ಬೆಂಗಳೂರು: ತೇಜಸ್ ಎಸ್. ಭಟ್ (4-0-15-3) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಪೂರ್ಣವಿಕಾಸ ವಿದ್ಯಾಲಯದ (ಪಿವಿವಿ) 14 ವರ್ಷದೊಳಗಿನವರ ತಂಡವು ಎಂಟನೇ ಆವೃತ್ತಿಯ ಸೇವ್ ವಾಟರ್ ಕಪ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡಿತು.
ನಗರದ ಗೋಪಾಲನ್ ಕ್ರಿಕೆಟ್ ಮೈದಾನದಲ್ಲಿ ಶನಿವಾರ ನಡೆದ ಟೂರ್ನಿಯ ಫೈನಲ್‌ನಲ್ಲಿ ಪಿವಿವಿ ತಂಡವು ಎಂಟು ವಿಕೆಟ್‌ಗಳಿಂದ ಕವರ್ ಡ್ರೈವ್ ಅಕಾಡೆಮಿ ತಂಡವನ್ನು ಸೋಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಕವರ್ ಡ್ರೈವ್ ತಂಡವು 18.2 ಓವರ್‌ಗಳಲ್ಲಿ 79 ರನ್ ಗಳಿಸಿತು. ಈ ಗುರಿಯನ್ನು ಪಿವಿವಿ ತಂಡವು 10.5 ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 80 ರನ್ ಗಳಿಸಿ ಜಯಸಾಧಿಸಿತು. ಮೂರು ವಿಕೆಟ್ ಪಡೆದ ತೇಜಸ್ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.