ADVERTISEMENT

ದಕ್ಷಿಣ ಆಫ್ರಿಕಾ ಟೆಸ್ಟ್ ತಂಡದ ಇಬ್ಬರು ಆಟಗಾರರಿಗೆ ಕೋವಿಡ್-19 ಸೋಂಕು ದೃಢ

ಏಜೆನ್ಸೀಸ್
Published 19 ಡಿಸೆಂಬರ್ 2020, 4:31 IST
Last Updated 19 ಡಿಸೆಂಬರ್ 2020, 4:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೆಂಚುರಿಯನ್: ಇತ್ತೀಚೆಗಷ್ಟೇ ದೇಶದಲ್ಲಿ ಕೊರೊನಾವೈರಸ್ ಎರಡನೇ ಅಲೆ ಎಬ್ಬಿದೆ ಎಂಬುದನ್ನು ದಕ್ಷಿಣ ಆಫ್ರಿಕಾ ಸರ್ಕಾರ ಘೋಷಿಸಿತ್ತು. ಈಗ ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್ ತಂಡದ ಇಬ್ಬರು ಆಟಗಾರರಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.

ಈ ಬಗ್ಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾ ಹೇಳಿಕೆ ನೀಡಿದ್ದು, ಕೊರೊನಾವೈರಸ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಇಬ್ಬರು ಆಟಗಾರರನ್ನು ಕೈಬಿಡಲಾಗಿದೆ ಎಂದಿದೆ.

ಕೋವಿಡ್-19 ಸೋಂಕು ದೃಢಪಟ್ಟಿರುವ ಆಟಗಾರರನ್ನು ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದೆ. ಬುಧವಾರ ಹಾಗೂ ಗುರುವಾರ ನಡೆಸಿದ ಕೊರೊನಾ ವೈದ್ಯಕೀಯ ಸೋಂಕು ಪರೀಕ್ಷೆಯಲ್ಲಿ ದೃಢಪಟ್ಟಿದೆ.

ADVERTISEMENT

ಈ ಆಟಗಾರರು ತಂಡದ ಇತರೆ ಆಟಗಾರರೊಂದಿಗೆ ನಿಕಟ ಸಂಪರ್ಕದಲ್ಲಿರಲಿಲ್ಲ ಎಂದು ಸಿಎಸ್‌ಎ ತಿಳಿಸಿದೆ.

ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ ಸೆಂಚುರಿಯನ್‌ನಲ್ಲಿ ಡಿಸೆಂಬರ್ 26ರಂದು ಆರಂಭವಾಗಲಿದೆ. ಇದರಂತೆ ದಕ್ಷಿಣ ಆಫ್ರಿಕಾ 17 ಸದಸ್ಯರ ತಂಡವನ್ನು ಘೋಷಿಸಿದೆ.

ದಕ್ಷಿಣ ಆಫ್ರಿಕಾ ತಂಡ ಇಂತಿದೆ: ಕ್ವಿಂಟನ್ ಡಿ ಕಾಕ್ (ನಾಯಕ, ವಿಕೆಟ್ ಕೀಪರ್), ತೆಂಬ ಬಾವುಮ, ಫಾಪ್ ಡು ಪ್ಲೆಸಿಸ್, ಡೀನ್ ಎಲ್ಗರ್, ಸರೆಲ್ ಎರ್ವಿ, ಬ್ಯೂರನ್ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರಮ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಎನ್ರಿಚ್ ನಾರ್ಜೆ, ಕೀಗನ್ ಪೀಟರ್ಸನ್, ಡ್ವೈನ್ ಪ್ರೆಟೆೋರಿಯಸ್, ಮಿಗಾಯಿಲ್ ಪ್ರೆಟೋರಿಯಸ್, ಲೂಥೋ ಸಿಪಮ್ಲಾ, ಗ್ಲೆಂಟನ್ ಸ್ಟೂರ್ಮನ್, ರಾಸ್ಸೀ ವಾನ್ ಡೆರ್ ದುಸ್ಸಾನ್, ರೇನಾರ್ಡ್ ವ್ಯಾನ್ ಟೊಂಡರ್ ಮತ್ತು ಕೈಲ್ ವೆರೆಯ್ನ್.

ಟೆಸ್ಟ್ ಸರಣಿ ವೇಳಾಪಟ್ಟಿ ಇಂತಿದೆ:
ಡಿ.26ರಿಂದ ಡಿ. 30: ಮೊದಲ ಟೆಸ್ಟ್, ಸೆಂಚುರಿಯನ್
ಜ.3ರಿಂದ ಜ. 7: ದ್ವಿತೀಯ ಟೆಸ್ಟ್, ಜೋಹಾನ್ಸ್‌ಬರ್ಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.