ADVERTISEMENT

ಶಕೀಬ್‌ಗೆ ಮೊದಲ ಸ್ಥಾನ

ಐಸಿಸಿ ಏಕದಿನ ಆಲ್‌ರೌಂಡರ್‌ ರ‍್ಯಾಂಕಿಂಗ್‌: ಅಗ್ರ 10ರಲ್ಲಿ ಭಾರತೀಯರಿಲ್ಲ

ಪಿಟಿಐ
Published 22 ಮೇ 2019, 18:17 IST
Last Updated 22 ಮೇ 2019, 18:17 IST
ಶಕೀಬ್‌ ಅಲ್‌ ಹಸನ್‌–ಎಎಫ್‌ಪಿ ಚಿತ್ರ
ಶಕೀಬ್‌ ಅಲ್‌ ಹಸನ್‌–ಎಎಫ್‌ಪಿ ಚಿತ್ರ   

ದುಬೈ: ರಶೀದ್‌ ಖಾನ್‌ ಅವರನ್ನು ಹಿಂದಿಕ್ಕಿದ ಬಾಂಗ್ಲಾದೇಶದ ಶಕೀಬ್‌ ಅಲ್ ಹಸನ್‌ ಅವರು ಐಸಿಸಿ ಆಲ್‌ರೌಂಡರ್‌ಗಳ ಕ್ರಮಾಂಕಪಟ್ಟಿಯಲ್ಲಿ ಬುಧವಾರ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ಅಗ್ರ 10 ಆಲ್‌ರೌಂಡರ್‌ಗಳ‍ಪಟ್ಟಿಯಲ್ಲಿ ಒಬ್ಬರೂ ಭಾರತೀಯರಿಲ್ಲದ್ದು ವಿಶೇಷ.

ಐರ್ಲೆಂಡ್‌ನಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಶಕೀಬ್‌ ಅವರು ಉತ್ತಮ ಪ್ರದರ್ಶನದಿಂದ ಗಮನ ಸೆಳೆದಿದ್ದರು. ಬಾಂಗ್ಲಾದೇಶ ತಂಡವು ಬಹುರಾಷ್ಟ್ರಗಳುಪಾಲ್ಗೊಂಡಿದ್ದ ಸರಣಿಯನ್ನು ಮೊದಲ ಬಾರಿ ಗೆದ್ದು ಸಂಭ್ರಮಿಸಿತ್ತು. ಸರಣಿಯ ಮೂರು ಪಂದ್ಯಗಳಲ್ಲಿ ಆಡಿದ್ದ ಶಕೀಬ್‌ ಅವರು 140 ರನ್‌ ಹಾಗೂ ಎರಡು ವಿಕೆಟ್‌ ಕೂಡ ಗಳಿಸಿದ್ದರು.

ಆಲ್‌ರೌಂಡರ್‌ಗಳ ಕ್ರಮಾಂಕ ಪಟ್ಟಿಯಲ್ಲಿ ರಶೀದ್‌ ಅವರು ಸದ್ಯ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಅಫ್ಗಾನಿಸ್ತಾನದ ಮೊಹಮ್ಮದ್‌ ನಬಿಗೆ ಮೂರನೇ ಸ್ಥಾನ ದಕ್ಕಿದೆ. ಪಾಕಿಸ್ತಾನ ಇಬ್ಬರು ಆಟಗಾರರು ಅಗ್ರ 10ರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಭಾರತದ ಕೇದಾರ್‌ ಜಾಧವ್‌ ಅವರು ದಕ್ಷಿಣ ಆಫ್ರಿಕಾದ ಆ್ಯಂಡಿಲೆ ಪೆಹ್ಲುಕ್ವಾಯೊ ಹಾಗೂ ಇಂಗ್ಲೆಂಡ್‌ನ ಮೊಯಿನ್‌ ಅಲಿ ಅವರೊಂದಿಗೆ ಜಂಟಿ 12ನೇ ಸ್ಥಾನದಲ್ಲಿದ್ದಾರೆ. ಹಾರ್ದಿಕ್‌ ಪಾಂಡ್ಯಾ 20ನೇ ಸ್ಥಾನ ಅಲಂಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.