ADVERTISEMENT

ಕೋಚಿಂಗ್ ಮೂಲಕ ಕ್ರಿಕೆಟ್‌ ಚಟುವಟಿಕೆಗೆ ಜಯಸೂರ್ಯ

ಐಸಿಸಿಯಿಂದ ಎರಡು ವರ್ಷ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಶ್ರೀಲಂಕಾದ ಮಾಜಿ ನಾಯಕ

ಪಿಟಿಐ
Published 4 ಜೂನ್ 2021, 14:43 IST
Last Updated 4 ಜೂನ್ 2021, 14:43 IST
ಸನತ್ ಜಯಸೂರ್ಯ–ಪಿಟಿಐ ಚಿತ್ರ
ಸನತ್ ಜಯಸೂರ್ಯ–ಪಿಟಿಐ ಚಿತ್ರ   

ಮೆಲ್ಬರ್ನ್‌:ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ವಿಧಿಸಿದ್ದ ನಿಷೇಧ ಶಿಕ್ಷೆ ಮುಗಿಸಿರುವ ಶ್ರೀಲಂಕಾದ ದಿಗ್ಗಜ ಆಟಗಾರ ಸನತ್ ಜಯಸೂರ್ಯ ಅವರುಮೆಲ್ಬರ್ನ್‌ನ ಮಲ್‌ಗ್ರೇವ್ ತಂಡಕ್ಕೆ ತರಬೇತುದಾರರಾಗುವ ಮೂಲಕ ಕ್ರಿಕೆಟ್‌ ಚಟುವಟಿಕೆಗಳಿಗೆ ಮರಳಲು ಸಜ್ಜಾಗಿದ್ದಾರೆ.

2019ರ ಫೆಬ್ರುವರಿಯಲ್ಲಿ ಐಸಿಸಿಯ ಭ್ರಷ್ಟಾಚಾರ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಯಸೂರ್ಯ ಮೇಲೆಎರಡು ವರ್ಷಗಳ ಕಾಲ ನಿಷೇಧ ಹೇರಲಾಗಿತ್ತು.

‘51 ವರ್ಷದ ಜಯಸೂರ್ಯ ಅವರನ್ನು ಕೋಚ್ ಹುದ್ದೆ ವಹಿಸಿಕೊಳ್ಳುವಂತೆ ಶ್ರೀಲಂಕಾ ತಂಡದ ಮಾಜಿ ಆಟಗಾರ ತಿಲಕರತ್ನೆ ದಿಲ್‌ಶಾನ್ ಮನವೊಲಿಸಿದ್ದಾರೆ‘ ಎಂದು ‘ಹೆರಾಲ್ಡ್ ಸನ್’ ವರದಿ ಮಾಡಿದೆ.

ADVERTISEMENT

‘ದಿಲ್‌ಶಾನ್ ಅವರು ಜಯಸೂರ್ಯ ಅವರನ್ನು ಒಪ್ಪಿಸಿದ್ದಾರೆ. ಇದು ನಮಗೆ ಒದಗಿದ ಅದ್ಭುತ ಅವಕಾಶ‘ ಎಂದು ಮಲ್‌ಗ್ರೇವ್‌ ಕ್ಲಬ್ ಅಧ್ಯಕ್ಷ ಮಾಲಿನ್ ಪುಲ್ಲೆನಯೆಗಾಮ್ ಹೇಳಿದ್ದಾರೆ.

ದಿಲ್‌ಶಾನ್‌ ಹಾಗೂ ಶ್ರೀಲಂಕಾದ ಮತ್ತೊಬ್ಬ ಮಾಜಿ ಆಟಗಾರ ಉಪುಲ್ ತರಂಗ ಅವರು ಮಲ್‌ಗ್ರೇವ್ ತಂಡದ ಪರ ಆಡಲಿದ್ದಾರೆ.

ಜಯಸೂರ್ಯ ಅವರು ಶ್ರೀಲಂಕಾ ತಂಡದ ಪರ 445 ಏಕದಿನ ಮತ್ತು 110 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.