಪರಿಸರ ಪ್ರಿಯರ ಗಮನ ಸೆಳೆಯಿತು

   

ಆರಂಭಿಕ ಬ್ಯಾಟರ್‌ಗಳಾದ ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ಗಳಿಸಿದ ಅಮೋಘ ಅರ್ಧಶತಕಗಳ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಆತಿಥೇಯ ರಾಜಸ್ಥಾನ ರಾಯಲ್ಸ್‌ (ಆರ್‌ಆರ್‌) ಎದುರು 9 ವಿಕೆಟ್‌ಗಳ ಜಯ ಸಾಧಿಸಿದೆ.

ಜೈಪುರದ ಸವಾಯಿ ಮಾನ್‌ ಸಿಂಗ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಆರ್‌, ನಿಗದಿತ 20 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 173 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಆರ್‌ಸಿಬಿ, ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಒಂದು ವಿಕೆಟ್‌ಗೆ 175 ರನ್‌ ಬಾರಿಸಿ ಜಯದ ನಗೆ ಬೀರಿತು.

ADVERTISEMENT


ಸ್ಪರ್ಧಾತ್ಮಕ ಮೊತ್ತದ ಬೆನ್ನತ್ತಿದ ಆರ್‌ಸಿಬಿಗೆ ಸಾಲ್ಟ್‌ ಮತ್ತು ಕೊಹ್ಲಿ ಜೋಡಿ ಮೊದಲ ವಿಕೆಟ್‌ಗೆ 8.4 ಓವರ್‌ಗಳಲ್ಲಿ 92 ರನ್‌ ಗಳಿಸಿತು. ಆರಂಭದಿಂದಲೇ ಬೀಸಾಟವಾಡಿದ ಸಾಲ್ಟ್‌, ಕೇವಲ 33 ಎಸೆತಗಳಲ್ಲಿ 65 ರನ್ ಬಾರಿಸಿದರು. ಅವರ ಚೆಂದದ ಇನಿಂಗ್ಸ್‌ನಲ್ಲಿ 6 ಸಿಕ್ಸ್‌ ಹಾಗೂ 5 ಬೌಂಡರಿಗಳಿದ್ದವು.


9ನೇ ಓವರ್‌ನಲ್ಲಿ ಕುಮಾರ್‌ ಕಾರ್ತಿಕೇಯ ಬೌಲಿಂಗ್‌ನಲ್ಲಿ ಸಾಲ್ಟ್‌ ಔಟಾದ ನಂತರ ಕೊಹ್ಲಿ ಗೇರ್‌ ಬದಲಿಸಿದರು. ದೇವದತ್ತ ಪಡಿಕ್ಕಲ್‌ ಆಟ ರಂಗೇರಿತು. ಇವರಿಬ್ಬರು ಮುರಿಯದ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 83 ರನ್‌ ಕಲೆಹಾಕಿತು.


45 ಎಸೆತಗಳನ್ನು ಎದುರಿಸಿದ ಕೊಹ್ಲಿ, 2 ಸಿಕ್ಸ್‌, 4 ಬೌಂಡರಿ ಸಹಿತ ಅಜೇಯ 62 ರನ್‌ ಗಳಿಸಿದರೆ, ಪಡಿಕ್ಕಲ್‌ 28 ಎಸೆತಗಳಲ್ಲಿ ಔಟಾಗದೆ 40 ರನ್‌ ಚಚ್ಚಿದರು. ಅವರ ಬ್ಯಾಟ್‌ನಿಂದ ಒಂದು ಸಿಕ್ಸ್‌ ಹಾಗೂ ಐದು ಬೌಂಡರಿ ಬಂದವು.


ಈ ಗೆಲುವಿನೊಂದಿಗೆ ಆರ್‌ಸಿಬಿ ತಂಡ ಪಾಯಿಂಟ್‌ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದರೆ, ರಾಯಲ್ಸ್‌ 7ನೇ ಸ್ಥಾನದಲ್ಲೇ ಉಳಿಯಿತು. ಉಭಯ ತಂಡಗಳು ಟೂರ್ನಿಯಲ್ಲಿ ತಲಾ ಆರು ಪಂದ್ಯಗಳನ್ನು ಆಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.